ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಧಾನಮಂತ್ರಿಗಳಿಗೆ ಪಂಜಾಬ್ ಕಾಂಗ್ರೆಸ್ ಸರ್ಕಾರದಿಂದ ಕ್ಷಮಿಸಲಾಗದ ದೊಡ್ಡ ಭದ್ರತಾ ಲೋಪವಾಗಿದೆ. ಇಡೀ ದೇಶ ಪ್ರಜೆಗಳು ಇಂತಹ ದುರಂತ ಘಟನೆಯನ್ನು ಖಂಡಿಸುತ್ತಾರೆ. ಪ್ರಧಾನಿಗಳ ಭದ್ರತೆಯ ಬಗ್ಗೆ ನಿರ್ಲಕ್ಷ್ಯ ತೋರಿದರೆ ಹೇಗೆ ಎಂಬುದು ಇಡೀ ದೇಶ ಪ್ರಜೆಗಳಿಗೆ ಪ್ರಶ್ನೆಯಾಗಿದೆ. ಈ ನಾಚಿಕೆಗೇಡಿನ ಘಟನೆಯ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕೆಂದು ನಾನು ಈ ಮೂಲಕ ಒತ್ತಾಯಿಸುತ್ತೇನೆ. ಪಂಜಾಬ್ ಕಾಂಗ್ರೆಸ್ ಸರ್ಕಾರ ಇಡೀ ದೇಶದ ಜನತೆಗೆ, ಪ್ರಧಾನಿಗಳಿಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ.
ಪಂಜಾಬಿನಲ್ಲಿ ನಡೆದ ಬೃಹತ್ ಪ್ರತಿಭಟನೆಯಿಂದಾಗಿ 20 ನಿಮಿಷಗಳ ಕಾಲ ಸಮಯ ಕಳೆದು ಪ್ರಧಾನಮಂತ್ರಿಗಳು ಬದುಕಿ ಬಂದಿರುವುದು ಹೆಚ್ಚು. ಇಂತಹ ವಿಚಿತ್ರ ಘಟನೆಯನ್ನು ನೋಡಿಕೊಂಡು ಪಂಜಾಬ್ ಕಾಂಗ್ರೆಸ್ ಸರ್ಕಾರ ದೇಶದ ಪ್ರಧಾನಿಗಳಿಗೆ ರಕ್ಷಣೆ ನೀಡದೇ ಇರುವುದು ದೊಡ್ಡ ದುರಂತವಾಗಿದೆ. ಇದನ್ನು ಯಾರು ಕೂಡ ಕ್ಷಮಿಸುವುದಿಲ್ಲ. ಪ್ರಧಾನಮಂತ್ರಿಗಳ ವಿರುದ್ಧ ಷಡ್ಯಂತ್ರ ನಡೆಸಿದವರ ವಿರುದ್ಧ ಮತ್ತು ತಪ್ಪಿತಸ್ಥರನ್ನು ತಕ್ಷಣವೇ ಹುಡುಕಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.