ಭಿಕ್ಷಾಟನೆಯ ಹಣದಲ್ಲಿ ಸಾಲಿಗ್ರಾಮದ ದೇವಳಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ ವೃದ್ಧೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಿಕ್ಷಾಟನೆಯಿಂದ ಬಂದ 1 ಲಕ್ಷ ರೂ. ಹಣವನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಿದ ವೃದ್ಧೆಯೋರ್ವರ ಸೇವಾ ಕೈಂಕರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ತಾಲ್ಲೂಕಿನ ಗಂಗೊಳ್ಳಿ ಬಳಿಯ ಕಂಚುಗೋಡು ಮೂಲದವರಾದ ಅಶ್ವಥ್ಥಮ್ಮ (80) ಈ ದೇಣಿಗೆ ನೀಡಿದ ಭಕ್ತೆ.

Call us

Click Here

ಉಡುಪಿ ಜಿಲ್ಲೆಯ ವಿವಿದೆಡೆ ಭಿಕ್ಷಾಟನೆ ಮಾಡಿ ಸಂಗ್ರಹಿಸುವ ಹಣವನ್ನು ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ದಾನವಾಗಿ ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ಈ ಹಿಂದೆ ಅವರು ಗಂಗೊಳ್ಳಿ ಸಮೀಪದ ಕಂಚಗೋಡು ದೇವಸ್ಥಾನಕ್ಕೆ 1.5 ಲಕ್ಷ ರೂ., ಪಂಪ ದೇವಸ್ಥಾನಕ್ಕೆ ಒಂದು ಲಕ್ಷ ರೂಪಾಯಿ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ 1.5 ಲಕ್ಷ ರೂಗಳನ್ನು ಕೂಡ ದೇಣಿಗೆ ನೀಡಿದ್ದರು.

ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನಕ್ಕೆ 1 ಲಕ್ಷ ರೂ. ದೇಣಿಗೆಯನ್ನು ಹಸ್ತಾಂತರಿಸುವ ಸಂದರ್ಭ ದೇವಾಲಯದ ಅರ್ಚಕ ವೇದಮೂರ್ತಿ ಜನಾರ್ದನ ಅಡಿಗ ಮತ್ತು ವ್ಯವಸ್ಥಾಪಕ ಕೆ. ನಾಗರಾಜ ಅವರು ದೇವರ ಪ್ರಸಾದ ನೀಡಿ ಗೌರವಿಸಿದರು.

ಅಶ್ವಥ್ಥಮ್ಮ ದೇಶಾದ್ಯಂತ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದು, ಈ ವರ್ಷ ಅಯ್ಯಪ್ಪ ಮಾಲೆ ಧರಿಸಿದ್ದಾರೆ. ಫೆಬ್ರವರಿ 9 ರಂದು ಸಾಲಿಗ್ರಾಮ ದೇವಸ್ಥಾನದಲ್ಲಿ ತೀರ್ಥಯಾತ್ರೆಗೆ ತಮ್ಮ ಇರುಮುಡಿಯನ್ನು ಕಟ್ಟಲಿದ್ದಾರೆ.

Click here

Click here

Click here

Click Here

Call us

Call us

Leave a Reply