ಕೃತಕ ರಕ್ತ ಉತ್ಪಾದನೆ ಸಾಧ್ಯವಿಲ್ಲ. ರಕ್ತದಾನದ ಮೂಲಕ ಮೂರು ಜೀವ ಉಳಿಸಲು ಸಾಧ್ಯ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾಲೇಜಿನ ಇತರ ಘಟಕ ಮತ್ತು ಸಮಿತಿ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ, ಬೈಂದೂರು, ಜೆಸಿಐ ಉಪ್ಪುಂದ, ಮಾರಿಕಾಂಬಾ ಯೂತ್ ಕ್ಲಬ್ ಕಳವಾಡಿ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರ ಜರುಗಿತು.

Call us

Click Here

ಕಾರ್ಯಕ್ರಮವನ್ನು ಉದ್ಘಾಟಿಸಿ ಕುಂದಾಪುರ ಭಾರತೀಯ ರೆಡ್‌ಕ್ರಾಸ್‌ನ ಅಧ್ಯಕ್ಷ ಜಯಕರ ಶೆಟ್ಟಿ ಮಾತನಾಡಿ, ಕೆಲವು ತುರ್ತು ಚಿಕಿತ್ಸೆಯ ಸಂದರ್ಭ ರಕ್ತದ ಕೊರತೆಯಿಂದ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಅದನ್ನು ತಡೆಗಟ್ಟಿದ ಪುಣ್ಯ ರಕ್ತದಾನಿಗೆ ಸಲ್ಲುತ್ತದೆ. ಹಾಗಾಗಿ ರಕ್ತದಾನವನ್ನು ಜೀವದಾನ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.

ವಿಜ್ಞಾನ ಎಷ್ಟೇ ಮುಂದುವರಿದರೂ ಕೃತಕ ರಕ್ತ ಉತ್ಪಾದನೆ ಸಾಧ್ಯವಿಲ್ಲ. ಅದು ನಮ್ಮಲ್ಲೆ ಉತ್ಪಾದನೆಯಾಗಿ ನಮ್ಮೊಳಗೆ ಹಂಚಿಕೆಯಾಗಬೇಕು. ಈ ನೆಲೆಯಲ್ಲಿ ಸುಮಾರು ೨.೫ ಕೋಟಿ ರೂ.ವೆಚ್ಚದಲ್ಲಿ ಕುಂದಾಪುರದಲ್ಲಿ ರಕ್ತನಿಧಿ ಕೇಂದ್ರ ಸ್ಥಾಪಿಸಲಾಗಿದೆ. ಇದು ವಾರದ ಏಳು ದಿನಗಳು ಸೇರಿ ವರ್ಷವಿಡೀ ಸಮಾಜಕ್ಕಾಗಿ ಹಾಗೂ ಸ್ಥಳಿಯವಾಗಿ ಜನಸಾಮಾನ್ಯರ ಆರೋಗ್ಯ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತದೆ. ಯಾವುದೇ ಲಾಭದ ದೃಷ್ಠಿಯಿಂದ ಸಂಸ್ಥೆ ಆರಂಭಿಸಿದ್ದಲ್ಲ. ಹೀಗಾಗಿ ಇಂದಿನ ಯುವ ಜನತೆ ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದೆ ಬರಬೇಕು. ಒಬ್ಬರು ನೀಡುವ ರಕ್ತದಿಂದ ಮೂರು ಜೀವಗಳನ್ನು ಉಳಿಸಬಹುದು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ರಘು ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಐಆರ್‌ಸಿ ಅಧ್ಯಕ್ಷ ನಿತಿನ್ ಶೆಟ್ಟಿ, ಖಜಾಂಚಿ ಸಂತೋಷ್‌ಕುಮಾರ್ ಶೆಟ್ಟಿ, ಕುಂದಾಪುರ ಐಆರ್‌ಸಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಯೂಥ್ ಕೊ-ಆರ್ಡಿನೇಟರ್ ಯು. ಸತ್ಯನಾರಾಯಣ ಪುರಾಣಿಕ, ಉಪ್ಪುಂದ ಜೆಸಿಐ ಅಧ್ಯಕ್ಷ ಉಬ್ಜೇರಿ ನಾಗರಾಜ ಪೂಜಾರಿ, ಕಳವಾಡಿ ಮಾರಿಕಾಂಬಾ ಯೂಥ್‌ಕ್ಲಬ್ ಅಧ್ಯಕ್ಷ ಗಣೇಶ್ ಕಳವಾಡಿ, ಸಂಯೋಜಕ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ರೋಟರಿ ಕ್ಲಬ್ ಕಾರ್ಯದರ್ಶಿ ವೈ. ಮಂಗೇಶ ಶ್ಯಾನುಭಾಗ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ನಯನ ಸ್ವಾಗತಿಸಿ, ಸೌಮ್ಯ ಪ್ರಾರ್ಥಿಸಿ ನಿರೂಪಿಸಿದರು. ಮೋನಾಕ್ಷಿ ಪ್ರಾಸ್ತಾವಿಸಿ, ನವ್ಯ ವಂದಿಸಿದರು. ಸುಮಾರು ೫೫ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

Leave a Reply