ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿರುವುದಕ್ಕೆ ಬೇಸರವಿಲ್ಲ. ಶಾಸಕನಾದವನು ಮಂತ್ರಿಯಾಗಲೇಬೇಕು ಎಂದೇನೂ ಇಲ್ಲ. ಶಾಸಕನಾಗಿಯೇ ಕ್ಷೇತ್ರದ ಜನರ ಋಣ ತೀರಿಸುವುದಾಗಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹೇಳಿದ್ದಾರೆ.
ನನಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ದುಃಖವೂ ಇಲ್ಲ ಸಂತೋಷವೂ ಇಲ್ಲ. ಎಲ್ಲಾ ಜಾತಿ ಧರ್ಮದ ಮತ ಪಡೆದು ಜನಪ್ರತಿನಿಧಿಯಾದವನು ಒಂದು ಜಾತಿ ಧರ್ಮದ ಆಧಾರದಲ್ಲಿ ಸ್ಥಾನಮಾನ ಕೇಳುವುದು ಸರಿಯಲ್ಲ. ಜಾತಿಪ್ರೇಮ ಉಳ್ಳವರು, ಜಾತಿ ರಾಜಕಾರಣ ನಡೆಸುವವರು ಜಾತಿ ಸಂಘಟನೆಯ ಚುನಾವಣೆಗೆ ನಿಲ್ಲಬೇಕು ಎಂದಿದ್ದಾರೆ. ಅಲ್ಲದೇ ಸರಳ ರಾಜಕಾರಣಿಯಂತೆ ಬಿಂಬಿಸಿಕೊಂಡು ಬದುಕುವ ರಾಜಕಾರಣಿಗಳಿದ್ದಾರೆ. ಅಂತಹ ರಾಜಕಾರಣದ ಅಗತ್ಯ ನನಗಿಲ್ಲ ಎಂದು ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.
ತನಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಪ್ರತಿಭಟನೆ ನಡೆಸುವುದು ಸರಿಯಲ್ಲ. ಅಂಥ ಪ್ರತಿಭಟನೆಗೆ ನನ್ನ ಬೆಂಬಲ ಇಲ್ಲ ಎಂಬುದಾಗಿಯೂ ಅವರು ಈ ಸಂದರ್ಭ ತಿಳಿಸಿದ್ದಾರೆ.
ಇದನ್ನೂ ಓದಿ:
► ಶಾಸಕ ಹಾಲಾಡಿಗೆ ದೊರೆಯದ ಸಚಿವ ಸ್ಥಾನ. ಅಭಿಮಾನಿಗಳ ಪ್ರತಿಭಟನೆ – https://kundapraa.com/?p=50793 .
► ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಅವರಿಗೆ ಸಂಪುಟದಲ್ಲಿ ಸ್ಥಾನ – https://kundapraa.com/?p=50777 .