ಸಿ.ಎ ಪರೀಕ್ಷೆಯಲ್ಲಿ ಕುಂದಾಪುರ ಶಿಕ್ಷ ಪ್ರಭಾ ಅಕಾಡೆಮಿ ವಿದ್ಯಾರ್ಥಿಗಳ ಸಾಧನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ ಸಿ.ಎ/ಸಿ.ಎಸ್/ಸಿ.ಎಮ್.ಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಇನ್‍ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿ.ಎ ಅಂತಿಮ ಪರೀಕ್ಷೆ ಮತ್ತು ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವುದರ ಮೂಲಕ ವಿಶೇಷ ಸಾಧನೆಗೈದಿದ್ದಾರೆ.

Call us

Click Here

ಡಿಸೆಂಬರ್‍ನಲ್ಲಿ ನಡೆದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಪುನೀತ್ ಶೆಟ್ಟಿ (449) ಅಂಕಗಳನ್ನು ಪಡೆಯುವುದರ ಮೂಲಕ ಸಿ.ಎ ಪರೀಕ್ಷೆ ಎಲ್ಲಾ ಹಂತಗಳನ್ನು ತೇರ್ಗಡೆ ಹೊಂದಿ ಲೆಕ್ಕ ಪರಿಶೋಧಕನಾಗಿ ಹೊರಹೊಮ್ಮಿದ್ದಾರೆ. ಮತ್ತು ಅಂತಿಮ ಪರೀಕ್ಷೆಯ ಗ್ರೂಪ್ 2 ವಿಭಾಗದಲ್ಲಿ ಪ್ರಕಾಶ್ ಶೆಟ್ಟಿ 400 ಅಂಕಗಳಲ್ಲಿ 212 ಅಂಕ ಪಡೆಯುವುದರ ಮೂಲಕ ಸಿ.ಎ ಅಂತಿಮ ಪರೀಕ್ಷೆಯ ಎರಡನೇ ಗ್ರೂಪ್‍ನ್ನು ಉತ್ತೀರ್ಣರಾಗಿರುತ್ತಾರೆ.

ಡಿಸೆಂಬರ್ 2021 ರಲ್ಲಿ ನಡೆದ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಹಲವು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಅನಿಕೇತ್ ಕೆದ್ಲಾಯ(278), ಕಾರ್ತಿಕ್ ವಿ(260), ಶ್ರೀ ನಿಧಿ ಹೆಗ್ಡೆ(237), ಅನುಷ್.ಎ.ದೇವಾಡಿಗ(236), ಶ್ಯಾವ್ಯ ಶೆಟ್ಟಿ(227), ಅವಿನ್ ಶೆಟ್ಟಿ(226), ದಿವ್ಯಾ ದೀಪ್ತಿ(219), ರಶ್ವಥ್ ಮೊಗವೀರ(214), ದರ್ಶನ್ ದೇವಾಡಿಗ(214), ರೋಹಿತ್ ಆಚಾರ್ಯ(210), ರಂಜನ್(210), ಶುಭಕರ್(210), ಸೃಜನ್ ಆಚಾರ್ಯ(205), ಸುದರ್ಶನ್ ಉಪಾಧ್ಯ(203), ಆಶಿಕಾ(200) ಅಂಕಗಳೊಂದಿಗೆ ತೇರ್ಗಡೆ ಹೊಂದಿ ಸಿ.ಎ ಇಂಟರ್‍ಮೀಡಿಯೆಟ್ ಹಂತಕ್ಕೆ ಆಯ್ಕೆಗೊಂಡಿರುತ್ತಾರೆ. ಶಿಕ್ಷ ಪ್ರಭಾ ಅಕಾಡೆಮಿಯು ಈಗಾಗಲೇ ಸಿ.ಎ/ಸಿ.ಎಸ್ ನಂತಹ ಪ್ರೋಫೇಶನ್ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಾ ಬಂದಿದ್ದು ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿರುತ್ತಾರೆ. ಸಂಸ್ಥೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತುದಾರರಿಂದ ತರಬೇತಿಯ ಜೊತೆಗೆ ನಿರಂತರ ಪೂರಕ ಪರೀಕ್ಷೆಗಳನ್ನು ನಡೆಸಿ ಪರೀಕ್ಷೆಗೆ ಸಿದ್ಧಗೊಳಿಸಲಾಗುತ್ತದೆ. ರಾಜ್ಯದ ನಾನಾ ಭಾಗಗಳಿಂದ ಅನುಭವಿ ಚಾರ್ಟೆಡ್ ಅಕೌಂಟೆಂಟ್ಸ್ ಮತ್ತು ಕಂಪನಿ ಸೆಕ್ರೆಟರಿ ಅವರೊಂದಿಗೆ ಆಯಾ ವಿಷಯ ತಜ್ಞರಿಂದ ತರಗತಿಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸುತ್ತಾ ಭೋಧಕ ಸಿಬ್ಬಂದಿಗಳ ಶ್ರಮ, ಸಂಸ್ಥೆ ಅನುಸರಿಸುತ್ತಿರುವ ಆಧುನಿಕ ಶಿಕ್ಷಣ ಪದ್ಧತಿಯ ಜೊತೆಗೆ ವಿದ್ಯಾರ್ಥಿಗಳ ನಿರಂತರ ಕಠಿಣ ಪರಿಶ್ರಮದಿಂದ ಮಾತ್ರ ಇಂತಹ ಫಲಿತಾಂಶ ಬರಲು ಸಾಧ್ಯ ಎಂದು ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್‍ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ತಿಳಿಸಿದ್ದಾರೆ.

► ಕುಂದಾಪುರ: ಸಿ.ಎ ಅಂತಿಮ ಪರೀಕ್ಷೆ ಪರೀಕ್ಷೆಯಲ್ಲಿ ಶ್ರುತಿ ತೇರ್ಗಡೆ – https://kundapraa.com/?p=57343 .

Leave a Reply