ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಂಕಗಳನ್ನು ಪಡೆದು ಕೊಳ್ಳುದಕೋಸ್ಕರ ಮಕ್ಕಳನ್ನು ಶಾಲೆಗೆ ಕಳುಹಿಸ ಬಾರದು ಸಂಸ್ಕಾರಯುತ ಬದುಕಿನ ನಿರ್ಮಾಣಕ್ಕೆ ವಿದ್ಯೆ ಪೂರಕವಾಗಿರಬೇಕು ಹಣದಿಂದ ಜೀವನವನ್ನು ಸಫಲ ಮಾಡಿಕೊಳ್ಳಲು ಸಾಧ್ಯವಿಲ್ಲ ನಮ್ಮ ಸಂಸ್ಕೃತಿ ಸಂಸ್ಕಾರಯುತ ಬದುಕಿನಿಂದ ಅದು ಸಾಧ್ಯವಿದೆ ಶಂಕರಾಚಾರ್ಯರ ಜನ್ಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶಿಬಿರ ಅನುಕರಣೀಯವಾಗಿದೆ ಎಂದು ಉಳ್ಳೂರು ಸ.ಹಿ.ಪ್ರಾ ಶಾಲಾ ಮುಖ್ಯೋಪಾಧ್ಯಾಯರಾದ ಮಾಧವ ಅಡಿಗರು ಹೇಳಿದರು.
ನಾವುಂದ ಬಡಾಕೆರೆ ವೈದಿಕ ಮಂದಿರದ ವಠಾರದಲ್ಲಿ ಭಾನುವಾರ ನಡೆದ ಶ್ರೀ ಶಾರದಾ ಸದ್ವಿದ್ಯಾ ವಸಂತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಶ್ರೀ ಶಾರದಾ ವಿದ್ಯಾ ಪೀಠಂ ಶೃಂಗೇರಿಯ ದಕ್ಷಿಣ ಪ್ರಾಂತೀಯ ಧರ್ಮಾಧಿಕಾರಿಗಳಾದ ವೇ.ಮೂ.ಲೋಕೇಶ್ ಅಡಿಗ ಬಡಾಕೆರೆ ಅವರು ಮಾತನಾಡಿ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಶಿಬಿರಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ ಬಾಲ್ಯದ ನೆನಪುಗಳ ಜತೆಗೆ ಸಮಯ ಕಳೆದಿರುವುದು ಮಕ್ಕಳಿಗೂ ಸಂತೃಪ್ತಿಯನ್ನು ಕೊಟ್ಟಿದೆ ಮಕ್ಕಳು ಪ್ರತಿಭಾನ್ವಿತ ರಾಗಬೇಕು ಎನ್ನುವ ದೃಷ್ಟಿಯಿಂದ ಬೇಸಿಗೆ ಶಿಬಿರ ಆಯೋಜನೆ ಮಾಡಲಾಗಿದೆ ಎಂದರು.
ಕಿರಿಮಂಜೇಶ್ವರ ದೇವಳದ ಪುರೋಹಿತರಾದ ವೇ.ಮೂ.ರಾಮಕೃಷ್ಣ ಕಾರಂತ, ಲೇಖಕರಾದ ಅನಂತೇಶ್ ಭಟ್ ನೆಂಪು, ಉದ್ಯಮಿ ಕೃಷ್ಣ ಮಂಜರು ಮಾರಣಕಟ್ಟೆ ಶುಭಹಾರೈಸಿದರು.
ಯೋಗಗುರು ಸುಬ್ಬ ದೇವಾಡಿಗ ಅರೆಹೊಳೆ ಮತ್ತು ಅರೆಹೊಳೆ ಶಾಲೆ ವಿದ್ಯಾರ್ಥಿನಿ ಯೋಗಪಟು ನಿರೀಕ್ಷಾ ಅವರನ್ನು ಸನ್ಮಾನಿಸಲಾಯಿತು.
ಲಕ್ಷ್ಮೀಶ ಅಡಿಗ ಸ್ವಾಗತಿಸಿದರು, ವಿನಯ ನಾಗೇಂದ್ರ ಅಡಿಗ ಪ್ರಾರ್ಥಿಸಿದರು, ಲೋಕೇಶ್ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಶಾಂತ್ ಮಯ್ಯ ನಿರೂಪಿಸಿದರು. ನಾಗೇಂದ್ರ ಅಡಿಗ ವಂದಿಸಿದರು. ಶಿಬಿರಾರ್ಥಿಗಳು ಮಕ್ಕಳ ಪೋಷಕರು ಉಪಸ್ಥಿತರಿದ್ದರು. 21ದಿನಗಳ ಕಾಲ ನಡೆದ ಶಿಬಿರದಲ್ಲಿ 50 ಶಿಬಿರಾರ್ಥಿಗಳು ಭಾಗವಹಿಸಿದ್ದರು.