ಭಂಡಾರ್ಕಾರ್ಸ್ ಕಾಲೇಜಿನಲ್ಲಿ ‘ನೆರೆಹೊರೆ – ಯುವಸಂಸತ್ತು’ ಕಾರ್ಯಾಗಾರ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೆಡ್‌ಕ್ರಾಸ್ ಘಟಕ ಮತ್ತು ಭಾರತ ಸರಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮತ್ತು ನೆಹರು ಯುವಕೇಂದ್ರ, ಉಡುಪಿ ಇವರ ಸಹಯೋಗದಲ್ಲಿ ‘ನೆರೆಹೊರೆ – ಯುವಸಂಪತ್ತು’ ಎಂಬ ಒಂದು ದಿನದ ಕಾರ್ಯಾಗಾರ ನಡೆಯಿತು.

Call us

Click Here

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಡಾ.ಜಿ.ಎಂ.ಗೊಂಡ ಅವರು ಇಂದಿನ ದಿನಗಳಲ್ಲಿ ನೀರಿನ ಅಭಾವ ಮಿತಿಮೀರಿದೆ ಎಲ್ಲಿ ನೋಡಿದರೂ ಅಂತರ್ಜಲ ಮಟ್ಟ ಕುಸಿದು ನಗರ ಗ್ರಾಮ ಎಂಬ ಭೇದವೆನ್ನದೆ ನೀರಿನ ಕೊರತೆ ಅತಿದೊಡ್ಡ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ನೀರಿನ ಕೊರತೆ ನೀಗಿಸುವ ಪಾಯಗಳನ್ನು ಹುಡುಕುವ ನಿಟ್ಟಿನಲ್ಲಿ ನಡೆಯುತ್ತಿರುವ ಮಳೆಕೊಯ್ಲು ಕುರಿತ ವಿಷಯ ಇಂದಿನ ವಿದ್ಯಾರ್ಥಿಗಳಿಗೆ ತೀರಾ ಅಗತ್ಯವಾಗಿದೆ. ಇದು ಖಂಡಿತ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ ಕಾರ್ಯಕ್ರಮವಾಗಿದೆ. ವಿದ್ಯಾಥಿಜೀವನದಲ್ಲಿ ಕೇವಲ ಅಂಕಗಳಿಗೆ ಮೀಸಲಾಗಿರದೇ ಯಾವುದೇ ಕಾರ್ಯಕ್ರಮಗಳಲ್ಲಿ ಬಾಗವಹಿಸುವ ಅವಕಾಶಗಳನ್ನು ಉಪಯೋಗಿಸಿಕೊಂಡು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ವ್ಯಕ್ತಿತ್ವ ವಿಕಸನ ಸಹ ತುಮಬಾ ಉಪಯುಕ್ತ ಮತ್ತು ವಿದ್ಯಾರ್ಥಿಗಳಿಗೆ ನೆರವಾಗುತ್ತದೆ. ಹಾಗೆಯೇ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬದುಕು ಕಂಡುಕೊಳ್ಳುವ ದಾರಿಗಳನ್ನು ಹುಡುಕಿಕೊಳ್ಳಬೇಕು. ಆ ದಿಶೆಯಲ್ಲಿ ಉದ್ಯಮಶೀಲತೆ ಮತ್ತು ಸರಕಾರದಿಂದ ಸವಲತ್ತುಗಳ ಕುರಿತು ತಿಳಿದುಕೊಳ್ಳಬೇಕಾಗುತ್ತದೆ. ಹಾಗೆಯೇ ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಬಹಳವಿದೆ ಅದನ್ನು ಇಂದಿನ ಯುವಜನತೆ ತಿಳಿದುಕೊಳ್ಳಬೇಕು ಮತ್ತು ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ ಈ ವರ್ಷ ಭಾರತ ಸ್ವಾತಂತ್ರಯೋತ್ಸವದ 75ನೇ ದಿನಾಚರಣೆಯ ಅಮೃತಮಹೋತ್ಸವ ಆಚರಣೆಯನ್ನು ಆಜಾದಿ ಕಾ ಅಮೃತಮಹೋತ್ಸವ ಎಂಬ ಶೀರ್ಷಿಕೆ ಅಡಿಯಲ್ಲಿ ತುಂಬಾ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಅದರಲ್ಲಿ ಈ ಕಾರ್ಯಕ್ರಮವು ಸಹ ಒಂದಾಗಿದೆ ಎಂದು ಹೇಳಿದರು.

ನಂತರ ನಡೆದ ವಿವಿಧ ಗೋಷ್ಠಿಗಳಲ್ಲಿ ಮಳೆನೀರಿನ ಕೊಯ್ಲು-ಜಲಸಂಪತ್ತಿನ ಅಭಿಯಾನವನ್ನು ರಾಜ್ಯಪ್ರಶಸ್ತಿ ಪುರಸ್ಕೃತ ಜೋಸೆಫ್ ಜಿ.ಎಮ್.ರೆಬೆಲ್ಲೊ ನಡೆಸಿಕೊಟ್ಟರು.

ರುಡ್ ಸೆಟ್ ಇದರ ಉಪನ್ಯಾಸಕರಾದ ಕರುಣಾಕರ ಜೈನ್ ಅವರು ಉದ್ಯಮಶೀಲತೆ ಹಾಗೂ ಸರಕಾರದಿಂದ ಸಿಗುವ ಸವಲತ್ತುಗಳು ಕುರಿತು ಮಾಹಿತಿ ನೀಡಿದರು.

Click here

Click here

Click here

Click Here

Call us

Call us

ಜೆಸಿಐ ರಾಜ್ಯ ನಿರ್ದೇಶಕರಾದ ರಾಘವೇಂದ್ರ ಕಾರವಾಲ್ ಅವರು ದೈನಂದಿನ ಜೀವನದಲ್ಲಿ ಯೋಗ ಮತ್ತು ಅದರ ಪ್ರಾಮುಖ್ಯತೆ ಕುರಿತು ಮಾತನಾಡಿದರು.

ಮಹಾವಿಷ್ಣು ಯುವಕ ಮಂಡಲ(ರಿ), ಹರೆಗೋಡು,ಕಟ್‌ಬೆಳ್ತೂರು ಇದರ ಅಧ್ಯಕ್ಷರಾದ ನರಸಿಂಹ ಗಾಣಿಗ ದೇಶದ ಅಭಿವೃದ್ಧಿಯಲ್ಲಿ ಯುವಕ ಯುವತಿ ಮಂಡಳಿಗಳ ಪಾತ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಂಡಾರ್ಕಾರ‍್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿಗಳಾದ ಅರುಣ್ ಎಸ್.ಮತ್ತು ಕಾಲೇಜಿನ ರೆಡ್ ಕ್ರಾಸ್ ಘಟಕದ ಪ್ರೊ. ಸತ್ಯನಾರಾಯಣ ಹತ್ವಾರ್ ಉಪಸ್ಥಿತರಿದ್ದರು.

ನೆಹರು ಯುವಕೇಂದ್ರ,ಉಡುಪಿ ಇದರ ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳಾದ ವಿಲ್‌ಫ್ರೆಡ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ವಂದಿಸಿದರು. ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿದರು. ವೈಷ್ಣವಿ ಪ್ರಾರ್ಥಿಸಿದರು.

Leave a Reply