ಸೌಕೂರು: ಬಾವಿಗೆ ಬಿದ್ದಿದ್ದ ಚಿರತೆಯ ರಕ್ಷಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಮೀಪದ ಅಶೋಕ ದೇವಾಡಿಗ ಎನ್ನುವವರ ಅಂದಾಜು ೩೦ ಅಡಿಯ ಬಾವಿಗೆ ಚಿರತೆ ಬಿದ್ದಿರುವುದನ್ನು ಕಂಡ ಮನೆಯವರು ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಚಿರತೆಯನ್ನು ರಕ್ಷಿಸಿದ್ದಾರೆ.

Call us

Click Here

ಚಿರತೆ ಬಾವಿಯೊಳಗೆ ಇರುದನ್ನು ಗಮನಿಸಿ ಸ್ಥಳೀಯರಿಗೆ ತಿಳಿಸಿ ಬಳಿಕ ಅರಣ್ಯ ಇಲಾಖೆಗೆ ತಿಳಿಸಿದರು. ತಕ್ಷಣ ಆಗಮಿಸಿದ ನೇರಳಕಟ್ಟೆ ಉಪವಯ ಅರಣ್ಯಾಧಿಕಾರಿ ಶರತ್ ಗಾಣಿಗ ಹಾಗೂ ಸಿಬ್ಬಂದಿ, ಸ್ಥಳೀಯರ ನೆರವಿನೊಂದಿಗೆ

ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ಸ್ಥಳಕ್ಕಾಗಮಿಸಿ ಹಗ್ಗ ಹಾಗೂ ಬುಟ್ಟಿಯನ್ನು ಬಳಸಿ ಚಿರತೆಗೆ ಬುಟ್ಟಿಯಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಯಿತು. ಸುಮಾರು ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಬೋನಿನ ಸಹಾಯದಿಂದ ಚಿರತೆಯನ್ನು ಮೇಲತ್ತಲಾಯಿತು. ಚಿರತೆ 2 ವರ್ಷ ಪ್ರಾಯ ಎಂದು ಅಂದಾಜಿಸಲಾಗಿದೆ.

ಈ ಸಂದರ್ಭ ವಂಡ್ಸೆ ಉಪವಲಯ ಅರಣ್ಯಾಧಿಕಾರಿ ಹೇಮಾ, ಅರಣ್ಯ ರಕ್ಷಕ ಶಿವು ಕುಮಾರ್, ವಿಜಯ, ಬೈಂದೂರು ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಕುಂದಾಪುರ ಉಪವಲಯ ಅರಣ್ಯಾಧಿಕಾರಿ ಉದಯ ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

Leave a Reply