ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆ ಹೊರಬಂದರು ಸಮೀಪ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ ಕಂದಾಯ ಸಚಿವ ಆರ್. ಅಶೋಕ್ ಅವರು ಸ್ಥಳೀಯ ಮೀನುಗಾರರ ಅಹವಾಲು ಕೇಳದೆ ತೆರಳಿದ್ದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಹಾನಿಗೀಡಾದ ಪ್ರದೇಶದ ವೀಕ್ಷಣೆಗೆ ಬರುವ ಸಚಿವರು ಘಟನೆಯ ವಾಸ್ತವಾಂಶ ಅರಿಯುವ ಬದಲಿಗೆ ಕಾಟಾಚಾರಕ್ಕೆ ಭೇಟಿ ನೀಡಿ ಹೋಗಿದ್ದಾರೆ. ತೌಕ್ತೆ ಚಂಡಮಾರುತದಿಂದ ಉಂಟಾದ ಕಡಲ್ಕೊರೆತ ಬೈಂದೂರು ಕ್ಷೇತ್ರದ ಮರವಂತೆಯಲ್ಲಿ ಅತಿ ಹೆಚ್ಚಿನ ಹಾನಿ ಉಂಟುಮಾಡಿದೆ. ಮನೆ, ಶೆಡ್, ರಸ್ತೆ ಎಲ್ಲವೂ ಹಾನಿಯಾಗಿದೆ. ಭೂಪ್ರದೇಶಗಳನ್ನು ಕಳೆದುಕೊಂಡಿದ್ದಾರೆ. ಯಾರಿಗೂ ಸ್ಥಳೀಯರೊಂದಿಗೆ ಮಾತನಾಡುವ, ಸಮಸ್ಯೆ ಕೇಳುವ ಸೌಜನ್ಯವಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಮೀನುಗಾರಿಕಾ ಮುಖಂಡರಾದ ಮೋಹನ್ ಖಾರ್ವಿ, ಶಂಕರ ಖಾರ್ವಿ, ನಾಗ ಖಾರ್ವಿ ಲೋಕೇಶ್ ಖಾರ್ವಿ ಮೊದಲಾದವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ► ಹಾನಿಗೊಳಗಾದ ಮನೆಗಳಿಗೆ ತಕ್ಷಣ ಪರಿಹಾರ ನೀಡಲು ಸೂಚನೆ: ಸಚಿವ ಆರ್. ಅಶೋಕ್ – https://kundapraa.com/?p=48384 .