ಯಶಸ್ವಿ ಪ್ರದರ್ಶನದತ್ತ ಕುಂದಾಪುರ ಕನ್ನಡದ ಸೊಗಡಿನ ‘ಕೊಳಿ ತಾಳ್’ ಸಿನೆಮಾ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ಕನ್ನಡದ ಸೊಗಡನ್ನು ಹೊತ್ತಿರುವ ಸಿನೆಮಾ ‘ಕೋಳಿ ತಾಳ್’ ಇದೀಗ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ.

Call us

Click Here

ಕುಂದಾಪುರ, ಮಲೆನಾಡ ಭಾಗದಲ್ಲಿ ಅಜ್ಜಿ ಮನೆಗೆ ಮೊಮ್ಮಗ ಬಂದರೆ ಕೋಳಿ ಸಾರು ಮಾಡುವ ಸಂಪ್ರದಾಯವಿದೆ. ಹಾಗೆ ಮೊಮ್ಮಗ ಬಂದ ಹೊತ್ತಲ್ಲಿ ಸಾರು ಮಾಡಬೇಕಿದ್ದ ಕೋಳಿಯೇ ನಾಪತ್ತೆಯಾಗುತ್ತದೆ. ಆ ಕೋಳಿಯನ್ನು ಹುಡುಕಾಡುವ ಪ್ರಸಂಗವೇ ‘ಕೋಳಿ ತಾಳ್’ ಚಿತ್ರದ ಸಾರಾಂಶ. 90 ನಿಮಿಷಗಳ ಈ ಸಿನಿಮಾವನ್ನು 15ರಿಂದ 20 ದಿನಗಳ ಅವಧಿಯಲ್ಲಿ ಸಾಗರ, ಬ್ರಹ್ಮಾವರ, ಉಡುಪಿ, ಮಂದಾರ್ತಿಯಲ್ಲಿ ಶೂಟಿಂಗ್ ಮಾಡಲಾಗಿದೆ. ಲಾಕ್ಡೌನ್ಗೂ ಮುನ್ನ ಚಿತ್ರದ ಶೂಟಿಂಗ್ ನಡೆದಿತ್ತು.

ಅಭಿಲಾಷ್ ಶೆಟ್ಟಿ

ಕೋಳಿ ತಾಳ್ ಆಫ್ ಬೀಟ್ ಸಿನಿಮಾವಾಗಿದ್ದು, ಮೂವರ ನಡುವೆ ನಡೆಯುವ ಕಥೆಯಾಗಿದೆ. ನ್ಯೂಯಾರ್ಕ್ ಇಂಡಿಯನ್ ಸಿನಿಮೋತ್ಸವ ಸೇರಿದಂತೆ ಹಲವು ಸಿನಿಮೋತ್ಸವಕ್ಕೆ ಆಯ್ಕೆಯಾದ ಹೆಗ್ಗಳಿಯೂ ಈ ಸಿನೆಮಾಕ್ಕಿದೆ. ಹಿರಿಯ ನಟರಾದ ರಾಧಾ ರಾಮಚಂದ್ರ ಮತ್ತು ಪ್ರಭಾಕರ್ ಕುಂದರ್ ಪ್ರಮುಖ ಪಾತ್ರದಲ್ಲಿದ್ದಾರೆ. ನಿರ್ದೇಶನದ ಜತೆಗೆ ನಟನಾಗಿಯೂ ಅಭಿಲಾಷ್ ಶೆಟ್ಟಿ ನಟಿಸಿದ್ದಾರೆ.

ಸಚಿನ್ ಪಟ್ಟಣಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸ್ವರೂಪ ಯಶವಂತ್ ಛಾಯಾಗ್ರಹಣ, ಬ್ರೆಜಿಲ್ ಮೂಲದ ವಿಫೌರ್ ಮೊರಾಯಿಸ್ ಸೌಂಡ್ ಡಿಸೈನ್ ಮಾಡಿದ್ದಾರೆ.

ಚಿತ್ರ ಮೊದಲ ಹಂತದಲ್ಲಿ ಭಾರತ್ ಸಿನಿಮಾಸ್’ನಲ್ಲಿ ಪ್ರದರ್ಶನಕಾಣಲಿದ್ದು, ಬುಕ್ ಮೈ ಶೋ ಮೂಲಕವೂ ಸೀಟ್ ಕಾಯ್ದಿರಿಸಬಹುದಾಗಿದೆ.

Click here

Click here

Click here

Click Here

Call us

Call us

Book Ticket for the Film Koli Taal Herehttps://in.bookmyshow.com/kundapura/movies/koli-taal/ET00132563

Leave a Reply