ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರದ ಬೋರ್ಡ್ ಹೈಸ್ಕೂಲ್ನ ಕಲಾಮಂದಿರದಲ್ಲಿ 18 ವರ್ಷ ವಯಸ್ಸಿನ ನಂತರದವರು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡು ಸಂದೇಶ ತಲುಪಿದ ನೂರು ಜನರಿಗೆ ಮೊದಲ ಹಂತದ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಕಮೀಷನರ್ ರಾಜು ಕೆ, ತಾಲೂಕು ಆರೋಗ್ಯ ಅಧಿಕಾರಿ ಡಾ| ನಾಗಭೂಷಣ ಉಡುಪ ಎಚ್., ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಅಂಗ ಸಂಸ್ಥೆಯಾದ ಸೇವಾ ಭಾರತಿ ಪ್ರಮುಖರಾದ ಡಾ. ವಾದಿರಾಜ್ ಭಟ್, ಕಲಾಕ್ಷೇತ್ರ-ಕುಂದಾಪುರ ಸಂಸ್ಥೆಯ ಅಧ್ಯಕ್ಷ ಬಿ. ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸದಾಶಿವ ಗವರೋಜಿ, ವೈದ್ಯ ರಾದ ಡಾ. ಶ್ರಾವ್ಯ, ಫಾರ್ಮಸಿ ಅಧಿಕಾರಿ ಬಿ.ಎಮ್ ಚಂದ್ರಶೇಖರ, ಅನ್ನಪೂರ್ಣ ಹಾಗೂ ವೀಣಾ, ರಾಘವೇಂದ್ರ ಭಟ್ ಕೋಟೇಶ್ವರ, ಮುರಳಿಧರ ಜಪ್ತಿ, ಪ್ರಸನ್ನ ಕೋಟೇಶ್ವರ, ಗಣೇಶ್ ಭಟ್ ಕೋಟೇಶ್ವರ, ರತ್ನಾಕರ್ ಶೇರೆಗಾರ್, ಸತ್ಯನಾರಾಯಣ ಮಂಜ ಕೋಟೇಶ್ವರ, ಸುಹಾಸ್ ಕೋಟೇಶ್ವರ, ರಾಮಚಂದ್ರ ಕುಂದಾಪುರ, ರಾಜ ಪೂಜಾರಿ ಉಪಸ್ಥಿತರಿದ್ದರು. ಇವತ್ತು 44 ಜನರಿಗೆ 2ನೇ ಲಸಿಕೆ ಕೋವಿಶೀಲ್ಡ್ ನೀಡಲಾಗಿತ್ತು .
► ತಾಲೂಕಿನಲ್ಲಿ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ. ಜನರಿಗೆ ದಿನಸಿ ನಡೆದುಕೊಂಡೇ ಕೊಂಡೊಯ್ಯುವ ಶಿಕ್ಷೆ! – https://kundapraa.com/?p=48092 .