ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಜಿಲ್ಲಾಡಳಿತದ ಹೊಸ ಧ್ಯೇಯ ವಾಕ್ಯದೊಂದಿಗೆ ‘ನಮ್ಮ ಕಷ್ಟ ನಮ್ಮ ಜವಾಬ್ದಾರಿ’ ಎಂಬ ಶಿರ್ಷಿಕೆಯಡಿ ಸಾರ್ವಜನಿಕರಲ್ಲಿ ಸ್ವಚ್ಛತಾ ಅರಿವು ಮೂಡಿಸುವ ಕೆಲಸಸಕ್ಕೆ ಈಗಾಗಲೇ ಜಿಲ್ಲಾಡಳಿತ ವತಿಯಿಂದ ಕೋಟೇಶ್ವರದಲ್ಲಿ ಚಾಲನೆ ನೀಡಲಾಗಿದೆ.
ನಮಗೆ ಕಷ್ಟಗಳನ್ನು ನಾವೇ ಸರಿಪಡಿಸಿಕೊಂಡು ನಡೆಯಬೇಕಾಗಿದೆ. ಇನ್ನು ಮುಂದೆ ಎಸ್‌ಎಲ್‌ಆರ್‌ಎಂ ಘಟಕ ಬಾಗಿಲಿಗೆ ಬಾರದೇ ಇದ್ದರೂ ಕೂಡ ನಮ್ಮ ಮನೆಯ ಕಸಗಳನ್ನು ಎಸ್‌ಎಲ್‌ಆರ್‌ಎಂ ಘಟಕಗಳ ಕಡೆ ಹೋಗಿ ನೀಡುವ ಪರಿಪಾಠವನ್ನು ರೂಡಿಸಿಕೊಳ್ಳಬೇಕಾಗಿದೆ. ಈ ಕ್ರಮವನ್ನು ಸಮರ್ಪಕವಾಗಿ ಜಾರಿಗೆ ತರುವುದು ಜಿಲ್ಲಾಡಳಿತದ ಆಶಯವಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಹೇಳಿದರು.
ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಜಿಲ್ಲಾ ಪಂಚಾಯಿತಿ ಉಡುಪಿ, ಕರಾವಳಿ ಕಾವಲು ಪೊಲೀಸ್ ಪಡೆ ಗಂಗೊಳ್ಳಿ, ಕೋಟೇಶ್ವರ ಗ್ರಾಮ ಪಂಚಾಯತ್, ಲಯನ್ಸ್ ಕ್ಲಬ್ ಕುಂದಾಪುರ, ಕುಂದಾಪುರ ಅಮೃತಧಾರಾ, ಕುಂದಾಪುರ ಅಮೃತಧಾರಾ, ರಾಷ್ಟ್ರ ಸೇವಿಕಾ ಸಮಿತಿ ಉಡುಪಿ ಆಶ್ರಯದಲ್ಲಿ ಭಾನುವಾರ ಕೋಟೇಶ್ವರ ಹಳಅಳಿವೆ ಬೀಚ್ನಲ್ಲಿ ಜರುಗಿದ ಕಡಲ ತೀರ ಸ್ವಚ್ಛಗೊಳಿಸುವುದರ ಮೂಲಕ ಅಂತಾರಾಷ್ಟ್ರೀಯ ಮಾಲಿನ ತಡೆ ದಿನಾಚರಣೆ ಪ್ರಯುಕ್ತ ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ತಡೆ ಸಪ್ತಾಹಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸ್ವಯಂ ಸೇವಕರು, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ಅಧ್ಯಕ್ಷೆ ಸರಸ್ವತಿ ಪುತ್ರನ್, ರಾಷ್ಟ್ರ ಸೇವಿಕಾ ಸಮಿತಿ ಉಡುಪಿ ಪ್ರಮುಖರಾದ ಕಲ್ಪನಾ ಭಾಸ್ಕರ್, ಸ್ಥಳೀಯ ಮುಖಂಡರಾದ ಗಣೇಶ್ ಪುಂಡಲೀಕ ಬಂಗೇರ, ಕೋಟೇಶ್ವರ ಗ್ರಾಮ ಪಂಚಾಯಿತಿ ಪಿಡಿಒ ತೇಜಪ್ಪ ಕುಲಾಲ್ ಸದಸ್ಯರಾದ ಲೋಕೇಶ್ ಆಂಕದಕಟ್ಟೆ, ನಾಗರಾಜ್ ಎಂ. ಕಾಂಚನ್, ಜಾನಕಿ ಬಿಲ್ಲವ, ರೇವತಿ, ರಾಜು ಪೂಜಾರಿ, ಎ. ಎಲ್ ಆರ್ ಎಂ ಮೇಲ್ವಿಚಾರಕಿ ಅನ್ನಪೂಣ ಕೊಡ್ಲಾಯ, ಶಶಿಕಲಾ, ಕರಾವಳಿ ಕಾವಲು ಪಡೆ ಮತ್ತು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.