ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ.ಜ04: ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಮೀನುಗಾರರು ರಕ್ಷಿಸಿದ ಘಟನೆ ಮಧ್ಯಾಹ್ನ ಹೇರಿಕುದ್ರು ಸೇತುವೆ ಬಳಿ ನಡೆದಿದೆ.
ಮಂಗಳೂರು ಮೂಲದ ಯುವಕನೋರ್ವ ಮಂಗಳವಾರ ಮಧ್ಯಾಹ್ನ 12ರ ಸಮಯದಲ್ಲಿ ಕುಂದಾಪುರದ ಕಡೆಯಿಂದ ನಡೆದುಬಂದ ಹೇರಿಕುದ್ರು ಸೇತುವೆ ಮೇಲೆ ಬಂದು ತುಸು ಸಮಯ ಆಚೀಚೆ ಅಡ್ಡಾಡಿದ್ದಾನೆ. ನಂತರ ಕೆಲವರು ನೋಡ ನೋಡುತ್ತಲೇ ಏಕಾಏಕಿ ಸೇತುವೆಯಿಂದ ಪಂಚಗಂಗಾವಳಿ ನದಿಗೆ ಹಾರಿದ್ದಾನೆ. ಅಷ್ಟರಲ್ಲಿ ಇದನ್ನು ಗಮನಿಸಿದ ದೂರದ ನದಿಯ ದಡದಲ್ಲಿದ್ದ ಖಾರ್ವಿ ಸಮಾಜದ ಮೀನುಗಾರ ಯುವಕರು ಕೂಡಲೇ ದೋಣಿ ಮೂಲಕ ಸಾಗಿ ನೀರಿನಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಕೊಸರಾಡುತ್ತಿದ್ದವನ್ನು ಎತ್ತಿ ದಡಕ್ಕೆ ತಲುಪಿಸಿದ್ದಾರೆ.
ಯುವಕನನ್ನು ರಕ್ಷಿಸಿ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಯುವಕನ ಬಗ್ಗೆ ಹೆಚ್ಚಿನ ವಿವರ, ಆತ್ಮಹತ್ಯೆಯ ಕಾರಣ ತಿಳಿದು ಬಂದಿಲ್ಲ