ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯಲ್ಲಿ ಧಾರಾಳ ಹಾಲು ಲಭ್ಯವಿದೆ. ಹಾಲು ಉತ್ಪಾದಕರು ಈಗ ಹಾಲಿನ ಗುಣಮಟ್ಟಕ್ಕೆ ಆಧ್ಯತೆ ನೀಡಬೇಕು ಎಂದು ಒಕ್ಕೂಟದ ಉಪಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ಅವರು, ಅರೆಹೊಳೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಮಾತನಾಡಿ, ಸಂಘವು ವರದಿ ವರ್ಷದಲ್ಲಿ ರೂ 3.57 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 10 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕ ಸದಸ್ಯರಿಗೆ ಶೇ 65 ಬೋನಸ್ ವಿತರಿಸಲು ನಿರ್ಧರಿಸಲಾಗಿದೆ ಎಂದರು.
ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಮಾಧವ ಐತಾಳ್ ಮತ್ತು ವಿಸ್ತರಣಾಧಿಕಾರಿ ರಾಜಾರಾಮ್ ಹಾಲು ಉತ್ಪದನೆ ಹೆಚ್ಚಿಸಲು ಹಾಗೂ ಗುಣಮಟ್ಟದ ಹಾಲು ಪಡೆಯಲು ಅನುಸರಿಸಬೇಕಾದ ಕ್ರಮಗಳ ಮಾಹಿತಿ ನೀಡಿದರು. ಕಾರ್ಯದರ್ಶಿ ಉಮೇಶ ಮಧ್ಯಸ್ಥ ವರದಿ, ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷೆ ದೇವಕಿ ಚಂದನ್, ನಿರ್ದೇಶಕರಾದ ರಾಜು ದೇವಾಡಿಗ, ವಿವೇಕಾನಂದ ಆಚಾರ್ಯ, ಇಂದಿರಾ ದೇವಾಡಿಗ, ಕಮಲಾ ದೇವಾಡಿಗ, ಶಾರದಾ ಪೂಜಾರಿ ಇದ್ದರು.