ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಕ್ಷಗಾನ ವೇಷಧಾರಿ ಹಾಗೂ ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡದ ಅರ್ಥಧಾರಿ ಶಂಕರ ಬಿಲ್ಲವ, ಹೆಮ್ಮಾಡಿ ಇವರ ನಿರಂತರ ಸೇವೆಯನ್ನು ಗುರುತಿಸಿ ಗೊಂಬೆಯಾಟ ಅಕಾಡೆಮಿಯಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.
ವೃತ್ತಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಪ್ರವೃತ್ತಿಯಲ್ಲಿ ಯಕ್ಷಗಾನ ಹಾಗೂ ಗೊಂಬೆಯಾಟದ ಅರ್ಥಧಾರಿಯಾಗಿ ಎಲ್ಲರ ಗಮನ ಸೆಳೆದವರು.
ಸಭಾ ಕಾರ್ಯಕ್ರಮ ಶ್ರೀಮತಿ ದೇವಕಿ ಪ್ರಭು ತಲ್ಲೂರು ಇವರ ಪ್ರಾರ್ಥನೆಯಿಂದ ಪ್ರಾರಂಭವಾಯಿತು. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲರಾದ ಎಮ್. ರತ್ನಾಕರ್ ಪೈ ಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಭ್ಯುತ್ಥಾನ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಕೋಣಿ, ಶಿಕ್ಷಕರಾದ ನಾಗೇಶ್ ಶ್ಯಾನುಭಾಗ್, ಉದಯ ಭಂಡಾರ್ ಕಾರ್, ಗೊಂಬೆಯಾಟ ಕಲಾವಿದ ಮಂಜುನಾಥ ಮೈಪಾಡಿ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ಭಾಗವಹಿಸಿದ್ದರು.