ಸರಸ್ವತಿ ವಿದ್ಯಾಲಯದಲ್ಲಿ ಸದ್ಬಾವನಾ ದಿನಾಚರಣೆ

Call us

Call us

Call us

ಗ೦ಗೊಳ್ಳಿ: ಜಾತಿ ಮತ ಧರ್ಮಗಳ ಆಧಾರದಲ್ಲಿ ಭೇಧ ಭಾವ ಮಾಡುವುದರಿ೦ದಾಗಿ ಮನುಷ್ಯನ ವ್ಯಕ್ತಿತ್ವದ ಬೆಳವಣಿಗೆ ಕು೦ದುತ್ತದೆ. ಪ್ರತಿಯೊಬ್ಬರೂ ಪರಸ್ಪರರ ಉತ್ತಮ ವ್ಯಕ್ತಿತ್ವವನ್ನು ನಿಲುವುಗಳನ್ನು ಗೌರವಿಸಬೇಕು. ಹಾಗಾದಾಗ ಮಾತ್ರ ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯ ಎ೦ದು ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಹೇಳಿದರು.

Call us

Click Here

ಅವರು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಧಿಕಾರಿಯವರ ಆದೇಶದ೦ತೆ  ಸಧ್ಬಾವನಾ ದಿನಾಚರಣೆ ಮತ್ತು ಕೋಮು ಸೌಹಾರ್ದ ಪಾಕ್ಷಿಕ ದ ಅ೦ಗವಾಗಿ ಹಮ್ಮಿಕೊ೦ಡಿದ್ದ ಕಾರ‍್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊ೦ಡು ಮಾತನಾಡಿದರು.

ಕನ್ನಡ ಉಪನ್ಯಾಸಕ ಸುಜಯೀ೦ದ್ರ ಹ೦ದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೈಹಿಕ ಶಿಕ್ಷಕ ನಾಗರಾಜ ಶೆಟ್ಟಿ,ಉಪನ್ಯಾಸಕರಾದ  ಥಾಮಸ್ ಪಿ.ಎ, ಸುಮತಿ ಉಡುಪ ಉಪಸ್ಥಿತರಿದ್ದರು.ಶಾಲೆಟ್ ಲೋಬೋ ವ೦ದಿಸಿದರು.

ಕೋಮು ಸೌಹಾರ್ದತೆ ಮತ್ತು ಸದ್ಬಾವನೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರತಿಜ್ಞೆ ಸ್ವೀಕರಿಸಿದರು.

 ವರದಿ: ನರೇ೦ದ್ರ ಎಸ್ ಗ೦ಗೊಳ್ಳಿ 

Click here

Click here

Click here

Click Here

Call us

Call us

Leave a Reply