ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡಿತರ ಕಾರ್ಡುದಾರರಿಗೆ ಇನ್ನುಮುಂದೆ ಪಡಿತರ ಕೇಂದ್ರಗಳಲ್ಲಿ ಇನ್ನುಮುಂದೆ ಕುಚ್ಚಿಲಕ್ಕಿ ದೊರೆಯಲಿದೆ. ಕೇಂದ್ರ ಸರಕಾರ ಅನುಮತಿ ನೀಡಿರುವ ಬಗ್ಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಘೋಷಣೆ ಮಾಡಿದ್ದಾರೆ.
ಪ್ರತಿ ತಿಂಗಳು ಪಡಿತರ ಕಾರ್ಡ್ ಮೂಲಕ ಬಡವರಿಗೆ ಕುಚ್ಚಿಲಕ್ಕಿ ವಿತರಣೆ ಮಾಡಲು ಕೇಂದ್ರ ಅನುಮತಿ ನೀಡಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ತಿಂಗಳಿಗೆ 1 ಲಕ್ಷ ಕ್ವಿಂಟಾಲ್ ಅಕ್ಕಿ ಬಿಡುಗಡೆಯಾಗುತ್ತದೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಹೋರಾಟವನ್ನು ಮಾತುಕತೆಯನ್ನು ಮಾಡಿದ ನಂತರ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಕುಚ್ಚಿಲಕ್ಕಿ ವಿತರಿಸಲು ಶಿಫಾರಸು ಮಾಡಿದ ಮುಖ್ಯಮಂತ್ರಿ, ಆಹಾರ ಸಚಿವ ಉಮೇಶ್ ಕತ್ತಿ, ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿಗೆ ಧನ್ಯವಾದ ಸಲ್ಲಿಕೆ ಮಾಡುತ್ತೇನೆ.
ಎಂ4, ಜಯಾ ತಳಿಯ ಅಕ್ಕಿಯನ್ನು ಖರೀದಿ ಮಾಡಿ ವಿನಿಯೋಗಿಸುತ್ತೇವೆ ಎಂದರು. ಈಗಾಗಲೇ ಕೆಲವೆಡೆಯಿಂದ ಭತ್ತ ಖರೀದಿಯಾಗಿದೆ. ಖರೀದಿ ಮಾಡಿದ ಭತ್ತವನ್ನು ಮೊದಲು ವಿತರಣೆ ಮಾಡುತ್ತೇವೆ. ಹೊಸ ಖರೀದಿಯ ಸಂದರ್ಭ ಕುಚ್ಚಿಲಕ್ಕಿಯನ್ನು ಖರೀದಿ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.