ಕೆರಾಡಿ ಗ್ರಾಮ ಪಂಚಾಯತ್‌ನಲ್ಲಿ ಕ್ಷಯ ಮುಕ್ತ ಗ್ರಾಮ ಆಂದೋಲನ ಕಾರ್ಯಕ್ರಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಆದರ್ಶ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೆರಾಡಿ ಗ್ರಾಮ ಪಂಚಾಯತ್‌ನಲ್ಲಿ ಕ್ಷಯ ಮುಕ್ತ ಗ್ರಾಮ ಸಮುದಾಯದ ಸಹಭಾಗಿತ್ವ ಕಾರ್ಯಕ್ರಮವನ್ನು ಕೆರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಿರಿಜಾ ಶೆಟ್ಟಿ ಉದ್ಘಾಟಿಸಿದರು.

Call us

Click Here

ಪಂಚಾಯಿತಿನ ಸದಸ್ಯರಾದ ರಾಘವೇಂದ್ರ ಕೊಠಾರಿ ಹಾಗೂ ಮಂಜುನಾಥ ಕೊಠಾರಿ ಮಾತನಾಡಿ ಇಡೀ ಗ್ರಾಮವನ್ನು ಕ್ಷಯ ಮುಕ್ತ ಮಾಡಲು ಕೆರಾಡಿ ಗ್ರಾಮ ಪಂಚಾಯತ್ ಸಹಕರಿಸುವುದಾಗಿ ತಿಳಿಸಿದರು.

ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರುಮೂರ್ತಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರವೀಣ್ ಶೆಟ್ಟಿ, ಕುಂದಾಪುರ ತಾಲೂಕು ಆಸ್ಪತ್ರೆಯ ಎನ್ಸಿಡಿ ವಿಭಾಗದ ವೈದ್ಯಾಧಿಕಾರಿ ಡಾ. ರಂಜಿತಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕ ಕುಂದಾಪುರ ತಾಲೂಕಿನ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಗುರುದಾಸ್ ಕಾರ್ಯಕ್ರಮವನ್ನು ನಿರೂಪಿಸಿದರು, ಕಾರ್ಯಕ್ರಮದ ಉದ್ದೇಶದ ಕುರಿತು ಹಿರಿಯ ಮೇಲ್ವಿಚಾರಕ ಆಲ0ದೂರು ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಿಪಿಎಂಒ ಸುರೇಶ್ ಸಾಲಿಗ್ರಾಮ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಕೆರಾಡಿ ಗ್ರಾಮದ ಸಾರ್ವಜನಿಕರಿಗೆ ಮಧುಮೇಹ, ರಕ್ತದೊತ್ತಡ, ಹಾಗೂ ಎಚ್ಐವಿ ಪರೀಕ್ಷೆಯನ್ನು ನಡೆಸಲಾಯಿತು. ಹಾಗೂ ಆಶಾ ಕಾರ್ಯಕರ್ತರು ತಂಡೋಪಾದಿಯಾಗಿ ಮನೆಮನೆಗೆ ಭೇಟಿ ಕೊಟ್ಟು ಕ್ಷಯ ರೋಗದ ಬಗ್ಗೆ ಅರಿವು ಮತ್ತು ತಿಳುವಳಿಕೆ ಮೂಡಿಸಿ ಟಿವಿ ಸರ್ವೆ ಕಾರ್ಯಕ್ರಮ ನಡೆಸಿದರು.

Leave a Reply