ನ.30ಕ್ಕೆ ಕೋಟೇಶ್ವರದ ‘ಕೊಡಿ ಹಬ್ಬ’. ಉತ್ಸವಕ್ಕೆ ಅಡ್ಡಿಯಿಲ್ಲ, ಜನ ಸೇರಲು ಅವಕಾಶವಿಲ್ಲ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದ ರಥೋತ್ಸವ (ಕೊಡಿ ಹಬ್ಬ)ವನ್ನು ನ.30 ರಂದು ಆಚರಣೆ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಭಟ್ ಕೋಟಿಲಿಂಗೇಶ್ವರ ದೇವಾಲಯದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ತಿಳಿಸಿದರು.

Call us

Click Here

ಸರ್ಕಾರದ ಕೋವಿಡ್ ನಿಯಮಾವಳಿಗಳಿಗೆ ಅನುಗುಣವಾಗಿ ಪಾರಂಪರಿಕ ಧಾರ್ಮಿಕ ಆಚರಣೆಯೊಂದಿಗೆ ಸರಳ ರೀತಿಯಲ್ಲಿ ಆಚರಿಸಲು ದೇವಳದಲ್ಲಿ ನಡೆದ ಧಾರ್ಮಿಕ ಪರಿಷತ್ ಪ್ರತಿನಿಧಿಗಳ ನೇತೃತ್ವದ ಸಭೆಯಲ್ಲಿ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಯಿತು ಎಂದರು.

ಈ ಬಾರಿ ಕೊರೊನಾದಿಂದ ಧಾರ್ಮಿಕ ಕಾರ್ಯಕ್ರಮಗಳು ಸರಳವಾಗಿ ಆಚರಿಸುವ ಅನಿರ್ವಾಯತೆ ಒದಗಿದೆ. ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಉತ್ಸವ ಕೊಡಿ ಹಬ್ಬವನ್ನು ಕೂಡ ಧಾರ್ಮಿಕ ಪದ್ಧತಿ ಹಾಗೂ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ನಡೆಸಿಲು ತೀರ್ಮಾನಿಸಲಾಗಿದೆ ಎಂದರು.

ಸರ್ಕಾರ ಕೊರೊನಾ ಕಾರಣದಿಂದಾಗಿ ಜಾರಿಗೆ ತಂದಿರುವ ನಿಯಮಾವಳಿಗಳ ಅಡಿಯಲ್ಲಿಯೇ ಹಬ್ಬವನ್ನು ಆಚರಿಸುವ ತೀರ್ಮಾನ ಮಾಡಲಾಗಿದೆ. ದೇಗುಲದ ಪೂಜಾ ವಿಧಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಂತ್ರಿ ಪ್ರಸನ್ನಕುಮಾರ್ ಐತಾಳ್ ಹೇಳಿದರು.

ನ.23 ರಿಂದ 7 ದಿನ ವಿವಿಧ ಉತ್ಸವ ನಡೆಯಲಿದೆ. ತೆಂಕಿನಕಟ್ಟೆ, ಬಡಗಿನಕಟ್ಟೆ, ಮೂಡಿನಕಟ್ಟೆಗಳಲ್ಲಿ ಕಟ್ಟೆ ಪೂಜೆಗಳು ನಡೆಯಲಿದೆ. ನ.30 ರಂದು ಜಾತ್ರಾ ಮಹೋತ್ಸವ, ಮರು ದಿನ ಓಕುಳಿ ಉತ್ಸವ ನಡೆದ ನಂತರ ಅವಭೃತ ಸ್ನಾನ ನಡೆದು ಉತ್ಸವ ಮೂರ್ತಿ ದೇವಾಲಯದ ಒಳಗೆ ಪ್ರವೇಶಿಸುವುದರ ಮೂಲಕ ಉತ್ಸವಕ್ಕೆ ತೆರೆ ಬೀಳುತ್ತದೆ.

Click here

Click here

Click here

Click Here

Call us

Call us

ರಥೋತ್ಸವದಿಂದ ಸೀಮಿತ ಹಾಗೂ ಆಯ್ದ ವ್ಯಕ್ತಿಗಳಿಗೆ ಮಾತ್ರ ರಥ ಎಳೆಯಲು ಅವಕಾಶ ಕಲ್ಪಿಸಲಾಗಿದ್ದು ಅವರಿಗೆ ಗುರುತು ಚೀಟಿ ನೀಡಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಉತ್ಸವ ಸರಳ ರೀತಿಯಲ್ಲಿ ಆಚರಿಸಲು ತೀರ್ಮಾನಿಸಿರುವುದರಿಂದ ಜಾತ್ರಾ ಉತ್ಸವದ ಅವಧಿಯಲ್ಲಿ ದೇವಳದ ರಥಬೀದಿ ಹಾಗೂ ಪೇಟೆ ಭಾಗದಲ್ಲಿ ಯಾವುದೇ ಅಂಗಡಿ, ಮುಂಗಟ್ಟುಗಳು ಇರುವುದಿಲ್ಲ. ಜಾತ್ರಾ ಆಟದ ಪ್ರದರ್ಶನ ಸಹಿತ ಯಾವ ಅಂಗಡಿಗಳನ್ನು ತೆರೆಯಲು ಅವಕಾಶ ಇರುವುದಿಲ್ಲ ಎಂದು ಎಂದು ಸಭೆಯಲ್ಲಿ ತೀರ್ಮಾಣಕ್ಕೆ ಬರಲಾಗಿದೆ.

ಜಿಲ್ಲಾ ಧಾರ್ಮಿಕ ಸದಸ್ಯರಾದ ಸಾಣೂರ ಶ್ರೀರಾಮ್ ಭಟ್, ಹೆರ್ಗ ಹರಿಪ್ರಸಾದ್ ಭಟ್, ಬೈಂದೂರು ಪ್ರಣಯ್ ಕುಮಾರ್ ಶೆಟ್ಟಿ, ಹಂಗಾರ ಕಟ್ಟೆ ವಾಸುದೇವ ಸಭೆಯಲ್ಲಿ ಭಾಗವಹಿಸಿದ್ದರು.

ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಗಳಾದ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ವಕ್ವಾಡಿ ಪ್ರಭಾಕರ್ ಶೆಟ್ಟಿ. ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಗಣೇಶ್ ಶ್ರೀಯಾನ್. ನಿವೃತ್ತ ಉಪನ್ಯಾಸಕ ಪ್ರೊ.ಕೆ.ವಿ.ಕೆ ಐತಾಳ್ ಇದ್ದರು.

ಇದನ್ನೂ ಓದಿ:
ಜಾತ್ರೆ ವೇಳೆ ಕೋವಿಡ್ ನಿಯಮ ಪಾಲನೆ ಕಡ್ಡಾಯ: ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ – https://kundapraa.com/?p=42400

Leave a Reply