ಕುಂಭಾಶಿ: ಕೆರೆ ಸ್ವಚ್ಚತೆ ಹಾಗೂ ಮರು ನಿರ್ಮಾಣ ಕಾರ್ಯಕ್ಕೆ ಚಾಲನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಮೇ.09:
ಉಡುಪಿಯ ವೆಂಟನಾ ಫೌಂಡೇಶನ್ ನೇತೃತ್ವದಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರವಡಿ ರಸ್ತೆಯ ಶ್ರೀ ವಿಷ್ಣು ಮೂರ್ತಿ ದೇವಾಸ್ಥಾನ ಸಮೀಪ ಕೊಯ್ಯಾರಿ ಕೆರೆಯನ್ನು ಸ್ಚಚ್ಚಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

Call us

Click Here

ಮೊದಲು ನೀರನ್ನು ಬರಿದಾಗಿಸಿ, ಹೂಳನ್ನು ಎತ್ತಿ ಸಂಪೂರ್ಣವಾಗಿ ಸ್ವಚ್ಚಗೊಳಿಸಿ ಸುತ್ತಲಿನ ಗದ್ದೆಗಳಿಗೆ ನೀರು ಸಿಗುವಂತೆ ಮಾಡಲಾಗುವುದು. ಸ್ಥಳೀಯ ರೈತರಿಗೆ ಬೇಸಾಯದ ಜೊತೆಯಲ್ಲಿ ತರಕಾರಿ, ವಾಣಿಜ್ಯ ಬೆಳೆಯನ್ನು ವರ್ಷವಿಡಿ ಬೆಳೆಯಲು ಸಹಕಾರಿಯಾಗಲಿದೆ. ಹತ್ತು ದಿನಗಳ ಕಾಲ ನಡೆಯುವ ಸ್ವಚ್ಚತಾ ಕಾರ್ಯದ ಸಂಪೂರ್ಣ ವೆಚ್ಚವನ್ನು ವೆಂಟನ ಫೌಂಡೇಶನ್ ಭರಿಸಲಿದೆ.

ಉಡುಪಿಯ ವೆಂಟನಾ ಫೌಂಡೇಶನ್ ಅಧ್ಯಕ್ಷ ಹಾಗೂ ಮಾಹಿತಿ ತಂತ್ರಜ್ಞಾನದ ದಿಗ್ಗಜ 99ಗೇಮ್ಸ್ ಆನ್ಲೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಭಟ್ ಚಾಲನೆ ನೀಡಿ ಪರಿಸರದ ಉಳಿವಿಗಾಗಿ ಜಲ ಸಂರಕ್ಷಣೆ ಅತ್ಯಗತ್ಯ. ಅದರಂತೆಯೇ ಕೆರೆಯ ಮರು ನಿರ್ಮಾಣ ಮಾಡಿ ನೀರನ್ನು ಉಳಿಸುವುದರೊಂದಿಗೆ ಈ ಪರಿಸರದ ಜನರಿಗೆ ಹಾಗೂ ಪಕ್ಷಿಸಂಕುಲಕ್ಕೆ ಸಹಕಾರಿಯಾಗಲಿದೆ ಎಂದರು.

ಇತ್ತೀಚೆಗೆ ಆರಂಭಗೊಂಡ ಈ ಫೌಂಡೇಶನ್ ಮೂಲಕ ಕೊರವಡಿ ಸರಕಾರಿ ಶಾಲೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಹೆಣ್ಣು ಮಕ್ಕಳ ಶೌಚಾಲಯದ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಾಜ ಮುಖಿ ಕಾರ್ಯಗಳಲ್ಲಿ ಫೌಂಡೇಶನ್ ಮೂಲಕ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತೊಡಗಿಸಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಎಸ್. ಆರ್. ಮಾತನಾಡಿ ಎಲ್ಲವೂ ಸರಕಾರದ ವತಿಯಿಂದ ನಡೆಯಬೇಕು ಎನ್ನುವುದು ತಪ್ಪು ಕಲ್ಪನೆ. ಸರಕಾರೇತರ ಸಂಸ್ಥೆಯ ಮುಖೇನ ಸಾಮಾಜಿಕ ಕಳಕಳಿಯ ಕಾರ್ಯಗಳು ನಡೆದರೆ ಉರಿಗೆ ಉಪಕಾರಿಯಾಗಬಲ್ಲದು ಎಂದರು.

Click here

Click here

Click here

Click Here

Call us

Call us

ಈ ಸಂಧರ್ಭದಲ್ಲಿ ಫೌಂಡೇಶನ್ ಸದಸ್ಯ ರವೀಂದ್ರ ಕೆ, ರೋಟರಿ ಸಮುದಾಯದ ದಳದ ಅಧ್ಯಕ್ಷ ಶ್ರೀಧರ್ ಪುರಾಣಿಕ್, ಎಂಜಿನಿಯರ್ ಶ್ರೀನಿಧಿ ಉಪಾಧ್ಯ ಗ್ರಾಮ ಪಂಚಾಯತ್ ವಾರ್ಡ್ ಸದಸ್ಯರಾದ ಆನಂದ ಪೂಜಾರಿ, ಸ್ಥಳೀಯ ಹಿರಿಯರಾದ, ಸುರೇಶ್ ಹೆಬ್ಬಾರ್, ಸಂಜೀವ, ಶಿವ, ಬಾಬು, ವಿಶ್ವನಾಥ ಹಾಗೂ ಪರಿಸರದ ರೈತರು, ಸ್ಥಳೀಯರು ಉಪಸ್ಥತರಿದ್ದು ಸ್ಚಚ್ಚತಾ ಕಾರ್ಯಕ್ಕೆ ಸಹಕರಿಸಿದರು.

ಶ್ವೇತಾ ಎಸ್ ಆರ್ ಸ್ವಾಗತಿಸಿದರು ಹಾಗೂ ಚಂದ್ರ ಇಂಬಾಳಿ ಧನ್ಯವಾದ ವಂದಿಸಿದರು.

Leave a Reply