ಕುಂದಾಪುರ: ಸಮುದ್ರ ತೀರದಲ್ಲಿ ಸಪ್ತಪದಿ ತುಳಿದ ಜೋಡಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮದುವೆಯ ನೆನಪನ್ನು ಶಾಶ್ವಾತವಾಗಿಸಿಸಲು ನೂರಾರು ಕಸರತ್ತು ನಡೆಸುವುದನ್ನು ನೋಡಿದ್ದೇವೆ. ಸಮುದ್ರ ಆಳದಲ್ಲಿ, ವಿಮಾನದಲ್ಲಿ ವಿವಾಹ ಆಗಿದ್ದು ಇದೆ. ಹಾಗೇ ಮಂಡ್ಯದ ಈ ಜೋಡಿ ಕುಂದಾಪುರ ಎಂ. ಕೋಡಿ ಸಮುದ್ರ ತೀರದಲ್ಲಿ ಸಪ್ತಪತಿ ತುಳಿದು ಗಮನ ಸೆಳೆದಿದ್ದಾರೆ.

Call us

Click Here

ಕುಂದಾಪುರದ ಎಂ.ಕೋಡಿ ಸಮೀಪ ಬೆಳಗ್ಗೆ ಸಮುದ್ರ ತೀರದಲ್ಲಿ ವಿವಾಹ ಮಂಟಪ ನಿರ್ಮಿಸಿ ವಿವಾಹವಾಗಿದ್ದಾರೆ. ಲಿಂಗಾಯಿತ ಸಮಾಜದ ಹುಡುಗಿ ಹುಡುಗ ಬ್ರಾಹ್ಮಣ ಸಂಪ್ರದಾಯ ಪುರೋಹಿತರ ಪೌರೋಹಿತ್ಯದಲ್ಲಿ ಮದುವೆ ಆಗಿದ್ದು, ಕಟ್ಕೇರಿ ಶಿವಾನಂದ ಐತಾಳ್ ಸೂತ್ರ ಧಾರಣೆ ಮಾಡಿಸಿದರು.

ವಧು ವರರ ಕುಟುಂಬಿಕರು ಈ ಅಪರೂಪದ ಮದುವೆಗೆ ಸಾಕ್ಷಿಯಾದರು. ಬಳಿಕ ಕುಂಭಾಶಿ ದೇವಸ್ಥಾನದಲ್ಲಿ ಪ್ರಸಾದ ಭೋಜನ ಸೇವಿಸಿದರು.

Leave a Reply