ಕುಂದಾಪುರ: ಲೋ ಬಿಪಿಯಿಂದ ಯುವತಿ ಸಾವು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಲೋ ಬಿಪಿಯಿಂದ ಯುವತಿ ಮೃತಪಟ್ಟ ಘಟನೆ ಆಲೂರು ಗ್ರಾಮದ ನಾರ್ಕಳಿ ಎಂಬಲ್ಲಿ ನಡೆದಿದೆ.

Call us

Click Here

ಇಲ್ಲಿನ ನಿವಾಸಿ ಅಶ್ವಿನಿ(23) ಎಂಬವರು ಆ.23ರಂದು ಪ್ರಾಥಮಿಕ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಪ್ರಥಮ ಡೋಸ್ ಪಡೆದುಕೊಂಡಿದ್ದಾರೆ. ರಾತ್ರಿ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದರು. ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಲೋ ಬಿಪಿ ಇರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಕೊಂಡೊಯ್ಯುವಂತೆ ವೈದ್ಯರು ತಿಳಿಸಿದ ಮೇರೆಗೆ ಕರೆದೊಯ್ಯಲಾಗಿತ್ತು.

ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸಹೋದರಿ ಅಕ್ಷಯ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Leave a Reply