ಬೈಂದೂರು ಪ್ರಥಮದರ್ಜೆ ಕಾಲೇಜು: ಎನ್.ಎಸ್.ಎಸ್ ಕಾರ್ಯಚಟುವಟಿಕೆಗಳ ಉದ್ಘಾಟನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ 1 ಮತ್ತು ಘಟಕ 2ರ 2021-22ರ ಸಾಲಿನ ಕಾರ್ಯಕ್ರಮಗಳ ಉದ್ಘಾಟನೆ ಇತ್ತಿಚಿಗೆ ನಡೆಯಿತು.

Call us

Click Here

ಬೈಂದೂರು ಪೊಲಿಸ್‌ ಠಾಣೆ ಆರಕ್ಷಕ ಉಪನೀರಿಕ್ಷಕರಾದ ಪವನ್‌ ನಾಯಕ್‌ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ, ಗುರಿಗಳು, ದೇಶ ಕಟ್ಟುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವದ ಬಗ್ಗೆ ಅರಿವು ಮುಡಿಸಿದರು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ಯಾವ ತರಹದ ಸಿದ್ಧತೆಯನ್ನು ನಡೆಸಬೇಕು, ಪಠ್ಯಕ್ರಮ ಮತ್ತು ಯಾವ ಪುಸ್ತಕಗಳನ್ನು ಓದಬೇಕು ಅನ್ನುವ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ರಘು ನಾಯ್ಕ ಅವರು ವಹಿಸಿದ್ದರು. ಘಟಕ 2 ರ ಯೋಜನಾಧಿಕಾರಿ ಲತಾ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ದ್ವಿತೀಯ ಬಿ ಕಾಂ ವಿದ್ಯಾರ್ಥಿನಿ ಕು. ಸುಶ್ಮೀತಾ ನಿರೂಪಿಸಿದರು. ದ್ವಿತೀಯ ಬಿ ಕಾಂ ವಿದ್ಯಾರ್ಥಿನಿ ಮೋನಾಕ್ಷಿ ಸ್ವಾಗತಿಸಿದರು. ಘಟಕ 1 ರ ಯೋಜನಾಧಿಕಾರಿ ನಾಗರಾಜ ಶೆಟ್ಟಿ ಅವರು ವಂದಿಸಿದರು.

Leave a Reply