ಕಟ್ಟಡ ಕಾರ್ಮಿಕರಿಗೆ ಕೋವಿಡ್ ಸಹಾಯಧನ: ಮಾಹಿತಿ ಅಪ್ಲೋಡ್ ಮಾಡಲು ಸೂಚನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೋವಿಡ್-19 ಎರಡನೇ ಅಲೆಯ ಸಹಾಯಧನ ಮೊತ್ತ 3,000 ರೂ. ಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ.

Call us

Click Here

ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಈಗಾಗಲೇ 3,000 ರೂ. ಗಳ ಮೊತ್ತವನ್ನು ನೇರ ನಗದು ವರ್ಗಾವಣೆ ((DBT Aadhaar)) ಮೂಲಕ ಪಾವತಿಸಲು E-Governance ಇಲಾಖೆಗೆ ಕಳುಹಿಸಲಾಗಿದ್ದು, ಸದರಿ ಕಳುಹಿಸಲಾದ ಡೇಟಾದಲ್ಲಿ ಶೇ.90 ರಷ್ಟು ಪಾವತಿಯಾಗಿರುತ್ತದೆ ಹಾಗೂ ಉಳಿದ ಶೇ.10 ರಷ್ಟು ಡೇಟಾದಲ್ಲಿ ಫಲಾನುಭವಿ ಆಧಾರ್ ಸಂಖ್ಯೆ ಅವರ ಬ್ಯಾಂಕ್ ಖಾತೆಗೆ ಜೋಡಣೆ ಆಗಿರುವುದಿಲ್ಲ ಹಾಗೂ ಬ್ಯಾಂಕ್ನವರು ಸದರಿ ಬ್ಯಾಂಕ್ ಖಾತೆಯನ್ನು ಎನ್.ಪಿ.ಸಿ.ಎಲ್ ಗೆ ಮ್ಯಾಪಿಂಗ್ ಮಾಡದಿರುವ ಕಾರಣ ನೋಂದಾಯಿತ ಕಟ್ಟಡ ಕಾರ್ಮಿಕರ ಖಾತೆಗೆ ಸಹಾಯಧನ ಮೊತ್ತವು ಪಾವತಿಯಾಗಿರುವುದಿಲ್ಲ.

ಆದ್ದರಿಂದ ಇದುವರೆಗೂ ಕೋವಿಡ್-19, 2ನೇ ಅಲೆಯ ಒಂದು ಬಾರಿ ಸಹಾಯಧನ 3,000 ರೂ. ವನ್ನು ಮಂಡಳಿಯಿಂದ ಸ್ವೀಕರಿಸದೇ ಇರುವ ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಜೋಡಣೆ ಆಗಿರುವ ಬಗ್ಗೆ ಹಾಗೂ ಬ್ಯಾಂಕ್ನವರು ಸದರಿ ಬ್ಯಾಂಕ್ ಖಾತೆಯನ್ನು ಎನ್.ಪಿ.ಸಿ.ಎಲ್ ಗೆ ಮ್ಯಾಪಿಂಗ್ ಮಾಡಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಅಗತ್ಯ ದಾಖಲಾತಿಯನ್ನು ನವೆಂಬರ್ 30ರ ಒಳಗೆ ಕಾರ್ಮಿಕ ನಿರೀಕ್ಷಕರು, 1ನೇ ವೃತ್ತ, ಉಡುಪಿ, 2ನೇ ವೃತ್ತ, ಉಡುಪಿ, ಕಾರ್ಕಳ ವೃತ್ತ, ಕುಂದಾಪುರ ವೃತ್ತ ಇಲ್ಲಿಗೆ ಸಲ್ಲಿಸಿ, ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply