ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಕರ್ನಾಟಕ ಸರ್ಕಾರ ಮೈಸೂರು ಇವರ ನೇತೃತ್ವದಲ್ಲಿ ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಹೊಸಮಠದ ಕೊರಗರ ಕಾಲೋನಿಯಲ್ಲಿ ಎಸ್‌ಇಪಿ ಮತ್ತು ಟಿಎಸ್‌ಪಿ ಕಾಯ್ದೆಯ ಮಾಹಿತಿ ಕಾರ‍್ಯಗಾರ ನಡೆಯಿತು.
ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಮೇಶ್ ಕುಲಾಲ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು ಕೆದೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಧವ ಗ್ರಾಮ ಪಂಚಾಯತ್‌ನಲ್ಲಿ ಕೊರಗರಿಗೆ ಸಿಗುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು. ಕೋಟ ಆರಕ್ಷಕ ಠಾಣೆಯ ಎಎಸ್‌ಐ ಗಣೇಶ್ ಮಾತನಾಡಿ, ಕೊರಗರ ಮೇಲೆ ದೌರ್ಜನ್ಯ ನಡೆದರೇ ಹೇಗೆ ದೂರು ನೀಡಬೇಕು ಮತ್ತು ಪೊಲೀಸ್ ಇಲಾಖೆಯಲ್ಲಿ ಸಿಗುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ಕೆದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ, ಪಂಚಾಯತ್ ಸದಸ್ಯೆ ಗುಬ್ಬಿ ಉಪಸ್ಥಿತರಿದ್ದರು. ಕುಂಭಾಸಿ ಮಕ್ಕಳ ಮನೆ ಶಿಕ್ಷಕಿ ವಿನುತಾ ಸ್ವಾಗತಿಸಿದರು. ಬುಡಕಟ್ಟು ಸಂಶೋಧನಾ ಕೇಂದ್ರದ ಮನೋಜ್ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಮನೆ ಸಂಚಾಲಕ ಗಣೇಶ್ ವಿ ಕುಂದಾಪುರ ವಂದಿಸಿದರು.