ಅಕ್ಟೋಬರ್ 23: ದುಬೈ ‘ಕದಂ’ ಅದ್ಧೂರಿ ವಾರ್ಷಿಕೋತ್ಸವಕ್ಕೆ ದಿನಗಣನೆ ಆರಂಭ

Call us

Call us

Call us

ದುಬೈ: ಕುಂದಾಪುರ ದೇವಾಡಿಗ ಮಿತ್ರ (ಕದಂ) ಇದರ 5ನೇ ವಾರ್ಷಿಕೋತ್ಸವ ಸಮಾರಂಭ ಅಕ್ಟೋಬರ್ 23 ರಂದು ದುಬೈ ಶೆರಾಟನ್ ದಯಿರದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಹಲವಾರು ಅತಿಥಿಗಳ ಸಮಕ್ಷಮದಲ್ಲಿ ಈ ಕಾರ್ಯಕ್ರಮ ಉದ್ಗಾಟನೆ ಗೊಳ್ಳಲಿದ್ದು ನಂತರ ಹಲವಾರು ಮನೋರಂಜನ ಕಾರ್ಯಕ್ರಮ ಗಳನ್ನೂ ನಡೆಸಿಕೊಡುವ ಮೂಲಕ ಹಾಗು ಅದ್ಬುತ ಖಾದ್ಯಗಳ ಬೋಜನಕೂಟ ಏರ್ಪಡಿಸುವ ಮೂಲಕ ದುಬೈನಲ್ಲಿರುವ ದೇವಾಡಿಗರ ಹೆಮ್ಮೆಯ ಸಂಘ ಕದಂ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದೆ.

Call us

Click Here

[quote bgcolor=”#ffffff”]ಕದಂ (ಕುಂದಾಪುರ ದೇವಾಡಿಗ ಮಿತ್ರ) ಹತ್ತು ಹಲವಾರು ಯೋಜನೆಗಳನ್ನು ರೂಪಿಸಿಕೊಂಡು ದೇವಾಡಿಗ ಸಮಾಜದ ಒಳಿತಿಗಾಗಿ ದೂರದ ಕೊಲ್ಲಿ ರಾಷ್ಟ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಂದು ಸಂಸ್ಥೆ. 5 ವರ್ಷದ ಹಿಂದೆ ಅಂದರೆ 2010 ರಲ್ಲಿ ಕೆಲವು ಸಮಾನ ಮನಸ್ಕ ಸಮಾಜಬಾಂದವರು ಹುಟ್ಟು ಹಾಕಿದ ಈ ಸಂಸ್ಥೆ ಈಗ ಐದನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಕದಂ ಈ ಶಬ್ದದ ಹಿಂದಿ ಭಾವಾರ್ಥ ಹೆಜ್ಜೆಯ ನಂತರ ಇನ್ನೊಂದು ಹೆಜ್ಜೆ. ವಿದ್ಯಾರ್ಥಿವೇತನ, ವೈದ್ಯಕೀಯ ವೆಚ್ಚ, ಗಲ್ಫ್ ನಲ್ಲಿ ಸಮಾಜಬಂದವರಿಗೆ ಉದ್ಯೋಗ ಹುಡುಕಿಕೊಳ್ಳುವಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸಿದ ರೀತಿ ನಿಜಕ್ಕೂ ಪ್ರಶಂಸನೀಯ. ದೂರದ ಮರಳುಗಾಡಿನಲ್ಲಿ ಎಲ್ಲರೂ ತಮ್ಮದೇ ಅದ ಕೆಲಸದಲ್ಲಿ ಮಗ್ನರಾಗಿದ್ದ ಸಂದರ್ಭದಲ್ಲಿ ಎಲ್ಲ ಸಮಾಜಬಾಂಧವರನ್ನು ಒಂದೆಡೆ ಸೇರಿಸಿ ಈ ಸಂಸ್ಥೆ ಬೆಳೆದು ಬಂದ ದಾರಿ ಹಲವಾರು ಸಂಘ ಸಂಸ್ಥೆಗಳಿಗೆ ಒಂದು ಸ್ಪೂರ್ತಿ . ಗಲ್ಫ್ ದೇಶದಲ್ಲೂ ಕರಾವಳಿ ಸಂಸ್ಕ್ರತಿಯನ್ನು ನೆನೆದು ಅದರ ಕಂಪನ್ನು ಪಸರಿಸುತ್ತಾ ಸಾಂಸ್ಕ್ರತಿಕ, ಕ್ರೀಡಾ ಹಾಗು ಇನ್ನಿತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಈ ಸಂಸ್ಥೆ ಈಗಾಗಲೇ ಸುಮಾರು 15 ಲಕ್ಷ ಹಣವನ್ನು ಸಂಗ್ರಹಿಸಿ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿರಿಸಿ ಕದಂ ಎಜುಕೇಶನ್ ಫಂಡ್ ಸ್ಥಾಪಿಸಿದೆ. ಈ ಹಣದಿಂದ ಬರುವ ಬಡ್ಡಿ, ಕದಂ ನ ಸದಸ್ಯರು ನೀಡುವ ದೇಣಿಗೆ, ಪ್ರಾಯೋಜಕರು ನೀಡುವ ಹಣದಿಂದ ವಿದ್ಯಾರ್ಥಿವೇತನ, ಪುಸ್ತಕ ವಿತರಣೆ, ಅನಾರೋಗ್ಯ ಪೀಡಿತರಿಗೆ ತುರ್ತು ಧನ ಸಹಾಯ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದೆ. ಪ್ರತಿ ವರ್ಷ ಕದಂ ನ ಎಲ್ಲ ಸದಸ್ಯರು ದುಬೈನ ಶೈಖಾ ಲತಿಫಾ ಹಾಸ್ಪಿಟಲ್ ನಲ್ಲಿ ಸಾಮೂಹಿಕ ರಕ್ತದಾನ ಮಾಡುವ ಮೂಲಕ ತಮಗೆ ಉದ್ಯೋಗ ನೀಡಿದ ದೇಶಕ್ಕೂ ನೆರವಾಗುತ್ತಿದೆ.[/quote]

ಪ್ರತಿ ವರ್ಷವೂ ಕದಂ ತನ್ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಾಜದ ಸಾಧಕರಿಗೆ “ದೇವಾಡಿಗ ಸಾಧಕ ಪ್ರಶಸ್ತಿ” ನೀಡಿ ಗೌರವಿಸುತ್ತಾ ಬಂದಿದೆ. ಈ ಹಿಂದಿನ ವರ್ಷಗಳಲ್ಲಿ ಕ್ರಮವಾಗಿ ಬೀ ಜೀ ಮೋಹನದಾಸ್, ಶೀನ ದೇವಾಡಿಗ, ಮೇಘನ ಸಾಲಿಗ್ರಾಮ, ರಘುರಾಮ್ ದೇವಾಡಿಗ ಈ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದು, ಈ ಬಾರಿಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಕರಾವಳಿಯ ಖ್ಯಾತ ರಾಜಕಾರಣಿ ರಾಜು ದೇವಾಡಿಗ ಹಾಗು ಸುವರ್ಣ ನ್ಯೂಸ್ ಕವರ್ ಸ್ಟೋರಿ ಖ್ಯಾತಿಯ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಈ ಗೌರವ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಈ ಬಾರಿಯ ಕದಂ ನ 5 ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಭಾರತ ದಿಂದ ಹಲವಾರು ಗಣ್ಯರು ಆಗಮಿಸುತ್ತಿದ್ದು, ದಕ್ಷಿಣ ಭಾರತದ ಖ್ಯಾತ ಪಂಚ ಭಾಷಾ ನಟಿ ವಿನಯಾ ಪ್ರಸಾದ್ ಕಾರ್ಯಕ್ರಮದ ವಿಶೇಷ ಆಕರ್ಷಣೆ .

ವಿನಯಾ ಪ್ರಸಾದ್:
Kadam-Vinaya-prasadದಕ್ಷಿಣ ಭಾರತದ ಖ್ಯಾತ ನಟಿ, ಕನ್ನಡ, ತಮಿಳು, ತೆಲುಗು ಹಾಗು ಮಲಯಾಳಂ ಚಲನಚಿತ್ರಗಳಲ್ಲಿ ಅಭಿನಯಿಸಿ ಅಪಾರ ಅಭಿಮಾನಿ ಬಳಗ ಹೊಂದಿರುವ ನಟಿ ವಿನಯಾ ಪ್ರಸಾದ್ ಈ ಬಾರಿಯ ಕದಂ 5 ನೇ ವಾರ್ಷಿಕೋತ್ಸವದ ಗೌರವ ಅತಿಥಿ. ಚಲನಚಿತ್ರ ಗಳಲ್ಲಿ ಯಾವುದೇ ಪಾತ್ರ ಕೊಟ್ಟರು ಲೀಲಾ ಜಾಲವಾಗಿ ಅಭಿನಯಿಸುವ ವಿನಯಾ ಪ್ರಸಾದ್ , ತನ್ನ ನಟನೆಗಾಗಿ ರಾಜ್ಯ ಮಟ್ಟದ ಶ್ರೇಷ್ಠ ನಟಿ ಪ್ರಶಸ್ತಿ ಪಡೆದು ಕೊಂಡಿದ್ದಾರೆ , ಆತಂಕ (1993 ), ಬಣ್ಣದ ಹೆಜ್ಜೆ (2001 ) ಜೀವಮಾನದ ಶ್ರೇಷ್ಠ ಅಭಿನಯಕ್ಕಾಗಿ ಕೇರಳ ಕ್ರಿಟಿಕ್ಸ್ ಪ್ರಶಸ್ತಿ ,ಹಾಗು ಹಲವರು ಸಂಘ ಸಂಸ್ಥೆ ಮತ್ತು ಅಭಿಮಾನಿ ಸಂಘದಿಂದ ಗೌರವ ಪ್ರಶಸ್ತಿ ಪಡೆದುಕೊಂಡಿದ್ದಾರೆ . ತನ್ನ ವೃತ್ತಿ ಜೀವನದಲ್ಲಿ ಖ್ಯಾತ ನಟರಾದ ವಿಷ್ಣುವರ್ಧನ್ ,ಅಂಬರೀಶ್ ,ಅನಂತ್ ನಾಗ್,ರಜನಿಕಾಂತ್ ,ಮೋಹನಲಾಲ್ ,ವೆಂಕಟೇಶ್ ,ಅಕ್ಕಿನೇನಿ ನಾಗಾರ್ಜುನ , ವಿ ರವಿಚಂದ್ರನ್ , ಶಿವರಾಜ್ ಕುಮಾರ್ ,ಮಹೇಶ್ ಬಾಬು, ಜೂನಿಯರ್ ಏನ್ ಟಿ ಆರ್ ಮುಂತಾದವರ ಜೊತೆಯಲ್ಲಿ ಅಭಿನಯಿಸಿದ ಹಿರಿಮೆ ಇವರದ್ದು.

Click here

Click here

Click here

Click Here

Call us

Call us

ಕನ್ನಡ, ತುಳು, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಭಾಷೆ ಯನ್ನು ನಿರರ್ಗಳವಾಗಿ ಮಾತನಾಡುವ ಇವರು ತಮ್ಮ ಮಾತುಗಾರಿಗೆ ಮತ್ತು ನಿರೂಪಣೆಯಿಂದ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ . ನಟನೆಯ ಹೊರತಾಗಿ ಇವರು ಖ್ಯಾತ ಗಾಯಕಿಯೂ ಹೌದು ಕೆಲವು ಕನ್ನಡ ಮತ್ತು ಹಿಂದಿ ಹಾಡುಗಳನ್ನು ಕೂಡ ಇವರು ಹಾಡಿದ್ದಾರೆ .

ಸರಿ ಸುಮಾರು 250 ಶ್ರೇಷ್ಟ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ , ಅದರಲ್ಲಿ ಕೆಲವೊಂದು ಚಿತ್ರಗಳು ಗಣೇಶನ ಮದುವೇ,ಗೌರಿಗಣೇಶ ,ಕರುಳಿನ ಕೂಗು, ಯಾರಿಗೂ ಹೇಳ್ಬೇಡಿ, ಆಪ್ತರಕ್ಷಕ ,ನೀನು ನಕ್ಕರೆ ಹಾಲು ಸಕ್ಕರೆ, ಮಣಿ ಚಿತ್ರ ತಜು, ಪೆರುನ್ದಚ್ಚನ್, ಕಲಿಸುಂದಂ -ರಾ, ಶಿರಡಿ ಸಾಯಿ, ದುಕಡು, ಇಂದ್ರ, ಚಂದ್ರಮುಖಿ, ಕೋಟಿ ಚೆನ್ನಯ ಮುಂತಾದವುಗಳು. ಕೆಲವು ಕಿರುತೆರೆ ಧಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ ಇವರ ಮಲಯಾಳಂ ನ ಸ್ತ್ರೀ ಹಾಗು ಕನ್ನಡದ ಶಕ್ತಿ ಧಾರವಾಹಿ ಯಲ್ಲಿಯ ಅವರ ಅಭಿನಯ ಅವರ ನಟನಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಕುಟುಂಬದ ಪ್ರೋತ್ಸಾಹದಿಂದ ಕಲೆಗೆ ತನ್ನದೇ ಆದ ಕೊಡುಗೆ ನೀಡಿದ ಪ್ರಸಿದ್ದ ನಟಿ ವಿನಯಾ ಪ್ರಸಾದ್.

ವಿಜಯಲಕ್ಷ್ಮಿ ಶಿಬರೂರ್ :
Kadam-Vijayalakshmi-Shibaroಇನ್ನೊಬ್ಬರು ಮುಖ್ಯ ಅತಿಥಿ ಹಾಗು “ದೇವಾಡಿಗ ಸಾಧಕ ಪ್ರಶಸ್ತಿ ” ಸ್ವೀಕರಿಸಲಿರುವವರು ಖ್ಯಾತ ಪತ್ರಕರ್ತೆ, ವಿಶೇಷ ಪ್ರತಿನಿದಿ ಸುವರ್ಣ ನ್ಯೂಸ್ ಕವರ್ ಸ್ಟೋರಿ ಖ್ಯಾತಿಯ ವಿಜಯಲಕ್ಷ್ಮಿ ಶಿಬರೂರು.

ವಿಜಯಲಕ್ಷ್ಮಿ ಶಿಬರೂರು ರವರು ಮಾದ್ಯಮ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಪಾರ, ಇವರ ಸೇವೆ ಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ 2010-11, ಮಾಧ್ಯಮ ರತ್ನ ಪ್ರಶಸ್ತಿ 2011-12, ಬೆಂಗಳೂರು ರತ್ನ ಪ್ರಶಸ್ತಿ 2012- 13, ನಮ್ಮ ಬೆಂಗಳೂರು ಪ್ರಶಸ್ತಿ 2014-15, ಮಾಧ್ಯಮ ಸನ್ಮಾನ್ ಶ್ರೇಷ್ಟ ಇನ್ವೆಸ್ಟಿಗೇಷನ್ ರಿಪೋರ್ಟರ್ 2012 -13 ಹಾಗು ಇನ್ನು ಹಲವಾರು ಗೌರವಗಳು ಇವರನ್ನು ಅರಸಿ ಬಂದಿದೆ .
ವಿಜಯಲಕ್ಷ್ಮಿ ಶಿಬರೂರು ರವರು ಪಾಕಿಸ್ಥಾನಕ್ಕೆ ಬೇಟಿ ಕೊಟ್ಟು ಅಲ್ಲಿನ ಸಾಮಾಜಿಕ ಹಾಗು ಅರ್ಥಿಕ ಪರಿಸ್ಥಿತಿಯ ಅದ್ಯಯನ ನಡೆಸಿದ್ದಾರೆ , ಸರಿ ಸುಮಾರು 250 ಕ್ಕೂ ಹೆಚ್ಚು ಅಪರಾದ ಪ್ರಕರಣ , ವಿಚಾರಣಾ ಪ್ರಕರಣಗಳ ಜಾಡು ಹಿಡಿದು ಸುವರ್ಣ ನ್ಯೂಸ್ 24 /7 ಕವರ್ ಸ್ಟೋರಿ ಯಾ ಮೂಲಕ ಜನರಲ್ಲಿ ಸಾಮಾಜಿಕ ಸಮಸ್ಯೆಗಳ ಅರಿವು ಮೂಡಿಸಿದ್ದಾರೆ, ವಿಜಯಲಕ್ಷ್ಮಿ ಶಿಬರೂರು ರವರ ಪ್ರಯತ್ನದಿಂದ ಪ್ರಸಾರ ಮಾಡಿದ ” ಒಂದಂಕಿ ಲಾಟರಿ ದಂದೆ” ,ಬೆಟ್ಟಿಂಗ್ ದಂದೆ ” “ನಕಲಿ ಪಡಿತರ ಚೀಟಿ ಮಾಫಿಯಾ ” ” ಎತ್ತಿನ ಹೊಳೆ ಪ್ರಾಜೆಕ್ಟ್ ಸಿಕ್ರೆಟ್ , ” ಬಚಾವೋ ಅರ್ಕಾವತಿ ” ” ಬಾಲಕಾರ್ಮಿಕರ ಸಮಸ್ಯೆ ” ಪ್ಲೇ ಹೋಂ ದಂದೆ ” ಅಪಾರ ಜನ ಮೆಚ್ಚುಗೆ ಗಳಿಸಿತ್ತು ಹಾಗು ಸರ್ಕಾರದ ಕಣ್ ತೆರೆಸಿತ್ತು . ಹಲವರು ರಾಜಕೀಯ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿರುವ ಇವರ ನಮ್ಮ ಊರು ನಮ್ಮ ದೂರು , ಚುನಾವಣಾ ಪಯಣ ,ಜನಮತ ಹಾಗು ಬೆಂಗಳೂರು ಬ್ಯುರೋ ಕಾರ್ಯಕ್ರಮ ಮಾದ್ಯಮ ಕ್ಷೇತ್ರದಲ್ಲೇ ಮನ್ನಣೆ ಗಳಿಸಿತ್ತು . ಇವರ ಸರಿ ಸುಮಾರು 150 ಬರವಣಿಗೆ ಗಳು ಕನ್ನಡ ಹಾಗು ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು.

ಜ್ಯೋತಿಪ್ರಕಾಶ್ ಅತ್ರೆ:
Kadam-Jyothiprakash-Atreಸಂಜೆಯ ಆಕರ್ಷಣೆ ಜ್ಯೋತಿಪ್ರಕಾಶ್ ಅತ್ರೆ ಸಿನಿಮಾ ರಂಗದಲ್ಲಿ ಜೆ ಪಿ ಅಂತಲೇ ಪ್ರಸಿದ್ದಿ ಪಡೆದವರು , ನಾಟಕ ಗಳಿಗೆ ಕಥೆ ಬರೆಯುವ ಮೂಲಕ ತಮ್ಮ ವೃತ್ತಿ ಜೀವನ ಆರಂಬಿಸಿದ ಇವರು ನಾನ ಪಾಟೇಕರ್ ಅಭಿನಯದ ಷೆಹಶದ , ದಿವಂಗತ ಶಫಿ ಈನಮ್ದರ್ ಅರ್ಪಿಸಿದ ಬಸ್ ನಕಬ್ ಉತಾನೆ ತಕ್, ರೀಮಾ ಲಗು ಅಭಿನಯದ ದೂಸರ ಸಿಸಿಲ ಮುಂತಾದ ನಾಟಕಗಳಿಗೆ ಸಂಭಾಷಣೆ ಬರೆದಿದ್ದಾರೆ . ಜಾಹಿರಾತನ್ನು ಮುಖ್ಯ ವೃತ್ತಿಯಾಗಿ ಆಯ್ಕೆಮಾಡಿದ ಇವರು ದೇಶ ವಿದೇಶ ಗಳಲ್ಲಿ ಹಲವರು ಜಾಥ ಹಮ್ಮಿಕೊಳ್ಳುತ್ತಿದ್ದರು , ಹಲವಾರು ಹಿಂದಿ ಹಾಗು ಮರಾಠಿ ದಾರವಾಹಿಗಳಿಗೆ ಚಿತ್ರ ಕಥೆ ಬರೆದಿದ್ದ ಇವರ ಹಿಂದಿ ದಾರವಾಹಿ ಧಡಕನ್ ಹಾಗು ಕಗಾರ್ , ಕನ್ನಡ ದಲ್ಲಿ ಇವರು ನಿರ್ಮಿಸಿ ನಿರ್ದೇಶಿಸಿದ ಸುಗಮ ಸರಿಗಮ ಎಕ್ಸ್ಪ್ರೆಸ್ ಸಂಗಿತ ಕಾರ್ಯಕ್ರಮ ಅಪಾರ ಜನ ಮೆಚ್ಚುಗೆ ಗಳಿಸಿತ್ತು .

ಖ್ಯಾತ ಗಾಯಕರು ಅದ ಇವರು ಕಿಶೋರ್ ಕುಮಾರ್ ಮಾದರಿಯಲ್ಲಿ ಹಾಡುತ್ತ ಮುಂಬೈ , ಬೆಂಗಳೂರು ಮುಂತಾದ ನಗರಗಳಲ್ಲಿ ಅಪಾರ ಜನಸ್ತೋಮ ಸೇರಿಸುತ್ತಿದ್ದರು , ಹಲವಾರು ಹಾಡಿನ ಗುಚ್ಛ ಗಳಿಗೆ ತಾವೆ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ ಇದರಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಹಾಗು ಪಂಡಿತ್ ಶಂಕರ್ ಶಾನುಬೋಗ್ ಜೊತೆ ಯಲ್ಲಿ ಹಾಡಿದ ಚಾಂದ್ ಸವಾರಿ ಇವರಿಗೆ ಅಪಾರ ಹೆಸರು ಗಳಿಸಿಕೊಟ್ಟಿತು.

ವಿ ಜೆ ವಿನೀತ್ :
Kadam-VJ-vineethವಿ ಜೆ ವಿನೀತ್ ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದು ದಿನದ ಕಾರ್ಯಕ್ರಮವನ್ನು ತಮ್ಮದೇ ಆದ ಶೈಲಿಯಲ್ಲಿ ನಿರೂಪಿಸಲಿದ್ದಾರೆ, ಮಾಡೆಲ್, ನಿರ್ದೇಶಕ, ನಿರೂಪಣೆಗಳಲ್ಲಿ ವಿಶೇಷ ಪರಿಣತಿ ಪಡೆದಿರುವ ಇವರು, ವಿ4 ನ್ಯೂಸ್ ಚಾನೆಲ್, ಸಹಾಯ ಟಿವಿ ಚಾನೆಲ್ ನಲ್ಲಿ ಕೆಲಸ ಮಾಡಿದ್ದೂ ಸದ್ಯ ಸ್ಪಂದನ ಚಾನೆಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ .”ಅಕ್ವ ಐಸ್ ಬರ್ಗ್ ” ಜಾಹಿರಾತಿನಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿದ್ದ ಇವರು ಕನ್ನಡ ಕಿರು ಚಿತ್ರಗಳಾದ “ಸಲುಗೆ ” ತುಳು ಚಿತ್ರ “ರಂಗ್ “, “ಸೂಂಬೆ” ಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ , ಚಿತ್ರೀಕರಣ ನಡೆಯುತ್ತಿರುವ ತುಳು ಚಿತ್ರಗಳಾದ ” ರಂಭಾ ರೂಟಿ ” ” ಮಾರ್ನೆಮಿ ” ಚಿತ್ರದಲ್ಲೂ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ .

ರವಿ ಭಟ್ :
Kadam-Ravi-bhatಇನ್ನೊಬ್ಬರು ಮುಖ್ಯ ಅತಿಥಿಯಾಗಿ ದಕ್ಷಿಣ ಭಾರತದ ಚಿತ್ರನಟ ರವಿ ಭಟ್ ಆಗಮಿಸಲಿದ್ದಾರೆ. ರವಿ ಭಟ್ ಇವರು ಹಲವಾರು ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಹಾಗು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ , ಸದ್ಯ ಕನ್ನಡದ ಉದಯ ಟಿವಿ ಯಲ್ಲಿ ಪ್ರಸಾರ ವಾಗುತ್ತಿರುವ ಮಹಾಭಾರತ ದಾರವಾಹಿ ಯಲ್ಲಿ ಯುದಿಷ್ಟಿರ ಪಾತ್ರ ನಿರ್ವಹಿಸುತ್ತಿದ್ದಾರೆ .ಸ್ನಾತಕೋತ್ತರ ಪದವಿಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಚಿನ್ನದ ಪದಕ ಪಡೆದೆ ಇವರು ನಂತರ ಆಸ್ಟೇಲಿಯಾ ದ ಬ್ರಿಸ್ಬನ್ ನಲ್ಲಿ ಎಂ ಬಿ ಏ ಪದವಿ ಪಡೆದರು , ಪಿ ಪಿ ಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಇವರು ನಂತರ ಉದ್ಯಮ ಜಗತ್ತಿಗೆ ಕಾಲಿಟ್ಟರು .
ರವಿ ಭಟ್ ರವರು ಹಲವಾರು ತೆಲುಗು ಹಾಗು ತಮಿಳು ದಾರಾವಾ ಹಿಗಳಲ್ಲಿ ಅಭಿನಯಿಸಿದ್ದು , ಬಿಡುಗಡೆಗೆ ಸಿದ್ದವಾಗಿರುವ ತುಳು ಚಿತ್ರ ” ಶತ್ತರ್ದುಲೈ ” ನಲ್ಲೂ ಅಭಿನಯಿಸಿದ್ದಾರೆ .

ಪೂರ್ವ ಮಾಹಿತಿ: ಚರಣ್ ಬೈಂದೂರು

Leave a Reply