ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಪ್ರಭ ಸಂಸ್ಥೆಯ ವತಿಯಿಂದ ಪ್ರತಿವರ್ಷ ಪ್ರದಾನ ಮಾಡಲಾಗುತ್ತಿರುವ ಕೋ.ಮ. ಕಾರಂತ ಪ್ರಶಸ್ತಿಗೆ ಮಾಜಿ ಶಾಸಕ, ಕರ್ನಾಟಕ 3ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ, ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಎ. ಗೋಪಾಲ ಕೃಷ್ಣ ಕೊಡ್ಗಿ ಅವರು ಆಯ್ಕೆಯಾಗಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಕ್ರಷ್ಣರಾಯ ಕೊಡ್ಗಿ ಅವರ ಪುತ್ರ ಎ.ಜಿ. ಕೊಡ್ಗಿ, ಕಳೆದ ಆರು ದಶಕದಲ್ಲಿ ಹಲವು ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ.
ಖ್ಯಾತ ಪತ್ರಕರ್ತ, ಸಾಹಿತಿ, ವಾಗ್ಮಿ ಕುಂದಾಪುರದ ಕೋಣಿ ಮಹಾಬಲೇಶ್ವರ ಕಾರಂತರ ಹೆಸರಲ್ಲಿ ಪ್ರತಿ ವರ್ಷ ಸಾಧಕರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು. ಕೋಣಿ ಶಿವಾನಂದ ಕಾರಂತ ನೇತ್ರತ್ವದ ಸಮಿತಿ ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 23ರಂದು ಆದಿತ್ಯವಾರ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮಿ ನರಸಿಂಹ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ತಿಳಿಸಿದ್ದಾರೆ.