ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜು ಮತ್ತು ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ಎನ್‌ಸಿಸಿ ಸಹಯೋಗದಲ್ಲಿ ಪುನೀತ್ ಸಾಗರ್ ಅಭಿಯಾನ (ಬೀಚ್ ಸ್ವಚ್ಛತಾ ಮತ್ತು ಜಾಗೃತಿ ಅಭಿಯಾನ) ಕಾರ್ಯಕ್ರಮ ಇತ್ತಿಚಿಗೆ ಕೋಡಿ ಬೀಚ್ ಬಳಿ ನಡೆಯಿತು.
ಎನ್‌ಸಿಸಿ 21 ಕರ್ನಾಟಕ ಬೆಟಾಲಿಯನ್ ನಿರ್ದೇಶನದಂತೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಎನ್‌ಸಿಸಿ ಭೂದಳದ ಅಧಿಕಾರಿ ಲೆಫ್ಟಿನೆಂಟ್ ಅಂಜನ್ ಕುಮಾರ್ ಎ. ಎಲ್ ಮತ್ತು ಬಿ. ಬಿ. ಹೆಗ್ಡೆ ಕಾಲೇಜಿನ ಎನ್.ಸಿ.ಸಿ ವಿಬಾಗದ ಕೇರ್‌ಟೇಕರ್ ಶಿವರಾಜ್ ಅವರು ಭಾಗವಹಿಸಿದ್ದರು. ಸುಮಾರು 85 ಎನ್.ಸಿ.ಸಿ ಕೆಡೆಟ್‌ಗಳು ಭಾಗವಹಿಸಿದ್ದರು.