ರಥಬೀದಿ ಫ್ರೆಂಡ್ಸ್ ದಶಮಾನೋತ್ಸವ ಸಮಿತಿಗೆ ಆಯ್ಕೆ

Call us

Call us

Call us

Call us

ಕುಂದಾಪುರ: ಬಸ್ರೂರು ರಥಬೀದಿ ಫ್ರೆಂಡ್ಸ್‌ನ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆಯು ಜು.26ರಂದು ರಥಬೀದಿ ಫ್ರೆಂಡ್ಸ್ ಕಛೇರಿಯಲ್ಲಿ ಜರುಗಿತು. ಸಮಿತಿಯ ಗೌರವ ಅಧ್ಯಕ್ಷರಾದ ರಾಮ್ ಕಿಶನ್ ಹೆಗ್ಡೆ ಹಾಗೂ ಅಧ್ಯಕ್ಷರಾದ ಶ್ರೀಕಾಂತ ಕೆರೆಕಟ್ಟೆಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ರಥಬೀದಿ ಫ್ರೆಂಡ್ಸ್ ದಶಮಾನೋತ್ಸವ ಸಮಿತಿಯ ಈ ಕೆಳಗಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆರಿಸಲಾಯಿತು.

Call us

Click Here

ಅಧ್ಯಕ್ಷರಾಗಿ ಹರೀಶ್ ಪಡಿಯಾರ್, ಕಾರ್ಯದರ್ಶಿಯಾಗಿ ಉಮೇಶ ಆಚಾರ್ಯ, ಉಪಾಧ್ಯಕ್ಷರಾಗಿ ರಾಮಚಂದ್ರ ನಾಯಕ್, ಪ್ರದೀಪ್ ಜೋಗಿ, ರಾಘವ ಶ್ರೀಯಾನ್, ಜೊತೆಕಾರ್ಯದರ್ಶಿಯಾಗಿ ಜಗದೀಶ್ ಪುರಾಣಿಕ್, ಕೋಶಾಧಿಕಾರಿ ಮಹೇಶ್ ಕಿಣಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆರಿಸಲಾಯಿತು. ಸಮಿತಿಯ ಅಧ್ಯಕ್ಷರು ದಶಮಾನೋತ್ಸವ ಸಮಿತಿಯ ಮುಂದಿನ ಕಾರ್ಯಕ್ರಮಗಳಲ್ಲಿ ಸರ್ವ ಸದಸ್ಯರ ಸಂಪೂರ್ಣ ಸಹಕಾರವನ್ನು ಕೋರಿದರು. ರಥಬೀದಿ ಫ್ರೆಂಡ್ಸ್ ಕಾರ್ಯದರ್ಶಿ ನಾಗೇಶ್ ಎಸ್. ಬಳ್ಕೂರು ವಂದಿಸಿದರು.

Leave a Reply

Your email address will not be published. Required fields are marked *

5 × 1 =