ಹಳಗೇರಿ ಕೈಗಾರಿಕಾ ವಲಯಕ್ಕೆ ಗ್ರಾಮಸ್ಥರ ವಿರೋಧ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಖಂಬದಕೋಣೆ ಗ್ರಾಮದ ಹಳಗೇರಿಯ 30ಎಕ್ರೆ ವಿಸ್ತಾರದ ಸರ್ಕಾರಿ ಜಮೀನನ್ನು ಕೈಗಾರಿಕಾ ವಲಯವಾಗಿ ಪರಿವರ್ತಿಸುವುದನ್ನು ವಿರೋಧಿಸಿ ಅಲ್ಲಿನ ವನದುರ್ಗಾ ರೈತಶಕ್ತಿ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಸಾಮೂಹಿಕ ಮನವಿ ಸಲ್ಲಿಸಿದರು.

Call us

Click Here

ಹಳಗೇರಿಯ ಸರ್ವೆ ನಂಬರು 166ರ 69 ಎಕ್ರೆ ಸಾಮಾಜಿಕ ಅರಣ್ಯದಲ್ಲಿ 30 ಎಕ್ರೆಯನ್ನು ಕೈಗಾರಿಕಾ ವಲಯ ಪ್ರದೇಶವಾಗಿ ಗುರುತಿಸಲು ಖಂಬದಕೋಣೆ ಗ್ರಾಮ ಪಂಚಾಯಿತಿ ನಿರಾಕ್ಷೇಪಣಾ ಪತ್ರ ನೀಡಲು ನಿರ್ಣಯ ಕೈಗೊಂಡಿರುವುದಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಮಾತನಾಡಿದ ರೈತಶಕ್ತಿ ಸಂಘದ ಸಂಯೋಜಕ ಪ್ರಭಾಕರ ಶೆಟ್ಟಿ ಈ ಪ್ರದೇಶದಲ್ಲಿ ಅರಣ್ಯ ಇಲಾಖೆ ವಿವಿಧ ಜಾತಿಯ ಮರ ಬೆಳೆಸಿದೆ. ಅನೇಕ ವನ್ಯ ಪ್ರಾಣಿಗಳಿಗೆ ಹಾಗೂ ಪಕ್ಷಿಗಳಿಗೆ ಆಶ್ರಯ ನೀಡಿದೆ. ಇದನ್ನು ಕೈಗಾರಿಕಾ ವಲಯ ಮಾಡಿದರೆ ಹಲವು ಕೈಗಾರಿಕೆಗಳು ಸ್ಥಾಪನೆಯಾಗಿ ಅರಣ್ಯ ಮತ್ತು ಜೀವರಾಶಿಗಳು ನಾಶವಾಗುತ್ತವೆ. ಈ ಪ್ರದೇಶಕ್ಕೆ ಹೊಂದಿಕೊಂಡು ಸುಮಾರು 500 ಎಕ್ರೆಗೂ ಮಿಕ್ಕಿ ಕೃಷಿ ಭೂಮಿ ಇದೆ. 150 ಕುಟುಂಬಗಳು ಅದನ್ನು ಅವಲಂಬಿಸಿಕೊಂಡಿವೆ. ಉದ್ದೇಶಿತ ಕೈಗಾರಿಕಾ ವಲಯದಿಂದ ಕೃಷಿಯ ಮೇಲೆ ದುಷ್ಪರಿಣಾಮವಾಗಿ ರೈತರು ಬದುಕು ಕಳೆದುಕೊಳ್ಳುವರು. ವಿವಿಧ ಪರಿಸರ ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆಗಳೂ ಹುಟ್ಟಿಕೊಳ್ಳಲಿವೆ ಎಂದು ಆತಂಕ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಇದನ್ನು ಕೈಗಾರಿಕಾ ವಲಯವಾಗಿ ಪರಿವರ್ತಿಸಬಾರದು ಎಂದು ಆಗ್ರಹಿಸಿದ ಜನರು, ಪ್ರಸ್ತಾವನೆ ಕೈ ಬಿಡದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ಉಪ ಸಂಯೋಜಕ ರಾಮಕೃಷ್ಣ ಕಾರಂತ, ಕೊಲ್ಲೂರು ದೇವಳ ಆಡಳಿತ ಸಮಿತಿ ಮಾಜಿ ಸದಸ್ಯ ನರಸಿಂಹ ಹಳಗೇರಿ, ಉದ್ಯಮಿ ನಳಿನ್‌ಕುಮಾರ ಶೆಟ್ಟಿ, ಪ್ರಮುಖರಾದ ಸಂಜೀವ ಶೆಟ್ಟಿ ಆಚಾರಬೆಟ್ಟು, ರಾಜೇಂದ್ರ ಗಾಣಿಗ, ಗಂಗಾಧರ, ಪ್ರವೀಣಕುಮಾರ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ರಾಜೇಶ ದೇವಾಡಿಗ ಇದ್ದರು.

ಪಂಚಾಯಿತಿ ಅಧ್ಯಕ್ಷ ಸುಕೇಶ ಶೆಟ್ಟಿ ಮತ್ತು ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಮನವಿ ಸ್ವೀಕರಿಸಿದರು.

Click here

Click here

Click here

Click Here

Call us

Call us

‘ಇಲಾಖೆಯಿಂದ ಬಂದ ಪ್ರಸ್ತಾವನೆ ಆಧರಿಸಿ ಗ್ರಾಮ ಪಂಚಾಯಿತಿ ಅನುಕೂಲಕರ ನಿರ್ಣಯ ಸ್ವೀಕರಿಸಿದೆ. ಜನರಿಗೆ ತೊಂದರೆಯಾಗುವುದಾದರೆ ನಿರ್ಣಯವನ್ನು ಬದಲಿಸಲಾಗುವುದು’ – ಸುಕೇಶ ಶೆಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ

Leave a Reply