Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಬಾಷಿ ಪ್ರೀತಿಗಿಲ್ಲ ಗಡಿ. ದೂರದಂಗ್‌ ಕೇಂತಿದ್ದ ಭಾಷಿನಾ ಕಲ್ತ್‌ ಖುಷಿಯೇ ಬೇರೆ ಕಾಣಿ!
    Uncategorized

    ಬಾಷಿ ಪ್ರೀತಿಗಿಲ್ಲ ಗಡಿ. ದೂರದಂಗ್‌ ಕೇಂತಿದ್ದ ಭಾಷಿನಾ ಕಲ್ತ್‌ ಖುಷಿಯೇ ಬೇರೆ ಕಾಣಿ!

    Updated:11/08/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಜ್ಯೋತಿ ವಿಘ್ನೇಶ್ | ಕುಂದಾಪ್ರ ಡಾಟ್‌ ಕಾಂ.
    ಕುಂದಾಪುರ ಅಂದಾಗ್ಲಿಕೆ ತಲೆಗ್ ಫಸ್ಟ್ ಬಪ್ಪುದ್ ಕುಂದಾಪ್ರ ಬಾಷಿ ಅದೇ ಹೋಯ್ಕ್ ಬರ್ಕ್!ಬಾಷಿ ಕೇಳುಕ್ ಚಂದ… ಪಾತೆರ್ರೆ ಚೂರು ಬಂಗ! ಆದ್ರೆ ಕೇಳ್ತಾ ಇದ್ದ್ರೆ ಮನಸ್ಸಿಗೇ ಒಂದ್ ತರದ ಗಮ್ಮತ್ ಕಾಣಿ! ಆರು ಕಲಿಲಕ್ ಮಾರೆ ಅಡ್ಡಿಲ್ಲ!

    Click Here

    Call us

    Click Here

    ಈಗ ಕಾಣಿ ನಾನ್ ಹುಟ್ಟಿ ಬೆಳದ್ದ್ ನನ್ನ ತವರು ಮನೆ ಕಾರ್ಕಳ ತಾಲೂಕಿನ ಪಳ್ಳಿ ಸಮೀಪದ ನಿಂಜೂರು ಎಂಬ ಒಂದು ಸಣ್ಣ ಗ್ರಾಮ. ನನ್ನ ಅಬ್ಬಿ ಭಾಷಿ ತುಳು, ಅದೇ ಮೊನ್ನೆ ಮೂರು ತಿಂಗಳ ಹಿಂದೆ ಮದಿ ಆಯ್ ನಾನ್ ಬಂದ ನನ್ನ ಗಂಡನ ಮನೆ ಅದೇ ಚಂದದೂರು ಕುಂದಾಪ್ರಕ್ಕೆ. 

    ಅದೇ ನಮ್ ಫೇಮಸ್ ಮರವಂತೆ ಇತ್ತಲೆ… ಡ್ರೋನ್ ವೀಡಿಯೋಸ್, ರೀಲ್ಸ್ ಎಲ್ಲ ಕಾಣ್ತಿದ್ದೆ. “ವಾವ್… ಎತ್ ಶೋಕ್!” ಅಂತೇ ಹೇಳ್ತಿದ್ದಲ್ ನಾನ್. ಈಗ ಕಾಣಿ, ನಮ್ ಮನೆಗ್ ಜಾಸ್ತಿ ದೂರ ಆತಿಲ್ಲ ಮರವಂತೆ.

    ಮತ್ತೆ ಸುಕ್ಕಿನುಂಡೆ… ಮೊದ್ಲೆ ಅದರ ಹೆಸ್ರೇ ಗೊತ್ತಿಲ್ಲ ಇದಿತ್! “ಆ ಲಾಡ್ ಕೊರ್ಲೆ” ಅಂತೇಲಿ ಅಂಗಡಿಲಿ ತಕಾಂತಿದ್ದಲ್ ನಾನ್. ಈಗ ಕಂಡ್ರೆ ನಾನ್ ಮಾಯಿ ಲೈಕ್ ಮಾಡಿ ಕೊಡ್ತರ್ ಅದೇ ಸುಕ್ಕಿನ್ ಉಂಡಿ.

    ಮತ್ತೊಂದು ವಿಷಯ ಗೊತ್ತಾ  ಕುಂದಾಪ್ರ ಬದಿ “ಗನಾದ್ ಅಂಬ ಪದ ಇತ್ತೆ” ಮದಿಯಾದಲ್ಲ ಸುರುಕೆ ಎಲ್ಲಾ ಹೇಳತ್ತಿದ್ರ  ಆ ಗನಾ ಸಿರಿ ಕೊಡ , ಆ ಗನಾ ಅಂಗಿ ಕೊಡ ಅಂದಳಿ. ಫಸ್ಟ್  ನಂಗೆ ಶಾಕ್ ಕೊಟ್ಟ ಪದ ಅಂದ್ರೆ ಅದೇ  ಅರ್ಥ ಕೆಂಬ ಅಂದ್ರೆ ನಾಚಿಕೆ…ಆರು ತಿಲ್ಕಂಡೆ ಕಾಣೀ!

    Click here

    Click here

    Click here

    Call us

    Call us

    ಆದ್ರೆ ಒಂದ್ ನಿಜ ಕುಂದಾಪ್ರ ಕನ್ನಡ ಕೇಳ್ತಾ ಇದ್ದ್ರೆ ಎಷ್ಟ್ ಚಂದ! ಯಾನ್ ದುಂಬು  ಬಾಂಗೂಡೆ, ಬುತ್ತೈ, ಎಟ್ಟಿ, ಜೆಂಜಿ, ಮರುವಾಯಿ ಪನೊಂದಿತ್ತಿನಲ್… ಈಗ ನಿಧಾನಕ್ಕೆ ಬಂಗ್ಡಿ, ಭೈಗಿ, ಚಟ್ಲಿ, ಜಾರಿ ಅಂತೇಲಿ ಹೇಳೋಕ್ ಸುರು ಮಾಡಿದೆ!

    ಹ್ವಾಯ್ ನಾನ್ ಇಷ್ಟು ಬೇಗ ಕುಂದಾಪ್ರ ಬಾಷಿ ಕಲ್ತದ್ದೆ ಮೀನ್ ಯ್ಯಾಪಾರ ಮಾಡಿ ಹೌದೇ. ಮೀನ್ ಹಿಡ್ಕಂಡ್ ಮಾತಾಡೋ ಜನ… ಆ ಕೂಗು, ಆ ಚೌಕಾಶಿ, ಆ ಗಮ್ಮತ್ತೇ ಬೇರೆ. ಮತ್ತೆ ಕುಂದಾಪುರ ನಾನ್‌ವೆಜ್ ಅಡ್ಗಿಗೆ ಫೇಮಸ್ ಅದ್ ಎಲ್ಲೆ ಕೇಳಿದೆ… ಈಗ ಗೊತ್ತಾತ್ ಮತ್ತೆ ಅದ್ ನಿಜ ಕಾಣಿ!

    ಇತ್ತೆ ಆಟಿ ತಿಂಗಳ ಅತಾ. ಅಯ್ಯೋ ನಮ್ಮ ಕುಂದಾಪ್ರ ಆಸಾಡಿ ಅಂತ್ರ ಮಳೆ ಜೋರಾಗ್ ಬಪ್ಪ ಕಾಲ… ಗದ್ದೆಲೆ ಹಸಿರು ಹಾಸಿಗೆ ಹಾಕಿದಂಗ್ ಕಾಣ್ತ್… ಮಣ್ಣಿನ ವಾಸನೆ… ಮಳೆ ಹನಿದ್ ಸದ್ದು…ಇದೆಲ್ಲ ಸೇರ್ದ್ರೆ ಅದೇ ನಮ್ಮ ತುಳುನಾಡಿನ ಸೊಗಡು! ನಮ್ಮ ಹಿರಿಯ್ರು ಮಾಡ್ಕಂಡ್ ಬಂದ್ ಪ್ರತಿಯೊಂದು ಆಚರಣೆಗೂ ಒಂದೊಂದು ಅರ್ಥ ಇತ್ತ್ ಕಾಣಿ. ಪ್ರಕೃತಿಯ ಜೊತೆ ಹೇಂಗ್ ಬದುಕ್ಬೇಕು… ಯಾವ ಕಾಲ್ದ್ ಏನ್ ತಿನ್ನ್ಬೇಕು… ನಮ್ಮ ಆಚಾರ, ಸಂಪ್ರದಾಯ ಹೆಂಗ್  ಉಳ್ಸ್ಕಂಡ್ ಹೊಯ್ಕ್ ಎಲ್ಲವೂ ಅವ್ರು ನಮ್ಗ್ ಕಲ್ಸಿ ಹೋರ್ಯ

    ಮತ್ತೆ ಕುಂದಾಪ್ರದಲ್ಲ ಈ ಆಸಾಡಿ ಅಮಾಸಿ ದಿನ ವಿಶ್ವ ಕುಂದಾಪ್ರ ಕನ್ನಡ ದಿನ ಅಂದಳಿ ಆಚರಣೆ ಮಾಡತ್ರ ಅದಕ್ಕೇ ಆಸಾಡಿ ಅಮಾಸಿ ಅಂದ್ರೆ ಬರೀ ಒಂದು ದಿನ ಅಲ್ಲ… ಅದ್ ಬಾಷಿ ಉಳ್ಸಿ ನಮ್ಮ ಮುಂದಿನ ತಲೆಮಾರಿಗೆ ನೆನ್ಪ ಮಾಡಿ ಕ್ಷಣ.

    ಮತ್ತೆ ಈಗ ಮನಸ್ಸಿಂದ ಒಂದೇ ಮಾತ್ ಬಪ್ಪುದ್ …“ನಾವು ಕುಂದಾಪ್ರದವ್ರು ಕಾಣಿ!”  ಹೆಣ್ಣಿಗೆ ತಾವ್ರ್ ಮನೆ ಯಾವತ್ತೂ ತಾವ್ರ್ ಮನೆನೇ ಕಾಣಿ… ಆದ್ರೆ ಅವಳು ಬಂದ ಹೊಸ ಮನೆಗ್ ಮನಸ್ಸು ಕೊ̧ಟ್ಟು ಅಲ್ಲಿನ ಜನ್ರನ್ನ ತನ್ನವ್ರು ಮಾಡ್ಕಂಡ್, ಅಲ್ಲಿನ ಸಂಪ್ರದಾಯ ಕಲ್ತ್, ಅಲ್ಲಿನ ಬಾಶಿ ಮಾತಾಡ್ತ್, ಅಲ್ಲಿನ ಬದುಕಿನೊಳಗೆ ಬೆರೆತು ಹೋಗೋದೇ ಅವಳ ದೊಡ್ಡತನ.

    ನಾವು ಎಲ್ಲಾ ಬಾಷಿನೂ ಗೌರವಿಸಬೇಕು ಪ್ರೀತಿಸಬೇಕು ಅಷ್ಟಕ್ಕೂ ಬಾಷಿ ಕಲ್ತರ್ ನಮ್ಗೆ ಒಳ್ಳೆದ್ ಅಲ್ದೆ. ಕುಂದಾಪುರ ಅಂದ್ರೆ ಬರೇ ಒಂದು ಊರು ಅಲ್ಲ ಕಾಣಿ… ಒಂದು ಬಾಷಿ… ಒಂದು ಗತ್ತು… ಒಂದು ಸಂಸ್ಕೃತಿ… ಒಂದು ರುಚಿ… ಒಂದು ಭಾವನೆ…

    ನಾನ್ ಕೆಲಾವು ಹಚ್ಕೊಂಡೆ ಕಾಣಿ ನಿಮ್ ಜೊತೇ… ಇನ್ನ್ ಎಷ್ಟೋ ಮಾತು, ಎಷ್ಟೋ ಜಾಗ, ಎಷ್ಟೋ ರುಚಿ, ಎಷ್ಟೋ ಕುಂದಾಪುರದ ಗಮ್ಮತ್ ಬಾಕಿ ಇತ್ತ್!

    ಹೊಸ ಮನೇಲಿ ಹೊಸ ಬಾಶಿ ಕಲ್ತ್, ಹೊಸ ಜನ್ರ್ ಜೊತೆ ಬೆರೆತು, ಹೊಸ ಸಂಪ್ರದಾಯಗಳನ್ನ ಪ್ರೀತಿಸಿ…

    ಕುಂದಾಪುರವನ್ನೇ ನಿಧಾನಕ್ಕೆ “ನನ್ನದು” ಅಂತ ಮನಸ್ಸಿಂದ ಒಪ್ಪ್ಕೊಂಡ ಕಥೆ ಇದು. ಹೋಯ್ ಬಾಷಿ ಅಲ್ಲ… ಬದ್ಕ್ ಕಾಣಿ!

    ನಿಮ್ಮನಿ ಹೆಣ್ಣ್
    ಜ್ಯೋತಿ ವಿಘ್ನೇಶ್

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಪ್ಲಾಸ್ಮಾ ವಿಜ್ಞಾನದಲ್ಲಿ ಯುವಜನರು ತೊಡಗಿಸಿಕೊಳ್ಳಬೇಕು: ಡಾ. ಎನ್. ರಾಮಸುಬ್ರಮಣ್ಯನ್

    28/07/2026

    ಕಾಂಗ್ರೆಸ್ ಅವಧಿಯಲ್ಲಿ ಪೇಪರ್ ಲೀಕ್‌ಗೆ ನೀವೆಷ್ಟು ರಾಜೀನಾಮೆ ಕೊಡಿಸಿದ್ದೀರಿ ಗೋಪಾಲ ಪೂಜಾರಿಯವರೇ?: ರತನ್ ರಮೇಶ್ ಪೂಜಾರಿ

    27/07/2026

    ಉಪ್ಪುಂದ: ಕಾರು ಡಿಕ್ಕಿಯಾಗಿ ಪಾದಚಾರಿ ಸಾವು

    27/07/2026
    Leave A Reply Cancel Reply

    nineteen − thirteen =

    Call us

    Click Here

    Call us

    Call us

    Call us
    Highest Viewed Recently
    • ಬಾಷಿ ಪ್ರೀತಿಗಿಲ್ಲ ಗಡಿ. ದೂರದಂಗ್‌ ಕೇಂತಿದ್ದ ಭಾಷಿನಾ ಕಲ್ತ್‌ ಖುಷಿಯೇ ಬೇರೆ ಕಾಣಿ!
    • ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ವೀಲ್‌ಚೇರ್ ವಿತರಣೆ
    • ಮಣೂರು ಪಡುಕರೆಯಲ್ಲಿನ ಉಪ್ಪು ನೀರಿನ ಹೊಳೆಯಲ್ಲಿ ಕಾಂಡ್ಲ ಗಿಡದಿಂದ ಹಾವಳಿಯಿಂದ ಕೃತಕ ನೆರೆ, ರೈತ ಸಂಘ ಡಿಸಿಗೆ ಮನವಿ
    • ಲಯನ್ಸ್ ಕ್ಲಬ್ ತೆಕ್ಕಟ್ಟೆ ಸದಸ್ಯರಿಂದ ಶಿಕ್ಷಕ ಚಂದ್ರಶೇಖರ್ ಶೆಟ್ಟಿ ಮಾಲಾಡಿ ಅವರಿಗೆ ಸನ್ಮಾನ
    • ಹೊಸಾಡು ಮುಳ್ಳಿಕಟ್ಟೆ ಶ್ರೀ ಗಣೇಶ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ವತಿಯಿಂದ ಡಾ. ಲಕ್ಷ್ಮೀ ಐತಾಳ್‌ರಿಗೆ ಸನ್ಮಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.