ಮನೆಮದ್ದು: ಅಡುಗೆ ಮನೆಯಲ್ಲಿ ಜಿರಳೆ ನಿವಾರಿಸಲು ಸರಳ ಉಪಾಯ

Call us

Call us

Call us

ಅಡುಗೆ ಮಾಡುವಾಗ, ಇತರರು ಊಟಕ್ಕೆ ಬಂದಾಗ ಇಂಥಾ ಜಿರಳೆಗಳನ್ನು ಅಸಹ್ಯಕರ ಎನಿಸುವುದುಂಟು. ಬಹುಪಾಲು ಜನರು ಜಿರಳೆ ಎಂಬರೆ ಮುಖ ತಿರುಗಿಸುವುದನ್ನೂ ನೋಡಿದ್ದೇವೆ. ಜಿರಲೆ ಬರಬಾರದೆಂದು ನೀವು ಎಷ್ಟೇ ಕಷ್ಟಪಟ್ಟು ನಿತ್ಯ ಸ್ವಚ್ಛಗೊಳಿಸಿದರೂ, ಯಾವೆಲ್ಲಾ ಔಷಧಗಳನ್ನು ಸಿಂಪಡಿಸಿದರೂ
ಕೇವಲ ತಾತ್ಕಾಲಿಕವಷ್ಟೇ ಆಗಿರುತ್ತದೆ, ಹಾಗೂ ಹೀಗೂ ಮತ್ತೆ ಅಡುಗೆ ಮನೆ ಸೇರಿಸುತ್ತವೆ. ಅಷ್ಟೇ ಅಲ್ಲದೇ ಇದು ಅರೋಗ್ಯಕ್ಕೆ ಸಾಕಷ್ಟು ಹಾನಿಕಾರಕ ಮತ್ತು ಹಲವಾರು ಕಾಯಲೆಗಳಿಗೆ ಸಹ ಕಾರಣವಾಗಬಹುದು. ಈ ಸಮಸ್ಯೆಗಳಿಗೆ ಹೆಚ್ಚಿನ ಖರ್ಚಿಲ್ಲದೆ, ಮನೆಯಲ್ಲೇ ಇರುವ ಮದ್ದುಗಳ ಮೂಲಕ ಜಿರಳೆ ಕಾಟವನ್ನು ನಿಧಾನವಾಗಿ ನಿವಾರಿಸಬಹುದು.

Call us

Click Here

  • ಬಿಸಿನೀರು, ನಿಂಬೆ ಮತ್ತು ಅಡಿಗೆ ಸೋಡಾ ಒಂದು ಚಮಚ ನಿಂಬೆ ರಸ, 2 ಚಮಚ ಬೇಕಿಂಗ್ ಸೋಡಾವನ್ನು 1 ಲೀಟರ್ ಬಿಸಿನೀರಿನಲ್ಲಿ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಸಿಂಕ್ ಅಥವಾ ನೀರು ಹೋಗುವ ಸ್ಥಳಗಳಲ್ಲಿ ಸುರಿಯಿರಿ ಅಥವಾ ಸಿಂಕ್ ಹಾಗೂ ಅಡುಗೆ ಮನೆಯ ಚಪ್ಪಡಿಗಳನ್ನು ಇದನ್ನು ಹಾಕಿ ತೊಳೆಯಿರಿ. ಇದು ಪರಿಣಾಮಕಾರಿಯಾಗಿ ಅಡುಗೆಮನೆಯಲ್ಲಿನ ಜಿರಳೆಗಳ ಸಂತಾನೋತ್ಪತ್ತಿಯನ್ನು ನಿಲ್ಲಿಸುತ್ತದೆ.
  • ಬಿಸಿನೀರು ಮತ್ತು ವಿನೆಗರ್ ಇದು ಅತೀ ಸರಳ ವಿಧಾನವಾಗಿದೆ. ಸ್ವಲ್ಪ ಬಿಸಿನೀರನ್ನು ತೆಗೆದುಕೊಂಡು, ಬಿಳಿ ವಿನೆಗರ್ ಅನ್ನು ಬೆರೆಸಿ ಜಿರಳೆ ಇರುವ ಎಲ್ಲಡೆ ಅಡುಗೆ ಮನೆಯನ್ನು ಒರೆಸಿ. ಒಂದು ಪಾತ್ರೆಯಲ್ಲಿ ಇದನ್ನು ಬೆರೆಸಿ ದ್ರಾವಣವನ್ನು ಸಿಂಕ್ ನಲ್ಲಿ ಸುರಿಯಿರಿ, ಇದು ಕೊಳವೆಗಳು ಮತ್ತು ಚರಂಡಿಗಳನ್ನು ಸೋಂಕುರಹಿತಗೊಳಿಸುತ್ತದೆ.
  •  ಬೋರಿಕ್ ಆಮ್ಲ ಮತ್ತು ಸಕ್ಕರೆ ಸ್ವಲ್ಪ ಬೋರಿಕ್ ಆಮ್ಲ ಮತ್ತು ಸಕ್ಕರೆಯನ್ನು ಬೆರೆಸಿ ಜಿರಳೆಗಳು ಹೆಚ್ಚು ಇರುವ ಸ್ಥಳಗಳಲ್ಲಿ ಹಾಕಿ. ಸಕ್ಕರೆ ಜಿರಳೆಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರೆ, ಬೋರಿಕ್ ಆಮ್ಲ ತಕ್ಷಣ ಅವುಗಳನ್ನು ಕೊಲ್ಲುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವು ಈ ಜಿರಳೆ, ಕೀಟಗಳನ್ನು ಓಡಿಸಲು ಇದನ್ನು ಪ್ರಯತ್ನಿಸಿ.
  •  ಬೇವಿನ ಸಾರಗಳು ಬೇವಿನ ಎಲೆಗಳಿಂದ ಬೇವಿನ ಎಣ್ಣೆಯವರೆಗೆ, ನಿಮ್ಮ ಅಡುಗೆಮನೆಯಿಂದ ಕೀಟಗಳನ್ನು ನಿವಾರಿಸುವಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತವೆ. ಬೇವಿನ ಕೆಲವು ಎಲೆಗಳನ್ನು ಅಡುಗೆ ಮನೆಯಲ್ಲಿ ಇರಿಸಿ ಮತ್ತು ಕೇವಲ 3 ದಿನಗಳಲ್ಲಿ ಬದಲಾವಣೆಗೆ ನೀವು ಸಾಕ್ಷಿಯಾಗಬಹುದು. ಅಡುಗೆಮನೆಯಲ್ಲಿ ಸಂತಾನೋತ್ಪತ್ತಿ ಮಾಡುವುದನ್ನು ತಡೆಯಲು ಸ್ವಲ್ಪ ಬೇವಿನ ಎಣ್ಣೆಯನ್ನು ಬಿಸಿನೀರಿನೊಂದಿಗೆ ಬೆರೆಸಿ ಸಿಂಪಡಿಸಿ.
  •  ಸಾರಭೂತ ತೈಲಗಳು ನೀವು ಈ ತೈಲಗಳನ್ನು ಚರ್ಮದ ಆರೈಕೆ ಅಥವಾ ಇತರ ಗುಣಪಡಿಸುವ ಉದ್ದೇಶಗಳಿಗಾಗಿ ಬಳಸುವುದು ಸಹಜ. ಆದರೆ ಈ ಸಾರಭೂತ ತೈಲಗಳಾದ ಪುದೀನಾ ಎಣ್ಣೆ ಮತ್ತು ಲ್ಯಾವೆಂಡರ್ ಎಣ್ಣೆಯುಜಿರಳೆಗಳನ್ನು ಕೊಲ್ಲುವಲ್ಲಿ ಸಹಾಯ ಮಾಡುತ್ತದೆ. ಅಡಿಗೆ ಮನೆ ಮತ್ತು ಸಿಂಕ್ ಸುತ್ತಲೂ ಕೆಲವು ಸಾರಭೂತ ತೈಲಗಳನ್ನು ಸಿಂಪಡಿಸಿ ಕೀಟಗಳಿಂದ ಮುಕ್ತಿ ಪಡೆಯಿರಿ.

ಕುಂದಾಪ್ರ ಡಾಟ್ ಕಾಂ ಲೇಖನ

ಇದನ್ನೂ ಓದಿ:
► ಅಡುಗೆ ಮನೆಯಲ್ಲಿ ಇರುವೆಗಳ ಕಾಟ ತಪ್ಪಿಸಲು ಈ ಟ್ರಿಕ್ಸ್ ಉಪಯೋಗಿಸಿ – https://kundapraa.com/?p=49078 .

Click here

Click here

Click here

Click Here

Call us

Call us

Leave a Reply