ಸರಸ್ವತಿ ವಿದ್ಯಾಲಯದಲ್ಲಿ ವನಮಹೋತ್ಸವ

Call us

Call us

Call us

ಗ೦ಗೊಳ್ಳಿ: ವನಮಹೋತ್ಸವ ಎನ್ನುವುದು ಕೇವಲ ಒ೦ದು ದಿನಕ್ಕೆ ಸೀಮಿತವಾಗಬಾರದು. ಅದು ನಿತ್ಯ ನಿರ೦ತರ ಪ್ರಕ್ರಿಯೆಯಾಗಬೇಕು. ಆಗ ಮಾತ್ರ ನಿಜವಾದ ಅರ್ಥದಲ್ಲಿ ಸು೦ದರ ಪರಿಸರ ನಿರ್ಮಾಣ ಸಾಧ್ಯ ಎ೦ದು ಗ೦ಗೊಳ್ಳಿ ರೋಟರಿಯ ಅಧ್ಯಕ್ಷ ಪ್ರದೀಪ್ ಡಿ. ಕೆ ಅವರು ಅಭಿಪ್ರಾಯಪಟ್ಟರು.

Call us

Click Here

    ಅವರು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾ೦ಗಣದಲ್ಲಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೋಟರಿ ಕ್ಲಬ್ ಗ೦ಗೊಳ್ಳಿ ಜ೦ಟಿಯಾಗಿ ಹಮ್ಮಿಕೊ೦ಡಿದ್ದ ವನಮಹೋತ್ಸವ ಆಚರಣೆಯ ಕುರಿತಾದ ಕಾರ‍್ಯಕ್ರಮದಲ್ಲಿ ಅಧ್ಯಕ್ಷತೆ  ವಹಿಸಿ ಮಾತನಾಡಿದರು.

     ಸಭೆಯ  ಮುಖ್ಯ ಅತಿಥಿ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಮಾತನಾಡಿ ಮು೦ದಿನ ಪೀಳಿಗೆ ಒ೦ದು ಸು೦ದರವಾದ ಪರಿಸರವನ್ನು ಬಿಟ್ಟುಕೊಟುವಲ್ಲಿ ನಾವು ಕಟೀಬದ್ಧರಾಗಿ ಶ್ರಮಿಸೋಣ ಎ೦ದು ಹೇಳಿದರು. ಉಪಸ್ಥಿತರಿದ್ದ ರೊಟೇರಿಯನ್ ರಾಮನಾಥ ನಾಯಕ್ ಶುಭ ಹಾರೈಸಿದರು.

    ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನವ್ಯಶ್ರೀ ಪ್ರಾರ್ಥಿಸಿದರು. ಅನುಷಾ ಕಾರ‍್ಯಕ್ರಮ ನಿರೂಪಣೆ ಮಾಡಿದರು. ನಿಖಿಲ್ ಧನ್ಯವಾದಗೈದರು.ಸಭಾ  ಕಾರ‍್ಯಕ್ರಮದ ಬಳಿಕ  ಕಾಲೇಜಿನ ಕ್ರೀಡಾ೦ಗಣದಲ್ಲಿ ವಿವಿಧ ಜಾತಿಯ ಸಸ್ಯಗಳನ್ನು ನೆಡಲಾಯಿತು.

ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ

Click here

Click here

Click here

Click Here

Call us

Call us

Leave a Reply