ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನೆಹರು ಯುವಕೇಂದ್ರ ಕುಂದಾಪುರ ತಾಲೂಕು ಮತ್ತು ಯೂತ್ ರೆಡ್‌ಕ್ರಾಸ್ ಕುಂದಾಪುರ ಘಟಕ ಇದರ ಸಹಯೋಗದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ, ಭಾರತ ಕೇಂದ್ರ ಸರ್ಕಾರದ ನಿರ್ದೇಶನದಂತೆ, ಫಿಟ್ ಇಂಡಿಯಾ ಫ್ರೀಡಂ ರನ್ 2.0 ಕಾರ್ಯಕ್ರಮ ಇಲ್ಲಿನ ಭಂಡಾರ್‌ರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ, ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿ ಸದೃಢ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಜವಾಬ್ದಾರನಾಗಿರುತ್ತಾನೆ. ಬಹುಮುಖ್ಯವಾಗಿ ಶಿಕ್ಷಣ ಸಂಸ್ಥೆಗಳ ಪಾತ್ರವು ಅತ್ಯಮೂಲ್ಯವಾಗಿರುತ್ತದೆ ಎಂದರು.
ಕಾಲೇಜಿನ ಎನ್‌ಸಿಸಿ ನೇವಿ ಮತ್ತು ಆರ್ಮಿ, ಎನ್‌ಎಸ್‌ಎಸ್, ಯೂತ್ ರೆಡ್‌ಕ್ರಾಸ್ ಮತ್ತು ಕ್ರೀಡಾ ವಿಭಾಗಗಳ ಸುಮಾರು150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಕುಂದಾಪುರ ಸ್ಥಳೀಯ ಪೋಲೀಸ್ ಇಲಾಖೆಯ ಸಹಕಾರದೊಂದಿಗೆ ಇಲ್ಲಿನ ಪಾರಿಜಾತ ಸರ್ಕಲ್‌ವರೆಗೆ ವಿದ್ಯಾರ್ಥಿ-ಜಾಥ ಜರುಗಿತು.
ಉಡುಪಿ ಯುವಸ್ಪಂದನ ಕೇಂದ್ರದ ನರಸಿಂಹ ಗಾಣಿಗ, ಯೂತ್ ರೆಡ್ ಕ್ರಾಸ್ ಕುಂದಾಪುರ ಘಟಕ ದ ಎಸ್. ಜಯಕರ ಶೆಟ್ಟಿ, ಗಣೇಶ್ ಆಚಾರ್ಯ, ಸದಸ್ಯರು, ಉಪಸ್ಥಿತರಿದ್ದರು. ಕಾಲೇಜಿನ ಎನ್‌ಸಿಸಿ ಕೆಡೆಟ್ ವೈಷ್ಣವಿ ಹೆಗ್ಡೆ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.