ಬಾರ್ಕೂರು ಮಾಗಣಿ ಗುರಿಕಾರರು ಮತ್ತು ಸಹಮೊಕ್ತೇಸರರ ಸಮಾಗಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಲ್ಲಿ ಮಾಗಣಿ ಗುರಿಕಾರರು ಮತ್ತು ಸಹಮೊಕ್ತೇಸರರ ಚಿಂತನ ಮಂಥನ ಸಮಾಗಮ ಇತ್ತೀಚೆಗೆ ನಡೆಯಿತು.

Call us

Click Here

ದೇಗುಲದ ಆಡಳಿತ ಮೊಕ್ತೇಸರ ಡಾ. ಸಿ. ಜಯರಾಮ ಶೆಟ್ಟಿಗಾರ ಚೆರ್ಕಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಗಣಿ ಗುರಿಕಾರರು ಆಯಾ ಪ್ರದೇಶದ ಕುಟುಂಬಗಳ ಶೋಡಸ ಸಂಸಂಸ್ಕಾರಗಳ ಕಾರ್ಯಗಳಲ್ಲಿ ಹಾಜರಿದ್ದು, ಅಗತ್ಯ ಸಹಕಾರ ನೀಡುವ ಬಗ್ಗೆ ಚಿಂತನೆ ನಡೆಸಲಾಯಿತು, ನಿಶ್ಛಿತಾರ್ಥ ಮತ್ತು ವಿವಾಹದ ಸಮಯದಲ್ಲಿ ಉಪಸ್ಥಿತರಿದ್ದು ಕರಾವಳಿ ಪದ್ಮಶಾಲಿಗರ ಏಕರೂಪ ವಿವಾಹ ಕ್ರಮಗಳ ಬಗ್ಗೆ ಜಾರಿಗೆ ತರುವ ಕುರಿತು ಚಿಂತನೆಗಳಾದವು. ನಮ್ಮ ಸಂಸ್ಕಾರಗಳು ಏಕಾಭಿಪ್ರಾಯ ಮತ್ತು ಒಂದೇ ದಿಕ್ಕಿನತ್ತ ಸಾಗಲು ಮಾಗಣಿ ಗುರಿಕಾರರು, ಕುಲಭಾಂದವರು ವಿಧಿವತ್ತಾಗಿ ಪಾಲಿಸಿ ಮುಂದಿನ ತಲೆಮಾರಿಗೂ ಅನುಸರಣೀಯವಾಗಬೇಕು ಎಂದರು.

ಸುಮಾರು ಇನ್ನೂರು ಕಿ.ಮೀ ಗೂ ಹೆಚ್ಚು ವ್ಯಾಪ್ತಿಯುಳ್ಳ ಕುಂದಗನ್ನಡ ತುಳು ಮತ್ತು ಕನ್ನಡ ಮಾತನಾಡುವ ಪ್ರದೇಶವಿದ್ದು, ಆಚರಣೆಗಳು ಪ್ರಾದೇಶಿಕ ಬಿನ್ನತೆ ಇದ್ದು, ಈ ತಾರತಮ್ಯತೆಯ ಬಗ್ಗೆ ಹೋಗಲಾಡಿಸಿ ಏಕಾಭಿಪ್ರಾಯ ತರಲು ಹದಿನಾರು ದೇವಾಲಯಗಳು ಮತ್ತು ಮಹಾಸಭಾ ಹೊರತಂದಿರುವ ಏಕರೂಪ ಪದ್ಮಶಾಲಿ ವಿವಾಹ ವಿಧಿ ಪುಸ್ತಕದ ಮಾರ್ಗದರ್ಶನದಂತೆ ವಿವಾಹ ನಡೆಸಿಕೊಡಲು ಮಾಗಣಿಗುರಿಕಾರರು ಸಹಕರಿಸುವ ಬಗ್ಗೆ ಚಿಂತನೆ ನಡೆಸಲಾಯಿತು.

ಸಭೆಯಲ್ಲಿ ಮಹಾಸಭಾದ ಮಾಜಿ ಅಧ್ಯಕ್ಷರು ಈ ವಿಧಿ ಪುಸ್ತಕ ಹೊರತರುವಾಗ ಮಾರ್ಗದರ್ಶಕರಾಗಿ ಧಾರ್ಮಿಕ ಸಂಚಾಲಕರಾಗಿ ದುಡಿದ   ಬಿ.ಎಚ್ ಶೆಟ್ಟಿಗಾರ ಇವರು ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಪದ್ಮಶಾಲಿ ಏಕರೂಪ ವಿವಾಹ ವಿಧಿ ಚಿಂತನೆಗೆ ಒತ್ತುಕೊಟ್ಟು ಆ ಸಮಯದಲ್ಲಿ ಪದ್ಮಶಾಲಿ ಮಹಾಸಭಾದ ಅಧ್ಯಕ್ಷರಾಗಿದ್ದ ಹಾಗೂ ದೇವಳದ ಜೀರ್ಣೋಧ್ದಾರದ ಸಮಯದಲ್ಲಿ ಆಡಳಿತ ಮೊಕ್ತೇಸರರಾಗಿದ್ದ ಗೋಪಾಲ .ಎಚ್. ಎ ಈ ಎಲ್ಲಾ ಚಿಂತನೆಗೆ ಸಹಕಾರ ನೀಡಿದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಂಗನಕೆರೆ ಶ್ರೀನಿವಾಸ ಶೆಟ್ಟಿಗಾರ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.

Click here

Click here

Click here

Click Here

Call us

Call us

ನಂತರ ನಡೆದ ಶೋಡಸ ಸಂಸ್ಕಾರಗಳ ಅಂತಿಮ ಮೋಕ್ಷ ವಿಧಿ ಅಂತ್ಯೇಷ್ಥಿ ಬಗ್ಗೆ ಸಮಾಜದಲ್ಲಿ ಸರಿಯಾದ ಚಿಂತನೆಗಳು ನಡೆಯದಿರುವುದನ್ನು ಮನಗಂಡುಈ ವಿಚಾರದಲ್ಲಿ ಏಕರೂಪತೆ ಇರಲಿ ಎಂಬಂತೆ  ಸುಧಾಕರ ವಕ್ವಾಡಿ ಮತ್ತು ಕಾಳಾವರ ಗಣಪಯ್ಯ ಶೆಟ್ಟಿಗಾರ ಅವರು ಸಂಗ್ರಹಿಸಿದ ಈ ವಿಧಿಯನ್ನು ಸಭೆಯಲ್ಲಿ ಮಂಡಿಸಿದರು. ಇದರ ಕುರಿತು ಸಭೆಯಲ್ಲಿ ಚರ್ಚೆಯಾಗಿ ಹದಿನಾರು ದೇವಾಲಯಗಳ ಗಮನಕ್ಕೆ ತಂದು ಅಗತ್ಯ ವಿಷಯಗಳಿದ್ದರೆ ಸೇರ್ಪಡೆ ಮಾಡಿ ಅನಗತ್ಯ ವಿಷಯಗಳನ್ನು ತೆಗೆಯುವ ಬಗ್ಗೆ ನಿರ್ಣಯಿಸಲಾಯಿತು. ಕಾರ್ಯದರ್ಶಿ ಭಾಸ್ಕರ್ ಶೆಟ್ಟಿಗಾರ ಸ್ವಾಗತಿಸಿ ವಂದಿಸಿದರು.

Leave a Reply