ಶಿಕ್ಷಕರ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನಾಧ್ಯಕ್ಷರಾಗಿ ಸುರೇಶ್ ಮರಕಾಲ ಸಾಬ್ರಕಟ್ಟೆ ಆಯ್ಕೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಡಾ| ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ|| ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ನಡೆಯುವ ಉಡುಪಿ ಜಿಲ್ಲೆಯ ಶಿಕ್ಷಕರ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ ನಾವಿಕ-೨೦೨೧ (ತೀರದ ಹೆಜ್ಜೆಯ ಸಾಲು) ಸಮ್ಮೇಳನಾಧ್ಯಕ್ಷರಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಸುರೇಶ್ ಮರಕಾಲ ಸಾಬ್ರಕಟ್ಟೆ ಅವರು ಆಯ್ಕೆ ಆಗಿದ್ದಾರೆ.

Call us

Click Here

ರಾಷ್ಟ್ರ ಪ್ರಶಸ್ತಿ ಪಡೆದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಹುಟ್ಟು ಹಾಕಿದ ಶ್ರೀಸುರೇಶ್ ಮರಕಾಲ ಅವರು ಬಹುಮುಖ ಪ್ರತಿಭೆ. ಶಿಕ್ಷಣದ ಜೊತೆಗೆ ಮಕ್ಕಳಿಗೆ ಮಕ್ಕಳ ಬೌದ್ದಿಕ ವಿಕಸನಕ್ಕೆ ಸಹಕಾರವಾಗಬಲ್ಲ ಶಾಡೋಪ್ಲೇ, ಕನ್ನಡಿ ಬರಹ, ಪಿಯಾನೋ ಕೀಬೋರ್ಡ್ ಕಲಿಕೆ, ನಾಟಕಾಭಿನಯ, ಥರ್ಮೋಫೋಮ್, ಪೇಪರ್ ಕ್ರಾಫ್ಟ್ ಕಾರ್ಯಾಗಾರ, ತೋಟಗಾರಿಕ ಶಿಕ್ಷಣ, ಪ್ಲಂ ಬಿಂಗ್ ಶಿಕ್ಷಣ, ಚಿತ್ರಕಲೆ, ಗೋಡೆ ಪೈಟಿಂಗ್ ಸಂಗೀತ ಇಂತಹ ಹಲವಾರು ವಿಷಯಗಳನ್ನು ಮಕ್ಕಳಿಗಾಗಿ ಪ್ರಸ್ತುತ ಪಡಿಸಿದ್ದಾರೆ. ಉತ್ತಮ ಸಾಹಿತಿಯೂ ಆಗಿರುವ ಇವರ ಅನೇಕ ಕಥೆ ಕವನ ಲೇಖನಗಳು ರಾಜ್ಯದ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಿಸೆಂಬರ್ ೩೧ ರಂದು ಶಿಕ್ಷಕರ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನ ನಾವಿಕ-೨೦೨೧ (ತೀರದ ಹೆಜ್ಜೆಯ ಸಾಲು) ಕಾರ್ಯಕ್ರಮ ನಡೆಯಲಿದ್ದು ಜಿಲ್ಲೆಯ ವಿವಿಧ ಶಿಕ್ಷಕರಿಂದ ಬಹುವಿಧ ಗೋಷ್ಠಿ, ದಿಕ್ಸೂಚಿ ಭಾಷಣ, ಭಾವಗಾನ, ಗೌರವ ಸಮರ್ಪಣೆ, ನಡೆಯಲಿದ್ದು ವಿಠ್ಠಲ್ ನಾಯಕ್ ಪುತ್ತೂರು ಇವರಿಂದ ಸಾಹಿತ್ಯದ ಆಸಕ್ತಿ, ಮನು ಹಂದಾಡಿಯವರಿಂದ ಜೀವನದಲ್ಲಿ ಹಾಸ್ಯ, ಡಾ. ಅಶೋಕ್ ಕಾಮತ್ ಅವರಿಂದ ಹೊಸ ಶಿಕ್ಷಣ ನೀತಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಶಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕಾರ್ಯಕ್ರಮ ಸಂಯೋಜಕ ಶಿಕ್ಷಕ ಸತೀಶ್ ವಡ್ಡರ್ಸೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply