ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಮ್ಮ ಕಣ್ಣೆದುರು ಆನೇಕ ರೀತಿಯ ಅಪರಾಧಗಳು ಸಮಾಜದಲ್ಲಿ ನಡೆಯುತ್ತಿರುತ್ತದೆ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೀಡಿಗೇಡಿಗಳನ್ನು ಬೆಳೆಯಲು ಸಾರ್ವಜನಿಕರು ಸಹಕಾರ ನೀಡದೆ ಅಂತಹ ಘಟನೆಗಳಾದಾಗ ಕೊಡಲೇ ನಮ್ಮ ಗಮನಕ್ಕೆ ತಂದರೇ ಸೂಕ್ತ ಕಾನೂನು ಕ್ರಮ ಜರುಗಿಸಲು ಸಹಕಾರಿಯಾಗುತ್ತದೆ ಎಂದು ಪ್ರೊಬೇಶನರಿ ಪಿಎಸ್‌ಐ ಜಯಶ್ರೀ ಹುನ್ನೂರು ಹೇಳಿದರು.
ಕುಂದಾಪುರ ಪೊಲೀಸ್ ಠಾಣೆಯ ನೇತೃತ್ವದಲ್ಲಿ ಕೋಟೇಶ್ವರ ಗ್ರಾಮ ಪಂಚಾಯತ್‌ನಲ್ಲಿ ಜರುಗಿದ ಅಪರಾಧ ತಡೆ ಮಾಸಚಾರಣೆಯ ಕಾರ‍್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಅವರು ಗ್ರಾಮಗಳಲ್ಲಿ ಶಾಲಾ ಕಾಲೇಜುಗಳು ಬಿಡುವ ವೇಳೆ ಮದ್ಯಪಾನಿಗಳಿಂದ ವಿದ್ಯಾರ್ಥಿಗಳಿಗೆ ಕೀಟಲೆ ನೀಡುವುದಲ್ಲದೇ ಅನವಶ್ಯಕ ತೊಂದರೆ ಕೊಡುವುದು, ಅಸಹಾಯಕ ವೃದ್ಧರಿಗೆ ಹಿಂಸೆ ನೀಡುವುದು ಅಪರಾಧವಾಗಲಿದೆ. ಗ್ರಾಮಗಳಲ್ಲಿ ಕುಡಿಯುವ ನೀರು, ಸಂದ್ಯಾ ಸುರಕ್ಷಾ, ವೃದ್ಯಾಪವೇತನ ಸೇರಿದಂತೆ ಅಸಹಾಯಕರಿಗೆ ಸಹಾಯ ಹಸ್ತ ಬೇಕಾದಲ್ಲಿ ಇಲಾಖೆಗಳ ಗಮನಕ್ಕೆ ತಂದರೇ ಸೂಕ್ತ ನ್ಯಾಯ ಒದಗಿಸಲು ಸಹಾಯವಾಗಲಿದೆ ಎಂದರು.
ಕುಂದಾಪುರ ಪೊಲೀಸ್ ಠಾಣೆಯ ಎಎಸ್‌ಐ ಅಶೋಕ್ ಎಚ್.ಎಸ್, ಠಾಣೆಯ ಸಿಬ್ಬಂದಿಗಳಾದ ಅವಿನಾಶ್, ರವೀಂದ್ರ, ರಮೇಶ್, ಸಚಿನ್ ಮತ್ತಿತರರು ಉಪಸ್ಥಿತರಿದ್ದರು. ಕುಂದಾಪುರ ಮುಖ್ಯ ಠಾಣೆಯ ಸಿಬ್ಬಂದಿ ಸಚಿನ್ ಶೆಟ್ಟಿ ಕಾರ‍್ಯಕ್ರಮ ನಿರ್ವಹಿಸಿದರು.