ಲೋಕ ಕಲ್ಯಾಣಾರ್ಥವಾಗಿ ಶಿವ ಪಾರ್ವತಿ ಕಲ್ಯಾಣೋತ್ಸವ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಇಲ್ಲಿನ ಇಂದುಶ್ರೀ ಮಹಿಳಾ ಸಂಘದ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶಿವ ಪಾರ್ವತಿ ಕಲ್ಯಾಣೋತ್ಸವ ಬುಧವಾರ ಸಂಜೆ ಸುಮೂಹರ್ತದಲ್ಲಿ ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

Call us

Click Here

ದೇವಸ್ಥಾನದ ಪ್ರಧಾನ ಅರ್ಚಕ ಪಾಂಡುರಂಗ, ಶಿವಾನಂದ ಚಂದ್ರ ಭಟ್ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರಗಿತು. ಶಿವ-ಪಾರ್ವತಿ ವಿಗ್ರಹವನ್ನು ವಾದ್ಯ ಘೋಷದೊಂದಿಗೆ ಅದ್ದೂರಿಯಾಗಿ ದೇವಸ್ಥಾನದ ಸಭಾಂಗಣಕ್ಕೆ ತರಲಾಯಿತು. ವಧು ನಿರೀಕ್ಷಣೆ, ಅರಸಿನ ಕುಂಕುಮ ಸಮರ್ಪಣೆ, ದಾರೆ ಮಣಿ ಕಟ್ಟುವಿಕೆ, ಮಾಲಾಧಾರಣೆ, ಕಂಕಣ ಮಾಂಗಲ್ಯ ಸೂತ್ರಧಾರಣೆ, ಚಿನ್ನಾಭರಣ ಕಪ್ಪಕಾಣಿಕೆ ಸಮರ್ಪಣೆ, ಪ್ರಸನ್ನ ಪೂಜೆ, ಹೋಮ ಸೇವೆಗಳ ಮೂಲಕ ಕಲ್ಯಾಣೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.

ಮಹಿಳಾ ಸಂಘದ ಅಧ್ಯಕ್ಷೆ ಸುಶೀಲಾ, ಗೌರವಾಧ್ಯಕ್ಷೆ ಸರೋಜ, ಜಯಂತಿ ಜಿ.ಟಿ., ನೇತ್ರಾವತಿ, ನಾಗಿಣಿ, ಪಾರ್ವತಿ, ಗಂಗಾ ಜಿ.ಟಿ., ವಸಂತಿ ಪಿ., ರುದ್ರಮ್ಮ, ಕುಸುಮಾ, ಗಿರಿಜಾ, ಮಹಿಳಾ ಮಂಡಲದ ಸದಸ್ಯರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಭಜಕರು ಮತ್ತಿತರರು ಉಪಸ್ಥಿತರಿದ್ದರು.

Leave a Reply