ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಭಾರತ ಚುನಾವಣಾ ಆಯೋಗವು ಜನವರಿ 1 2022ನ್ನು ಅರ್ಹತಾ ದಿನವಾಗಿಟ್ಟುಕೊಂಡು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯನ್ನು ಮಾಡಲಾಗುತ್ತಿದ್ದು, ನವೆಂಬರ್ 8 ರಂದು ಕರಡು ಮತದಾರರ ಪಟ್ಟಿ ಪ್ರಕಟ, ನವೆಂಬರ್ 8 ರಿಂದ ಡಿಸೆಂಬರ್ 8 ರ ವರೆಗೆ ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದ್ದು, ನವೆಂಬರ್ 7, 14,21 ಮತ್ತು 28ರಂದು ವಿಶೇಷ ನೊಂದಣಿ ಕಾರ್ಯಕ್ರಮ, ಡಿಸೆಂಬರ್ 27ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಹಾಗೂ 13-1-2022 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು.
ಅರ್ಹ ಭಾರತೀಯ ನಾಗರಿಕರು ಮತದಾರರರ ಪಟ್ಟಿಗೆ ಹೆಸರುಗಳನ್ನು ಸೇರಿಸಲು ಅರ್ಜಿಗಳನ್ನು ಸಲ್ಲಿಸಲು ದಿನಾಂಕ: 01.01.2022ಕ್ಕೆ 18 ವರ್ಷ ಪೂರ್ಣಗೊಳ್ಳಲಿರುವವರು ಈ ಕೆಳಗೆ ತಿಳಿಸಿರುವ ಯಾವುದಾದರೊಂದು ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.
ವಯಸ್ಸಿನ ಬಗ್ಗೆ ಸಲ್ಲಿಸಬೇಕಾದ ದಾಖಲೆಗಳು: ಶಾಲಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಆಧಾರ ಕಾರ್ಡ್, ಎಸ್.ಎಸ್.ಎಲ್.ಸಿ/ಪಿ.ಯು.ಸಿ.ಅಂಕಪಟ್ಟಿಗಳು, ಪಾನ್ ಕಾರ್ಡು ಹಾಗೂ ವೈದ್ಯಕೀಯ ಪ್ರಮಾಣ ಪತ್ರ.
ವಾಸ್ತವ್ಯದ ಬಗ್ಗೆ ಸಲ್ಲಿಸಬೇಕಾದ ದಾಖಲೆಗಳು: ಪಡಿತರ ಚೀಟಿ , ಗ್ಯಾಸ ಸಿಲಿಂಡರ್ ರಸೀದಿ ಸ್ವೀಕೃತಿ, ವಿದ್ಯುತ್ ಬಿಲ್ ಪಾವತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಾಸ್ ಪೋರ್ಟ್, ವಾಹನ ಚಾಲನಾ ಪರವಾನಗಿ ಪ್ರತಿ, ಬಾಡಿಗೆ ಕರಾರು ಪತ್ರ, ಹಾಗೂ ಇನ್ನಿತರ ದಾಖಲೆಗಳು
ನಮೂನೆ-6: 18 ವರ್ಷ ಪೂರೈಸಿದ ಹೊಸ ಮತದಾರರು ಹಾಗೂ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದೆಡೆ ವಾಸಸ್ಥಳ ಬದಲಾಯಿಸುವವರು, ವಿದೇಶದಲ್ಲಿ ವಾಸಿಸುವವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ,ನಮೂನೆ–7: ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು, ನಮೂನೆ–8: ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು , ನಮೂನೆ–9: ಹೆಸರು, ತಂದೆಯ ಹೆಸರು, ಮನೆ ವಿಳಾಸ, ವಯಸ್ಸಿಗೆ ಹಾಗೂ ಭಾವಚಿತ್ರಕ್ಕೆ ಸಂಬಂಧಿಸಿದಂತೆ ದೋಷಗಳಿದ್ದರೆ, ನಮೂನೆ–10 : ಒಂದು ವಿಧಾನಸಭಾ ಕ್ಷೇತ್ರದೊಳಗೆ ವಾಸಸ್ಥಳ ಬದಲಾಯಿಸಿದ ಸಂದರ್ಭದಲ್ಲಿ ಸಲ್ಲಿಸಬೇಕಾದ ಅರ್ಜಿ ಆಗಿರುತ್ತದೆ. ಸಾರ್ವಜನಿಕರು ತಾಲೂಕು ಕಛೇರಿ ಉಡುಪಿ, ಕಾಪು, ಕಾರ್ಕಳ, ಕುಂದಾಪುರ, ಬೈಂದೂರು, ಬ್ರಹ್ಮಾವರ ಹೆಬ್ರಿ ಇಲ್ಲಿಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದು.
ಸಾರ್ವಜನಿಕರು ಈ ಕಛೇರಿಗಳನ್ನು ಸಂಪರ್ಕಿಸಿ ಮತದಾರರರ ಪಟ್ಟಿಗೆ ಹೆಸರು ನೋಂದಾಯಿಸುವ ಬಗ್ಗೆ ಮತ್ತು ತಿದ್ದುಪಡಿ ಮಾಡುವ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಜಿಲ್ಲಾಧಿಕಾರಿಯವರ ಕಛೇರಿ ದೂ.ಸಂ. 0820- 2574991, 0820 – 2574925, ಕೆ.ರಾಜು.ಸಹಾಯಕ ಕಮೀಷನರ್,ಕುಂದಾಪುರ ಹಾಗೂ ಮತದಾರರರ ನೋಂದಣಾಧಿಕಾರಿ, ಉಡುಪಿ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳು 08254-231984, ಶೋಭಾ ಲಕ್ಷ್ಮಿ ಹೆಚ್. ಎಸ್. ತಹಶೀಲ್ದಾರರು ಬೈಂದೂರು ಹಾಗೂ ಸಹಾಯಕ ಮತದಾರರರ ನೋಂದಣಾಧಿಕಾರಿ, ಬೈಂದೂರು ವಿಧಾನಸಭಾ ಕ್ಷೇತ್ರ, 08254-251657, ಕಿರಣ್ .ಜಿ. ಗೌರಯ್ಯ ತಹಶೀಲ್ದಾರರು ಕುಂದಾಪುರ ಹಾಗೂ ಸಹಾಯಕ ಮತದಾರರರ ನೋಂದಣಾಧಿಕಾರಿ, ಕುಂದಾಪುರ ವಿಧಾನಸಭಾ ಕ್ಷೇತ್ರ, 08254-230357, ಪ್ರದೀಪ್ ಕುರ್ಡೇಕರ್, ತಹಶೀಲ್ದಾರರು ಉಡುಪಿ ಹಾಗೂ ಸಹಾಯಕ ಮತದಾರರರ ನೋಂದಣಾಧಿಕಾರಿ, ಉಡುಪಿ ವಿಧಾನಸಭಾ ಕ್ಷೇತ್ರ 0820-2520417, ರಾಜಶೇಖರ ಮೂರ್ತಿ, ತಹಶೀಲ್ದಾರರು ಬ್ರಹ್ಮಾವರ ಹಾಗೂ ಸಹಾಯಕ ಮತದಾರರರ ನೋಂದಣಾಧಿಕಾರಿ, ಕಾಪು ವಿಧಾನಸಭಾ ಕ್ಷೇತ್ರ 0820-2560494, ಕೆ. ಪುರಂದರ, (ಪ್ರಭಾರ) ತಹಶೀಲ್ದಾರರು ಕಾರ್ಕಳ ಹಾಗೂ ಸಹಾಯಕ ಮತದಾರರರ ನೋಂದಣಾಧಿಕಾರಿ, ಕಾರ್ಕಳ ವಿಧಾನಸಭಾ ಕ್ಷೇತ್ರ 08258-230201, ತಹಶೀಲ್ದಾರ್ ಕಛೇರಿ, ಕಾಪು ತಾಲೂಕು 0820-2551444, ತಹಶೀಲ್ದಾರ್ ಕಛೇರಿ, ಹೆಬ್ರಿ ತಾಲೂಕು 08253-250201
ವ್ಯಕ್ತಿಯು ವಾಸವಿರುವ ವಿಳಾಸದ ವ್ಯಾಪ್ತಿಗೆ ಬರುವ ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಗಳನ್ನು ಭೇಟಿಯಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿದಾರರು ಆನ್ ಲೈನ್ ಮೂಲಕ ವೆಬ್ ಪೋರ್ಟಲ್ https://www.nvsp.in/ ಹಾಗೂ voter help line app ನಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಹಾಗೂ ತಿದ್ದುಪಡಿಗಳಿಗಾಗಿ ಅವಕಾಶವಿರುತ್ತದೆ. ಪ್ರಕಟಣೆಯಾದ ಕರಡು ಮತದಾರರ ಪಟ್ಟಿಯನ್ನು ವಿಳಾಸ https://www.udupi.nic.in/ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.