ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿವಿಧ ಸುಮುದಾಯದ ಮೋರ್ಚಾಗಳ ಮೂಲಕ ಸಂಘಟನಾ ಶಕ್ತಿ ಹೆಚ್ಚಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ವಿವಿಧ ಮೋರ್ಚಾಗಳ ಸಂಘಟನೆ ಮಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಯನ್ನು ಕೊನೆಹಂತದ ಜನರಿಗೂ ತಲುಪಿಸುವ ಮೂಲಕ ಪಕ್ಷದ ಬಲವರ್ಧನಗೆ ವಿಶಿಷ್ಠ ಕೊಡಗೆ ನೀಡಲಾಗುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ರಾಜ್ಯ ಬಿಜೆಪಿ ಹಿಂದುಳಿದ ಮೋಚಾ ಆಶ್ರಯದಲ್ಲಿ ಕೋಟೇಶ್ವರ ಸಹನಾ ಕನ್‌ವೆಶನ್ ಶ್ರೀ ಕೃಷ್ಣ ಹಾಲ್‌ನಲ್ಲಿ ಗುರುವಾರ ನಡೆದ ಹಿಂದುಳಿದ ವರ್ಗ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ ವಿವಿಧ ಕಾರಣಗಳ ನವ ಇಟ್ಟುಕೊಂಡು ರಾಷ್ಟ್ರದ್ರೋಹ ಎಸಗುವ, ಭಯೋತ್ಪಾದನೆ, ಉಗ್ರವಾದ ಎಂದಿಗೂ ಸಹಿಸೋದಿಲ್ಲ ಎಂದ ಅವರು, ವಿದ್ರೋಹಿಗಳ ಹೆಡೆಮುರಿಕಟ್ಟಿ, ಈ ನೆಲದ ಕಾನೂನು ಮುರಿಯುವುದನ್ನು ಎಂದಿಗೂ ಸಹಿಸೋದಿಲ್ಲ ಎಂದು ಹೇಳಿದರು.
ರಾಜಾಜಿನಗರ ಮಾಜಿ ಶಾಸಕ ದೇ.ಲ.ನರೇಂದ್ರ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕೊಯಿಲಡಿ ಸುರೇಶ್ ನಾಯಕ್, ದಕ ಬಿಜೆಪಿ ಸಹ ಉಸ್ತುವಾರಿ ರಾಜೇಶ್ ಕಾವೇರಿ, ಮಾಜಿ ಶಾಸಕ ಪದ್ಮನಾಭ ಕೊಠಾರಿ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಹಿಂದುಳಿದ ಮೋರ್ಚಾ ರಾಜ್ಯ ಪ್ರಧಾನ ಕಾರ‍್ಯದರ್ಶಿ ಸುರೇಶ್ ಬಾಬು, ಪ್ರಧಾನ ಕಾರ್ಯದರ್ಶಿ ಮಹೇಂದ್ರ ಪಣಿಯಾಣಿ, ಆಹಾರ ಮತ್ತು ನಾಗರಿಕ ಪೂರೈಕೆ ಸಮಿತಿ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಒಬಿಸಿ ಜಿಲ್ಲಾ ಮೋರ್ಚಾದ ವಿಠಲ ಪೂಜಾರಿ, ಯುವ ಮೋರ್ಚಾ ವಿವಿಧ ಪದಾಧಿಕಾರಿಗಳು ಉಪಸ್ಥಿತಿರಿದ್ದರು.
ಒಬಿಸಿ ಜಿಲ್ಲಾ ಪ್ರಧಾನ ಕಾರ‍್ಯದರ್ಶಿಗಳಾದ ಸತೀಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಅರುಣ್ ಕುಮಾರ್ ಬಾಣ ವಂದಿಸಿದರು.