Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ: ಪ್ರಥಮ ಬಹುಮಾನ ರೂ.50,000!
    Uncategorized

    ಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ: ಪ್ರಥಮ ಬಹುಮಾನ ರೂ.50,000!

    Updated:29/04/2022No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಬೆಂಗಳೂರು:
    ಭಾರತದ 75ನೇ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ಮೂರನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ’ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ 2022’ನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯಲಿರುವ ಕಥೆಗೆ ರೂ.50,000; ದ್ವೀತಿಯ ಸ್ಥಾನಕ್ಕೆ 25,000, ತೃತೀಯ ಸ್ಥಾನಕ್ಕೆ ರೂ. 15,000 ಮತ್ತು ಉಳಿದಂತೆ ಮೂರು ಕತೆಗಳಿಗೆ ತಲಾ ರೂ.5000 ಸಮಾಧಾನಕರ ಬಹುಮಾನ ನೀಡಲಾಗುವುದು.

    Click Here

    Call us

    Click Here

    ಕನ್ನಡದ ಸಮೃದ್ಧ ಕಥಾ ಪರಂಪರೆ ಇನ್ನೂ ಹೆಚ್ಚು ಶ್ರೀಮಂತವಾಗಲಿ, ಮತ್ತಷ್ಟು ಮೌಲ್ಯಯುತವಾದ ಕಥೆಗಳು ಹೊರಹೊಮ್ಮಲಿ ಎನ್ನುವುದೇ ’ಬುಕ್ ಬ್ರಹ್ಮ- ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ’ಯ ಮೂಲ ಉದ್ದೇಶ.

    ಕನ್ನಡ ಕಥಾ ಪ್ರಪಂಚದಲ್ಲಿ ಹಲವು ಮಹತ್ವದ ವಾರ್ಷಿಕ ಸ್ಪರ್ಧೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಆ ಝುಳು ಝುಳು ಹರಿವ ನದಿಗೆ ಹೊಸದಾಗಿ ಈಗ ’ಬುಕ್ ಬ್ರಹ್ಮ’ ತೊರೆ ಸೇರಲಿದೆ. ಪ್ರತಿ ವರ್ಷ ದೇಶದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಈ ಸ್ಪರ್ಧೆಯನ್ನು ಸಂಸ್ಥೆಯು ನಡೆಸಲಿದೆ.

    ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ:

    • ಕತೆಯು ಸ್ವತಂತ್ರವಾಗಿರಬೇಕು. ಅನುವಾದ, ಅನುಕರಣವಾಗಿರಬಾರದು.
    • ಕತೆಯು ಅಪ್ರಕಟಿತವಾಗಿಬೇಕು. ಮುದ್ರಣ ಅಥವಾ ಯಾವುದೇ ವಿದ್ಯುನ್ಮಾನ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು.
    • ಕತೆಯು 5000 ಪದಗಳಿಗೆ ಮೀರದಂತಿರಬೇಕು.
    • ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ವಯಸ್ಸಿನ ನಿರ್ಬಂಧ ಇಲ್ಲ
    • ಹಸ್ತಪ್ರತಿ ಅಥವಾ ಟೈಪ್ ಮಾಡಿದ ಕತೆಯಿರುವ ಪುಟಗಳಲ್ಲಿ ತಮ್ಮ ಹೆಸರನ್ನು ದಾಖಲಿಸಬಾರದು. ಕತೆ ಮುಗಿದ ನಂತರ ಪ್ರತ್ಯೇಕ ಪುಟದಲ್ಲಿ ತಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಇರಬೇಕು.
    • ಕತೆಗಾರರು ನಿಬಂಧನೆಗಳಿಗೆ ಒಪ್ಪಿದ ಮತ್ತು ಸಹಿ ಮಾಡಿದ ಪ್ರತ್ಯೇಕ ಒಂದು ಪತ್ರ ಇಡಬೇಕು.
    • ಬುಕ್‌ಬ್ರಹ್ಮ ಪ್ರೈವೇಟ್ ಲಿಮಿಟೆಡ್ (Book Brahma Private Limited), ಫರ್ಬೆಂಡನ್‌ ಪ್ರೈವೇಟ್ ಲಿಮಿಟೆಡ್ (Verbinden Private Limited) ಮತ್ತು ಕಾಗ್ನಿಕ್ವೆಸ್ಟ್‌ ಪ್ರೈವೇಟ್ ಲಿಮಿಟೆಡ್ (Cogniquest Private Limited) ಸಂಸ್ಥೆಯ ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರು ಸ್ಫರ್ಧೆಯಲ್ಲಿ ಭಾಗವಹಿಸುವಂತಿಲ್ಲ.
    • ಕನ್ನಡದ ಪ್ರಮುಖ ಕತೆಗಾರರು/ವಿಮರ್ಶಕರು ಸ್ಪರ್ಧೆಯ ನಿರ್ಣಾಯಕರಾಗಿರುತ್ತಾರೆ.
    • ಆಯ್ಕೆಗೆ ಸಂಬಂಧಿಸಿದಂತೆ ’ಬುಕ್ ಬ್ರಹ್ಮ’ ಆಡಳಿತ ಮಂಡಳಿಯ ನಿರ್ಣಯವೇ ಅಂತಿಮ.
    • ಕತೆಗಳನ್ನು ಕಳುಹಿಸಲು ಕೊನೆಯ ದಿನ ಬುಧವಾರ, ಜೂನ್‌ 15, 2022.
    • ಶುಕ್ರವಾರ, ಆಗಸ್ಟ್‌ 5, 2022 ರಂದು ಅಂತಿಮ ಸುತ್ತನ್ನು ಪ್ರವೇಶಿಸುವ 20 ಕಥೆಗಳ ಪಟ್ಟಿಯನ್ನು ಪ್ರಕಟಿಸಲಾಗುವುದು.
    • ಸೋಮವಾರ, ಆಗಸ್ಟ್ 15, 2022 ರಂದು ನಡೆಯಲಿರುವ ಸಮಾರಂಭದಲ್ಲಿ ಅಂತಿಮ ಸುತ್ತಿನ ನಂತರ ಪ್ರಶಸ್ತಿಗಳಿಗೆ ಅರ್ಹವಾದ ಕತೆಗಳ ಘೋಷಣೆ ಮತ್ತು ಪ್ರಶಸ್ತಿ ವಿತರಣೆ ಎರಡನ್ನೂ ಮಾಡಲಾಗುವುದು.
    • ಅಂತಿಮ ಸುತ್ತಿಗೆ ಆಯ್ಕೆಯಾದ 20 ಕತೆಗಳನ್ನು ’ಬುಕ್ ಬ್ರಹ್ಮ’ ವೆಬ್‌ಸೈಟ್‌ ನಲ್ಲಿ ಹಾಗೂ ಪುಸ್ತಕ, ಇ-ಪುಸ್ತಕ, ಆಡಿಯೋ ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಈ 20 ಕತೆಗಳ ಪೈಕಿ ಬಹುಮಾನ ಪಡೆಯದೇ ಉಳಿಯುವ 14 ಕತೆಗಳಿಗೆ ತಲಾ ರೂ.1000 ಗೌರವ ಧನ ನೀಡಲಾಗುವುದು. ಈ ಎಲ್ಲ 20 ಕತೆಗಳ ಹಕ್ಕುಸ್ವಾಮ್ಯ ಕತೆಗಾರರು ಮತ್ತು ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಇಬ್ಬರಿಗೂ ಜಂಟಿಯಾಗಿ (ಶೇಕಡಾ 50) ಸೇರಿರುತ್ತದೆ.
    • ಒಬ್ಬರು ಒಂದು ಕತೆಯನ್ನು ಮಾತ್ರ ಕಳಿಸಬೇಕು.
    • ಕತೆಗಳನ್ನು ಈ-ಮೇಲ್ ಮೂಲಕ (ನುಡಿ / ಯೂನಿಕೋಡ್ ಫಾಂಟ್ ಬಳಸಿ ಟೈಪ್ ಮಾಡಿದ ಪ್ರತಿ) BBKathaSpardhe2022@bookbrahma.com ಅಥವಾ ಹಸ್ತಪ್ರತಿಯನ್ನು
      ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ ಕನ್ನಡ
      ಮೂರನೇ ಮಹಡಿ, ಆರ್ ಕೆ ಕಾಂಪ್ಲೆಕ್ಸ್
      ಕೆಎಸ್ಎಸ್ಐಡಿಸಿ ಕಾಂಪೌಂಡ್,
      ಎಲೆಕ್ಟ್ರಾನಿಕ್ಸ್ ಸಿಟಿ ಮೊದಲ ಹಂತ,
      ಬೆಂಗಳೂರು-560100 ಕ್ಕೆ ಕಳುಹಿಸಿಕೊಡಬಹುದು.
    • ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: +91 78926 08118
    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಪಡುಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಹಾಗೂ ಗಣಕಯಂತ್ರ ಹಸ್ತಾಂತರ ಸಮಾರಂಭ

    20/05/2026

    ಎಸ್.ಎಸ್.ಎಲ್.ಸಿ: ರಾಜ್ಯಕ್ಕೆ 5ನೇ ರ್ಯಾಂಕ್‌ ಪಡೆದ ವಿದ್ಯಾರಣ್ಯ ಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ಶಾಲೆಗೆ ಶೇ.100 ಫಲಿತಾಂಶ

    23/04/2026

    ಶಂಕರನಾರಾಯಣ: ಮದರ್ ತೆರೆಸಾ ಶಾಲೆಯ ವಿದ್ಯಾರ್ಥಿ ಎಸ್‌.ಎಸ್.‌ಎಲ್.‌ಸಿಯಲ್ಲಿ ಪ್ರೀತಮ್ ಜಿ. ಪೂಜಾರಿ ರಾಜ್ಯಕ್ಕೆ ಟಾಪರ್‌

    23/04/2026
    Leave A Reply Cancel Reply

    eighteen − 13 =

    Call us

    Click Here

    Call us

    Call us

    Call us
    Highest Viewed Recently
    • ಡಾ. ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ
    • ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ
    • ಕೊರವಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶ್ರೀ‌ಕ್ಷೇತ್ರ ಧ.ಗ್ರಾ.ಯೋ. ಅನುದಾನ, ಮಂಜೂರಾತಿ ಪತ್ರ ಹಸ್ತಾಂತರ
    • ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ
    • ಮಕ್ಕಳ ಸಾಹಿತ್ಯ ಉತ್ಸವದ ಆಶುಲೇಖನ ಸ್ಪರ್ಧೆಯಲ್ಲಿ ಸಮೃದ್ಧಿ ವಿ. ಪೂಜಾರಿ ದ್ವಿತೀಯ ಸ್ಥಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.