ಸಿದ್ದಾಪುರ: ಗ್ರಾಹಕ ಶಿಕ್ಷಣ ಕ್ಲಬ್ ಉದ್ಘಾಟನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಿದ್ಧಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಎಚ್ಚರ ಗ್ರಾಹಕ ಶಿಕ್ಷಣ ಕ್ಲಬ್‌ನ ಉದ್ಘಾಟನೆಯನ್ನು ನ್ಯಾಯವಾದಿ ಮತ್ತು ಗ್ರಾಹಕ ಹಕ್ಕುಗಳ ಹೋರಾಟಗಾರ ಗುರುರಾಜ್ ರಾವ್ ನೆರವೇರಿಸಿದರು.

Call us

Click Here

ಕ್ಲಬ್‌ನ ಪದಾಧಿಕಾರಿಗಳಿಗೆ ಜಸ್ಟೀಸ್ ನಾಗಮೋಹನ ದಾಸ್ ಬರೆದಿರುವ ಸಂವಿಧಾನ ಓದು ಕೃತಿಯನ್ನು ವಿತರಿಸಿದರು. ಆನಂತರ ಮಾತನಾಡಿದ ಅವರು ಗ್ರಾಹಕರು ತಮ್ಮ ಹಕ್ಕುಗಳ ಉಲ್ಲಂಘನೆಯಾದಾಗ ಮತ್ತು ಅನ್ಯಾಯವಾಗಿದೆ ಎಂದು ಅನಿಸಿದಾಗ ಕಾನೂನಿನ ಸಹಾಯ ಪಡೆಯಬಹುದು. ಆದರೆ, ಕಾನೂನಿನ ಸಹಾಯ ಪಡೆಯಲೂ ಸೂಕ್ತ ಶಿಕ್ಷಣದ ಅಗತ್ಯವಿದೆ. ನಾವು ಎಚ್ಚರವಿರುವ ಗ್ರಾಹಕರಾಗಿದ್ದಾಗ ಮಾತ್ರ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಬಹುದು. ಎಂದರು.

ಈ ಸಂದರ್ಭ ಎಚ್ಚರ ಗ್ರಾಹಕ ಶಿಕ್ಷಣ ಕ್ಲಬ್‌ನ ಪ್ರಾಮಾಣಿಕ ಅಂಗಡಿಯನ್ನು ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ವೈಷ್ಣವಿ ಸಾಮಗ್ರಿಗಳನ್ನು ಖರೀದಿಸುವ ಮೂಲಕ ಚಾಲನೆ ನೀಡಿದರು.

ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ಶಿವಗಂಗಾರವರು ಗುಣಮಟ್ಟದ ಚಿನ್ಹೆಗಳ ಕುರಿತು ಮಾಹಿತಿ ನೀಡಿದರು. ಮುಖ್ಯಶಿಕ್ಷಕರಾದ ಚಂದ್ರ ಕುಲಾಲ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಶಿಕ್ಷಕರಾದ ಉದಯ ಗಾಂವಕಾರ ಕ್ಲಬ್ಬಿನ ಧ್ಯೇಯೋದ್ಧೇಶಗಳನ್ನು ತಿಳಿಸಿದರು. ನ್ಯಾಯವಾದಿ ಮತ್ತು ಗ್ರಾಹಕ ಹಕ್ಕುಗಳ ಹೋರಾಟಗಾರ ಗುರುರಾಜ್ ರಾವ್ ಮತ್ತು ಶಿಕ್ಷಕ- ಶಿಕ್ಷಕಿಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿತಲ್ಯಾ ಸ್ವಾಗತಿಸಿದರು. ಛಾಯಾ ವಂದಿಸಿದರು. ಕುಮಾರಿ ವೈಷ್ಣವಿ ಮತ್ತು ಚಿರಸ್ವಿ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮಂಜುಳಾ ಮತ್ತು ಸಹಪಾಠಿಗಳು ಎಲೆಗಳು ನೂರಾರು ಗೀತೆಯನ್ನು ಹಾಡಿದರು.

Leave a Reply