ಕುಂದಾಪುರ: ರೋಟರ‍್ಯಾಕ್ಟ್ ಕ್ಲಬ್ ಕುಂದಾಪುರ ಇದರ 2015-16ನೇ ಸಾಲಿನ ಪದಪ್ರದಾನ ಸಮಾರಂಭ ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಜರುಗಿತು.
ನೂತನ ಅಧ್ಯಕ್ಷ ರಾಘವೇಂದ್ರ ಕೆ.ಸಿ ಹಾಗೂ ಪದಾಧಿಕಾರಿಗಳಿಗೆ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಪದಗ್ರಹಣ ನೆರವೇರಿಸಿದರು. ಉದ್ಯಮಿ ಸುರೇಂದ್ರ ಶೆಟ್ಟಿ, ರೋಟರ‍್ಯಾಕ್ಟ್ ವಲಯಾಧಿಕಾರಿ ಮಂಜಪ್ಪ ಡಿ ಗೋಣಿ, ರೋಟರ‍್ಯಾಕ್ಟ್ ಛೇರ್‌ಮೆನ್ ಎಚ್. ಎಸ್. ಹತ್ವಾರ್ ಉಪಸ್ಥಿತರಿದ್ದರು. ಪೂರ್ವಾ ಸಭಾಪತಿ ರಾಘವೇಂದ್ರ ಚರಣ ನಾವಡ ರೋಟರ‍್ಯಾಕ್ಟ್ ಕಾರ್ಯಚಟುವಟಿಕೆ ಮಾಹಿತಿ ನೀಡಿದರು. ಹರ್ಷವರ್ಧನ ಖಾರ್ವಿ ಪರಿಚಯಿಸಿದರು. ಪೂರ್ವಾಧ್ಯಕ್ಷ ಸಾಯಿನಾಥ ಶೇಟ್ ಸ್ವಾಗತಿಸಿದರು. ಹುಸೇನ್ ಹೈಕಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಹರ್ಷ ಶೇಟ್ ವಂದಿಸಿದರು