ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಚಂದ್ರ ಫೌಂಡೇಶನ್, ಚಂಡೀಗಢ ಆಯೋಜಿಸಿದ್ದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಫರ್ಧೆಯಲ್ಲಿ ಚೇತನ್ ಕುಮಾರ್ ಹಳ್ಳಿಹೊಳೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿರುವ ಚೇತನ್, ದೃಶ್ಯ ಕಲಾ ವಿಭಾಗದ ಅಂತಿಮ ವರ್ಷದ ಬಿ.ವಿ.ಎ ಪದವಿ ವ್ಯಾಸಂಗ ನಡೆಸುತ್ತಿದ್ದಾರೆ.
ಚೇತನ್ ಲಾಕ್ ಡೌನ್ ಅವಧಿಯನ್ನು ಸದುಪಯೋಗ ಪಡಿಸಿಕೊಂಡು ಹಲವು ಕಲಾಕೃತಿಗಳನ್ನು ರಚಿಸಿ ಮೆಚ್ಚುಗೆಗಳಿಸಿದ್ದರು. ಇವರು ಹಳ್ಳಿಹೊಳೆಯ ಚಂದ್ರಶೇಖರ್ ನಾಯಕ್ ಮತ್ತು ರತ್ನಾ ದಂಪತಿಗಳ ಪುತ್ರರಾಗಿದ್ದಾರೆ.
ಇದನ್ನೂ ಓದಿ:
► ಕಮಲಶಿಲೆ ಪಾರೆಯಲ್ಲಿ ಗಮನಸೆಳೆಯುತ್ತಿರುವ ಕಡವೆ ಕಲಾಕೃತಿ – https://kundapraa.com/?p=46245 .