ಬೈಂದೂರು ರೋಟರಿ ಕುಟುಂಬ ಸಮ್ಮಿಲನ ಕಾರ್ಯಕ್ರಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸೈನಿಕರು ಯುದ್ಧವನ್ನು ಗೆಲ್ಲುತ್ತಾರೆ. ಆದರೆ ಅದರ ಕೀರ್ತಿ ದಂಡನಾಯಕನ ಪಾಲಾಗುತ್ತದೆ ಎಂಬ ಮಾತಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದು ಕೀರ್ತಿ, ಗೌರವ ಗಳಿಸುವವರಿಗೂ ಇದೇ ಮಾತು ಅನ್ವಯಿಸುತ್ತದೆ. ಏಕೆಂದರೆ ಸಾಧನೆ ಎಂದೂ ಒಬ್ಬರದ್ದಾಗಿರದೇ ಅವರೊಂದಿಗೆ ದುಡಿದ ಹಲವರದಾಗಿರುತ್ತದೆ ಎಂದು ಈ ಸಾಲಿನ ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು.

Call us

Click Here

ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ನಡೆದ ರೋಟರಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಬಿ. ರಾಮ ಟೈಲರ್ ಅವರ ಜತೆ ರೋಟರಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸನ್ಮಾನವು ಕೇವಲ ಸಾಂಕೇತಿಕವಾಗಿರುತ್ತದೆ. ಅದು ತಮಗೊಬ್ಬರಿಗೇ ಅಲ್ಲ; ಬದಲಾಗಿ ತಮ್ಮ ಸಾಧನೆಗೆ ಬೆಂಬಲವಾಗಿ ನಿಂತ ಎಲ್ಲರಿಗೆ ಸಲ್ಲುತ್ತದೆ ಎಂಬ ವಿನೀತ ಭಾವದೊಂದಿಗೆ ಸನ್ಮಾನವನ್ನು ಸ್ವೀಕರಿಸಬೇಕು ಎಂದು ಅವರು ಹೇಳಿದರು.

ತಮಗೆ ನೀಡಿದ ಸನ್ಮಾನಕ್ಕಾಗಿ ಬಿ. ರಾಮ ಟೈಲರ್ ಕೃತಜ್ಞತೆ ಸಲ್ಲಿಸಿದರು. ಉಭಯರನ್ನು ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮತ್ತು ಮಾಜಿ ಸದಸ್ಯ ಕೆ. ಬಾಬು ಶೆಟ್ಟಿ ರೋಟರಿ ಪರವಾಗಿ ಸನ್ಮಾನಿಸಿದರು. ಅಧ್ಯಕ್ಷತೆವಹಿಸಿದ್ದ ರೋಟರಿ ಅಧ್ಯಕ್ಷ ಡಾ. ಪ್ರವೀಣ್ ಶೆಟ್ಟಿ ಸ್ವಾಗತಿಸಿದರು. ಸದಸ್ಯ ಉದಯ ಆಚಾರ್ ಪ್ರಾರ್ಥಿಸಿದರು. ಗೌರೀಶ್ ಹುದಾರ್ ಮತ್ತು ವಕೀಲ ಮೋಬಿ ಪಿ. ಸಿ. ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ಮಂಗೇಶ ಶ್ಯಾನುಭಾಗ್ ವಂದಿಸಿದರು. ಇನ್ನರ್‌ವೀಲ್ ಅಧ್ಯಕ್ಷೆ ಶಾಂತಿ ಪಿರೇರಾ ಇದ್ದರು. ಸದಸ್ಯ ಸುಧಾಕರ ಪಿ ಬೈಂದೂರು ಕೆಲವು ಸೂಚನೆಗಳನ್ನು ಪ್ರಕಟಿಸಿದರು. ಅಗಲಿದ ನಟ ಪುನಿತ್ ರಾಜ್‌ಕುಮಾರ್ ಇವರಿಗೆ ಗೋವಿಂದ ಎಂ. ಮತ್ತು ಮಂಜುನಾಥ ಮಹಾಲೆ ನುಡಿನಮನ ಸಲ್ಲಿಸಿದರು. ನಂತರ ಮೌನಾಚರಣೆ ಮೂಲಕ ಪುನಿತ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕುಂದಾಪುರದಲ್ಲಿ ಕಳೆದ ವಾರ ನಡೆದ ಜಿಲ್ಲಾ ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬೈಂದೂರು ರೋಟರಿ ಸದಸ್ಯರು ಎಲ್ಲಾ ವಿಧದ ಕಲಾಪ್ರಕಾರಗಳಲ್ಲಿ ಸ್ಪರ್ಧಿಸಿ 7 ಪ್ರಶಸ್ತಿ ಪಡೆದು ಚಾಂಪಿಯನ್ ಪಟ್ಟಕ್ಕೇರಿದ್ದು, ವಿಜೇತ ಸದಸ್ಯರು ಈ ವೇದಿಕೆಯಲ್ಲಿ ಮರು ಪ್ರದರ್ಶನ ನೀಡಿದರು.

Click here

Click here

Click here

Click Here

Call us

Call us

Leave a Reply