ಯುವ ಜನತೆಯನ್ನು ಯಶಸ್ವಿ ಸ್ವಉದ್ಯೋಗಿಗಳನ್ನಾಗಿಸಿ: ಅಪರ ಜಿಲ್ಲಾಧಿಕಾರಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಜಿಲ್ಲೆಯ ಯುವ ಜನತೆ ತಮ್ಮ ಪದವಿ ವಿದ್ಯಾಭ್ಯಾಸದ ನಂತರ ಸ್ವಉದ್ಯೋಗ ಕೈಗೊಂಡು ಯಶಸ್ವಿಯಾಗುವ ಕುರಿತಂತೆ ಕಾಲೇಜುಗಳಲ್ಲಿ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ನೆಹರು ಯುವ ಕೇಂದ್ರದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸೂಚಿಸಿದರು.

Call us

Click Here

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ನೆಹರು ಯುವ ಕೇಂದ್ರದ ವಾರ್ಷಿಕ ಕ್ರಿಯಾ ಯೋಜನೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯುವ ಜನರು ಪದವಿ ನಂತರ ತಮ್ಮ ಭವಿಷ್ಯದ ಬಗ್ಗೆ ಚಿಂತಿಸಲು ಅವಕಾಶ ನೀಡದಂತೆ, ಅವರು ಪದವಿ ಅಂತಿಮ ವರ್ಷದಲ್ಲಿ ಇರುವಾಗಲೇ, ಪದವಿ ನಂತರ ಅವರು ಕೈಗೊಳ್ಳಬಹುದಾದ ಸ್ವ ಉದ್ಯೋಗಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿವರವಾದ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಎಲ್ಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳಿ, ಈ ಕಾರ್ಯಕ್ರಮಗಳಿಗೆ ಲೀಡ್‌ಬ್ಯಾಂಕ್ ಅಧಿಕಾರಿಗಳನ್ನು ಆಹ್ವಾನಿಸಿ, ವಿವಿಧ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್ಗಳು ನೀಡುವ ವಿವಿಧ ಬಗೆಯ ಸಾಲಗಳು, ಸಬ್ಸಿಡಿ ಮೊತ್ತ ಮುಂತಾದವುಗಳ ಬಗ್ಗೆ ಸಮಗ್ರ ವಿವರಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಎಂದರು.

ಬ್ಯಾಂಕುಗಳು ಮಾತ್ರವಲ್ಲದೇ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಯುವಜನತೆಗೆ ಉದ್ಯೋಗ ಪ್ರಾರಂಭಿಸಲು ಇರುವ ಯೋಜನೆಗಳ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಿ ಆ ಮೂಲಕ ಜಿಲ್ಲೆಯ ಯುವಜನತೆ ಸ್ವ ಉದ್ಯೋಗ ಕೈಗೊಳ್ಳುವ ಮೂಲಕ ಸುಸ್ಥಿರವಾಗಿ ಅಭಿವೃದ್ದಿ ಹೊಂದುವಂತೆ ಯೋಜನೆ ರೂಪಿಸಿ, ಕೇಂದ್ರ ಸರ್ಕಾರ ಸ್ಟಾರ್ಟ್ಅಪ್ಗಳನ್ನು ಆರಂಭಿಸಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು ಈ ಬಗ್ಗೆ ಮಾಹಿತಿ ನೀಡಿ, ಆತ್ಮ ನಿರ್ಭರ ಯೋಜನೆಯಡಿ ಸಹ ಅನೇಕ ಉದ್ದಿಮೆ ಆರಂಭಿಸಲು ಅವಕಾಶಗಳಿದ್ದು ಈ ಬಗ್ಗೆಯೂ ಯುವ ಜನತೆಗೆ ಮಾಹಿತಿ ನೀಡಿ ಎಂದರು.

ಜಿಲ್ಲೆಯ ಯುವ ಶಕ್ತಿ, ಜಿಲ್ಲೆಯ ಅಭಿವೃದ್ದಿಗೆ ಸಮರ್ಪಕವಾಗಿ ಬಳಕೆಯಾಗುವ ಕುರಿತಂತೆ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಯೋಜನೆಗಳನ್ನು ರೂಪಿಸಿ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ನೆರವಾಗುವ ಕುರಿತಂತೆ ಯುವ ಜನತೆಗೆ ಮತ್ತು ಯುವ ಸಂಘಗಳಿಗೆ ತರಬೇತಿ ನೀಡಿ, ಗಾಂಧೀ ಜಯಂತಿಯAದು ಜಿಲ್ಲೆಯ ಎಲ್ಲಾ ಬೀಚ್ಗಳಲ್ಲಿ ಯುವ ಜನತೆಯಿಂದ ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಿ, ಜಲಶಕ್ತಿ ಅಭಿಯಾನ, ನಶಾ ಮುಕ್ತ ಭಾರತ ಮುಂತಾದ ಕಾರ್ಯಕ್ರಮಗಳಲ್ಲಿ ಯುವಜನತೆಯನ್ನು ಸೇರ್ಪಡೆ ಮಾಡಿಕೊಳ್ಳಿ ಎಂದು ಸದಾಶಿವ ಪ್ರಭು ಹೇಳಿದರು.

ಜಿಲ್ಲೆಯ ಯುವಕ ಸಂಘಗಳು ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ನೆರವಾಗಿದ್ದು, ಮಾಸ್ಕ್ಗಳ ವಿತರಣೆ, ಅಶಕ್ತರಿಗೆ ಆಹಾರ ವಿತರಣೆ ಕಾರ್ಯಕ್ರಮಗಳನ್ನು ನಡೆಸಿದ್ದು, ಸ್ವಯಂ ಸೇವಕರಾಗಿ ಸಹ ಹಲವು ಕಾರ್ಯಗಳನ್ನು ಮಾಡಿದ್ದಾರೆ. ಈಗಾಗಲೇ 180 ಮಂದಿಗೆ ಪ್ರಾಕೃತಿಕ ವಿಕೋಪ ನಿರ್ವಹಣೆ ಕುರಿತು ತರಬೇತಿ ನೀಡಿದ್ದು, ಇವರು ಯಾವುದೇ ಸಂದರ್ಭದಲ್ಲಿ ಜಿಲ್ಲಾಡಳಿತದ ನೆರವಿಗೆ ಸಿದ್ದರಾಗಿದ್ದಾರೆ. ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ಆತ್ಮ ನಿರ್ಭರ ಯೋಜನೆಯ ಬಗ್ಗೆ, ಬ್ಯಾಂಕ್ ಮಿತ್ರರಾಗಿ ಕಾರ್ಯನಿರ್ವಹಿಸುವ ಬಗ್ಗೆ, ಗ್ರಾಮ ಸ್ವಚ್ಛತೆ, ಕೌಶಲ್ಯ ಮತ್ತು ಸಂವಹನ, ಫಿಟ್ ಇಂಡಿಯಾ ಕುರಿತ ವಿವಿಧ ತರಬೇತಿ ಮುಂತಾದ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಜಿಲ್ಲಾ ನೆಹರು ಯುವ ಕೇಂದ್ರದ ಅಧಿಕಾರಿ ವಿಲ್ಪೆಡ್ ಡಿಸೋಜಾ ಹೇಳಿದರು.

Click here

Click here

Click here

Click Here

Call us

Call us

ನೆಹರು ಯುವ ಕೇಂದ್ರದ ವಿಷ್ಣುಮೂರ್ತಿ ಕ್ರಿಯಾ ಯೋಜನೆಯ ವಿವರ ನೀಡಿದರು. ಸಭೆಯಲ್ಲಿ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಯುವಕ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply