ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು,ಜು.12: ಕಡಿಮೆ ವೆಚ್ಚ, ನಿರ್ವಹಣೆ, ಮಾನವ ಶ್ರಮ ಹಾಗೂ ವಿದ್ಯುಚ್ಚಕ್ತಿ ಇದ್ಯಾವುದರ ಅಗತ್ಯವೂ ಇಲ್ಲದೇ, ಪರಿಸರಕ್ಕೂ ಪೂರಕವಾಗಿ ಕಾರ್ಯನಿರ್ವಹಿಸಬಲ್ಲ ಯಶಸ್ವಿ ಜೈವಿಕ ತಂತ್ರಜ್ಞಾನ ಮ್ಯಾಕ್ ಬಯೋ ಡೈಜಿಸ್ಟರ್ (MAK Bio – Digester) ಸೆಫ್ಟಿಕ್ ಟ್ಯಾಂಕ್/ಎಸ್.ಟಿ.ಪಿ ಕರ್ನಾಟಕದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹಾಲ್ಕಲ್ ಸದಾನಂದ ಹಾಲ್‌ನಲ್ಲಿ ಉತ್ಪಾದನಾ ಸಂಸ್ಥೆ ಮ್ಯಾಕ್ ಇಂಡಿಯಾ (MAK India Limited) ಹಾಗೂ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿರುವ ಮೇಡ್ ಇನ್ ಇಂಡಿಯಾ ಎಂಐಐ (Made in India MII Pvt. Ltd) ಪ್ರತಿನಿಧಿಗಳ ಸಮ್ಮುಖದಲ್ಲಿ ಸೋಮವಾರ ಲಾಂಚ್ ಕಾರ್ಯಕ್ರಮ ನಡೆದಿದೆ.
ಈ ಕಾರ್ಯಕ್ರಮದಲ್ಲಿ ಮ್ಯಾಕ್ ಇಂಡಿಯಾ ಲಿಮಿಟೆಡ್ ಸಂಸ್ಥಾಪಕರಾದ ಮಾಣಿಕಂ ಅತ್ತಪ್ಪ ಗೌಂಡರ್, ಸಂಸ್ಥೆಯ ಹಿರಿಯ ವಿಜ್ಞಾನಿ ಶಿವಕುಮಾರ್ ರಾಮನ್, ಮೇಡ್ ಇನ್ ಇಂಡಿಯಾ ಸಂಸ್ಥೆಯ ಪ್ರಮುಖರಾದ ಕೆ. ವೆಂಕಟೇಶ ಕಿಣಿ, ರಾಜೀವ್ ಕುಮಾರ್ ಉಪಸ್ಥಿತರಿದ್ದರು. ಕರ್ನಾಟಕದಲ್ಲಿ ಮೊದಲ ಭಾರಿಗೆ ಬೈಂದೂರು ಪ್ಯಾಲೇಸ್ ಹಾಗೂ ದೇವಿ ಮೂಕಾಂಬಿ ಅಪಾರ್ಟ್‌ಮೆಂಟ್‌ಗಳಿಗೆ ಈ ಯೋಜನೆಯನ್ನ ಅಳವಡಿಸಲಾಗುತ್ತಿದೆ.
ಬಯೋ ಡೈಜಿಸ್ಟರ್ – ಡಿ.ಆರ್.ಡಿ.ಓ ತಂತ್ರಜ್ಞಾನ, ಮ್ಯಾಕ್ ಉತ್ಪನ್ನ:
ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಡಿ.ಆರ್.ಡಿ.ಓ ಮುಖ್ಯಸ್ಥರಾಗಿದ್ದ ಸಂದರ್ಭ ಅವರ ನೇತೃತ್ವದ ವಿಜ್ಞಾನಿಗಳ ತಂಡ ಬಯೋ ಡೈಜಿಸ್ಟರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಅದರ ಪೇಟೆಂಟ್ ಪಡೆದುಕೊಂಡಿತ್ತು. ಸಿಯಾಚಿನ್ ಮೊದಲಾದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸೈನ್ಯದ ಮಾನವ ತ್ಯಾಜ್ಯವನ್ನು ಹಾಗೂ ಮಾಲಿನ್ಯ ಕಡಿಮೆಗೊಳಿಸುವ ಉದ್ದೇಶದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಮುಂದೆ ಭಾರತೀಯ ಸೈನ್ಯದ ಜೊತೆಗೆ ವಿವಿಧ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿರುವ ಮ್ಯಾಕ್ ಸಂಸ್ಥೆ ಡಿ.ಆರ್.ಡಿ.ಓ ಬಯೋ ಡೈಜಿಸ್ಟರ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸಂಪೂರ್ಣ ಅನುಮತಿ ಪಡೆದುಕೊಂಡು ಮಾರುಕಟ್ಟೆಯ ಅಗತ್ಯವನ್ನು ಅರಿತು ಅದರಂತೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ಮೇಕ್ ಇನ್ ಇಂಡಿಯಾ ಎಂಬ ಘೋಷವಾಕ್ಯವನ್ನು ಅಕ್ಷರಶಃ ಪಾಲಿಸುತ್ತಾ ಈ ನೆಲನ ಮಾಲಿನ್ಯವನ್ನು ಕಡಿಮೆಗೊಳಿಸುವ ಕಂಕಣತೊಟ್ಟು ಈ ಮಹಾತ್ವಾಕಾಂಕ್ಷಿ ಯೋಜನೆಯನ್ನು ಜನರಿಗೆ ತಲುಪಿಸುತ್ತಿದೆ.
ಮ್ಯಾಕ್ – ಡಿ.ಆರ್.ಡಿ.ಓ ಬಯೋ ಡೈಜಿಸ್ಟರ್ ಹೇಗೆ ಕಾರ್ಯನಿರ್ವಹಿಸುತ್ತೆ?
ಮ್ಯಾಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಸೆಫ್ಟಿಕ್ ಟ್ಯಾಂಕ್ ಜೈವಿಕ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ತಂತ್ರಜ್ಞಾನವು ಆಮ್ಲಜನಕರಹಿತ ಬ್ಯಾಕ್ಟೀರಿಯಾ ಇನಾಕ್ಯುಲಮ್ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುವುದರಿಂದ ಮ್ಯಾಕ್ ತಂತ್ರಜ್ಞಾನದೊಂದಿಗೆ ಮಾನವ ತ್ಯಾಜ್ಯವನ್ನು ವಿಘಟನೆಗೊಳಿಸುವ ಹಾಗೂ ಜೀರ್ಣಿಸಿಕೊಳ್ಳುವ ಸುಷ್ಮಾಣುಗಳನ್ನು ಬಯೋ ಸೆಪ್ಟಿಕ್ ಟ್ಯಾಂಕಿಗೆ ಸೇರಿಸಲಾಗುತ್ತದೆ. ಈ ಪ್ರಕ್ರಿಯೆಯೊಂದಿಗೆ ಒಮ್ಮೆ ಜೈವಿಕ ಸೆಪ್ಟಿಕ್ ಟ್ಯಾಂಕ್ ಅಳವಡಿಸಿದರೇ ಮತ್ತೆ ಯಾವುದೇ ನಿರ್ವಹಣೆಯ ಅಗತ್ಯವಿರುವುದಿಲ್ಲ. ಬಯೋ ಡೈಜಿಸ್ಟರ್ ಟ್ಯಾಂಕ್ ಓಲಗೆ ಇರುವ ಸೂಕ್ಷಾಣು ಜೀವಿಗಳು ಮಾನವ ತ್ಯಾಜ್ಯವನ್ನು ಜೀರ್ಣಿಸಿಕೊಳ್ಳುವುದರ ಜೊತೆಗೆ ಅಲ್ಲಿನ ನೀರು ಸಂಸ್ಕರಣೆಗೊಳ್ಳುತ್ತದೆ.
ತ್ಯಾಜ್ಯ ಸಂಗ್ರಹಕ್ಕೆ ಸಂಪೂರ್ಣ ಕಾಂಕ್ರಿಟ್ ಬಳಸಿ ಟ್ಯಾಂಕ್ ಹಾಗೂ ತ್ಯಾಜ್ಯ & ಸಂಸ್ಕೃರಿತ ನೀರು ಪೂರೈಕೆಗೆ ಪೈಪ್ ಬಳಸಿ ಜೈವಿಕ ಸೆಪ್ಟಿಕ್ ಟ್ಯಾಂಕ್ ಸಿದ್ಧಪಡಿಸಲಾಗುತ್ತದೆ. ಇತರೆ ಸೆಫ್ಟಿಕ್ ಟ್ಯಾಂಕ್’ ಅಥವಾ ಎಸ್.ಟಿ.ಪಿಗೆ ಹೊಲಿಸಿದರೆ ಅತ್ಯಂತ ಕಡಿಮೆ ಜಾಗದಲ್ಲಿ, ಕಡಿಮೆ ವೆಚ್ಚದಲ್ಲಿ ಒದಗಿಸಬಹುದಾದ ತಂತ್ರಜ್ಞಾನವಾಗಿದೆ. ಜೀವನ ಪರ್ಯಂತ ಯಾವುದೇ ನಿರ್ವಹಣಾ ವೆಚ್ಚವಿಲ್ಲದೇ, ಯಾವುದೇ ವಿದ್ಯುಚ್ಛಕ್ತಿ, ಮಾನವಶಕ್ತಿಯ ಅವಶ್ಯಕತೆ ಇಲ್ಲದಂತೆ ಒಂದೇ ಭಾರಿ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. ಬಯೋ ಡೈಜಿಸ್ಟರ್ ಸೆಫ್ಟಿಕ್ ಟ್ಯಾಂಕ್ ಅಳವಡಿಸಿಕೊಂಡರೆ ಟಾಯ್ಲೆಟ್ ವೇಸ್ಟ್ ವಾಟರ್ ಮೂಲಕ ಬರಬಹುದಾದ ರೋಗಗಳು ಶೇ.99ರಷ್ಟು ಕಡಿಮೆಯಾಗಲಿದೆ.
ಎಲ್ಲೆಲ್ಲಿ ಇದರ ಅಗತ್ಯತೆ?
ಮನೆ, ಅಪಾರ್ಟ್ಮೆಂಟ್, ಶಾಲಾ – ಕಾಲೇಜುಗಳು, ಫ್ಯಾಕ್ಟರಿ, ಅಂಗಡಿ, ಹೋಟೆಲ್, ರೆಸ್ಟೋರೆಂಟ್, ಲಾಡ್ಜ್, ರೆಸಾರ್ಟ್, ದೇವಸ್ಥಾನ, ಕನ್ವೆಕ್ಷನ್ ಸೆಂಟರ್ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಮ್ಯಾಕ್ ಸಂಸ್ಥೆ ಸಿದ್ಧಪಡಿಸಿದ ಬಯೋ-ಟಾಯ್ಲೆಟ್, ಬಯೋ-ಸೆಫ್ಟಿಕ್ ಟ್ಯಾಂಕ್, ಬಯೋ-ಟಾಯ್ಲೆಟ್ ಕ್ಯಾಬಿನ್ ಮೊದಲಾದ ಉತ್ಪನ್ನಗಳನ್ನು ಬಳಸಬಹುದಾಗಿದೆ.
ವಿಶೇಷತೆಗಳು & ಉಪಯೋಗಗಳು:
• ಬಯೋ ಡೈಜಿಸ್ಟರ್ ಸೆಪ್ಟಿಕ್ ಟ್ಯಾಂಕ್ ಬಳಸುವುದರಿಂದ ಕೆಟ್ಟ ವಾಸನೆಯ ಸಮಸ್ಯೆ ಇಲ್ಲ. ಪ್ರತಿಭಾರಿಯೂ ಮಾನವಶ್ರಮ ಬಳಸಿಕೊಳ್ಳುವ ಹಾಗೂ ವಿದ್ಯುಚ್ಛಕ್ತಿಯ ಬಳಸುವ ಅಗತ್ಯವಿಲ್ಲ.
• ವೇಸ್ಟೇಜ್ ಹಾಗೂ ನಿರ್ವಹಣೆಯ ಸಮಸ್ಯೆ ಇಲ್ಲ. ಒಮ್ಮೆ ಅಳವಡಿಸಿದರೆ ಮತ್ತೆ ನಿರ್ವಹಣೆ ಮಾಡಬೇಕಾದ ಅಗತ್ಯವೇ ಇರುವುದಿಲ್ಲ.
• ಬಯೋ ಡೈಜಿಸ್ಟರ್ ಅಳವಡಿಸುವುದರಿಂದ ಒಳಚರಂಡಿ ಮಾಲಿನ್ಯವನ್ನು ಆ ಮೂಲಕ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದಾಗಿದೆ.
• ಇತರೆ ಸೆಪ್ಟಿಕ್ ಟ್ಯಾಂಕ್’ಗಳಿಗೆ ಹೊಲಿಸಿದರೆ ತ್ಯಾಜ್ಯದಿಂದ ಮೂಲಕ ಬರಬಹುದಾದ ರೋಗಗಳು ಶೇ.99ರಷ್ಟು ಬಯೋ ಡೈಜಿಸ್ಟರ್ ಅಳವಡಿಸುವುದರಿಂದ ಕಡಿಮೆಯಾಗಲಿದೆ.
• ಬಯೋ ಡೈಜಿಸ್ಟರ್ ಸೆಫ್ಟಿಕ್ ಟ್ಯಾಂಕ್ ಮೂಲಕ ಸಂಸ್ಕರಣೆಗೊಂಡ ನೀರನ್ನು ಗಾರ್ಡನ್, ಕೃಷಿ ಮೊದಲಾದ ಉದ್ದೇಶಗಳಿಗೆ ಬಳಸಿಕೊಳ್ಳಬಹುದಾಗಿದೆ.
• ಬಯೋ ಡೈಜಿಸ್ಟರ್ ಸೆಫ್ಟಿಕ್ ಟ್ಯಾಂಕ್ ಬಳಕೆಯಿಂದ ಮಲಹೊರುವ ಪದ್ದತಿಯಾಗಲಿ, ಯಂತ್ರವನ್ನು ಬಳಸಿ ಮಲವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ಪದ್ಧತಿಯ ಅವಶ್ಯಕತೆಯೇ ಇರುವುದಿಲ್ಲ. ಮಾನವ ತ್ಯಾಜ್ಯ ಬಯೋ ಡೈಜಿಸ್ಟ್ ತಂತ್ರಜ್ಞಾನದ ಮೂಲಕ ಸಂಸ್ಕೃರಣೆಗೊಳ್ಳುವುದರಿಂದ ಇದ್ಯಾವುದರ ಅವಶ್ಯಕತೆಯೂ ಇರುವುದಿಲ್ಲ.
ಮಾನವ ತ್ಯಾಜ್ಯ ನಿರ್ವಹಣೆಗೆ ಸುಲಭ ಪರಿಹಾರ:
10 ಜನರು ಬಳಕೆಗೆ – 800 ಲೀಟರ್ ಸಾಮರ್ಥ್ಯದ ಬಯೋ ಡೈಜಿಸ್ಟರ್
20 ಜನರು ಬಳಕೆಗೆ – 1,600 ಲೀಟರ್ ಸಾಮರ್ಥ್ಯದ ಬಯೋ ಡೈಜಿಸ್ಟರ್
40 ಜನರು ಬಳಕೆಗೆ – 2,900 ಲೀಟರ್ ಸಾಮರ್ಥ್ಯದ ಬಯೋ ಡೈಜಿಸ್ಟರ್
100 ಜನರ ಬಳಕೆಗೆ – 8,000 ಲೀಟರ್ ಸಾಮರ್ಥ್ಯದ ಬಯೋ ಡೈಜಿಸ್ಟರ್
ಮ್ಯಾಕ್ ಇಂಡಿಯಾ ಲಿಮಿಟೆಡ್ (MAK INDIA LIMITED)
ಮ್ಯಾಕ್ ಇಂಡಿಯಾ ಲಿಮಿಟೆಡ್ ಸಂಸ್ಥೆ ತಮಿಳುನಾಡಿನ ಸೇಲಂನಲ್ಲಿ ಜನಿಸಿದ ರೈತನ ಮಗ ಮಾಣಿಕಂ ಅತ್ತಪ್ಪ ಗೌಂಡರ್ ಅವರ ಕನಸಿನ ಕೂಸು. ಕೊಯಮುತ್ತೂರಿನ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರೈಸಿದ ಅವರು, ಮ್ಯಾಕ್ ಗ್ರೂಪ್ ಮೂಲಕ ತಮ್ಮ ಪರಿಸರ ಸ್ನೇಹಿ ಯೋಜನೆಯನ್ನು, ಸಾರ್ವಜನಿಕರ ಅನುಕೂಲಕ್ಕಾಗಿ ಬಳಸುವ ಮಹತ್ಕಾರ್ಯಕ್ಕೆ ಪಣತೊಟ್ಟಿದ್ದಾರೆ.
ಮ್ಯಾಕ್ ಗ್ರೂಪ್’ನಲ್ಲಿ ಇಂದು ತಮ್ಮ ಕೌಶಲ್ಯವನ್ನೇ ಬಂಡವಾಳವಾಗಿಸಿಕೊಂಡ ಉತ್ಸಾಹಿ ತಂಡವಿದ್ದು, ವಿವಿಧ ಕ್ಷೇತ್ರಗಳಲ್ಲಿ ಮಾಲಿನ್ಯರಹಿತವಾಗಿ ಜೈವಿಕ ಹಾಗೂ ವಿವಿಧ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ.
ಮಾಜಿ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರೊಂದಿಗೆ ಡಿ.ಆರ್.ಡಿ.ಓ ಮುಖ್ಯಸ್ಥರಾಗಿದ್ದ ಸಂದರ್ಭ, ಡಿ.ಆರ್.ಡಿ.ಓ ಜೊತಗೆ ವಿವಿಧ ಯೋಜನೆಗಳಲ್ಲಿ (ಭಾರತೀಯ ಕ್ಷಿಪಣಿ ಸೇರಿದಂತೆ) ಮ್ಯಾಕ್ ಇಂಡಿಯಾ ತೊಡಗಿಸಿಕೊಂಡಿತ್ತು. ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಕನಸನ್ನು ನನಸಾಗಿಸುವ ಆಶಯದೊಂದಿಗೆ ಎಲ್ಲಾ ಬಗೆಯ ಮಾಲಿನ್ಯಗಳಿಗೂ ಮ್ಯಾಕ್ ಸಂಸ್ಥೆ ಪರಿಹಾರ ಮಾರ್ಗೊಪಾಯಗಳನ್ನು ಕಂಡುಕೊಂಡಿದೆ. ಮಾಲಿನ್ಯ ತಡೆಗಟ್ಟಲು ಅಗತ್ಯವಿರುವ ತಂತ್ರಜ್ಞಾನವನ್ನು ಜನರಿಗೆ ಒದಗಿಸುತ್ತಿದೆ.
ಕೊಯಮುತ್ತೂರಿನ ಕೇಂದ್ರಭಾಗದಲ್ಲಿ ಪ್ರಧಾನ ಕಛೇರಿ ಹಾಗೂ ಉತ್ಪಾದನಾ ಘಟಕವನ್ನು ಹೊಂದಿರುವ ಮ್ಯಾಕ್ ಗ್ರೂಪ್ ಉತ್ಪಾದನೆಯ ವಿವಿಧ ಆಯಾಮಗಳಲ್ಲಿ ತೊಡಗಿಕೊಂಡಿದೆ. 1973ರಲ್ಲಿ ಆರಂಭಗೊಂಡ ಮ್ಯಾಕ್ ಕಂಟ್ರೊಲ್ಸ್ & ಸಿಸ್ಟಮ್ ಸಂಸ್ಥೆಯು ಏವಿಯೇಷನ್ ಗ್ರೌಂಡ್ ಸಪೋರ್ಟ್ ಉತ್ಪನ್ನಗಳ ಉತ್ಪಾದನೆ ಹಾಗೂ ಭಾರತೀಯ ಮಿಲಿಟರಿಗೆ ಸಂಬಂಧಿಸಿದ ವಿವಿಧ ಉತ್ಪನ್ನಗಳ ಉತ್ಪಾದನೆಯಲ್ಲಿ ಪ್ರಸಿದ್ಧಿ ಪಡೆದಿದೆ. 1977ರಲ್ಲಿ ಯು.ಎಸ್.ಎನಲ್ಲಿ ಆರಂಭಗೊಂಡ ಏರ್ + ಮ್ಯಾಕ್ ಇಂಡಸ್ಟ್ರೀಸ್ ಮ್ಯಾಕ್ ತಂತ್ರಜ್ಞಾನವನ್ನು ವಿಶ್ವಕ್ಕೆ ಪೂರೈಸುವ ಉದ್ದೇಶದೊಂದಿಗೆ ಆರಂಭಗೊಂಡಿದ್ದು ಇಂದು 37ಕ್ಕೂ ಅಧಿಕ ದೇಶಗಳಲ್ಲಿ ಗ್ರಾಹರನ್ನು ಹೊಂದಿದೆ. ಮ್ಯಾಕ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ದೇಶವನ್ನು ಮಾಲಿನ್ಯಮುಕ್ತವಾಗಿಸುವ ಆಶಯದೊಂದಿಗೆ ಬಯೋ ಡೈಜಿಸ್ಟರ್ ಸೆಪ್ಟಿಕ್ ಟ್ಯಾಂಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಮ್ಯಾಕ್ ಇಂಡಿಯಾ ಬಯೋ ಡೈಜಿಸ್ಟರ್ ಸೆಪ್ಟಿಕ್ ಟ್ಯಾಂಕ್, ಮ್ಯಾಕ್ ಗ್ರೀನ್ ಇನ್ಸಿನಿರಟರ್, ಮ್ಯಾಕ್ ಸಾವಯವ ಕೃಷಿ ಪೂರಕ ಉತ್ಪನ್ನ, ಮುನ್ಸಿಪಾಲ್ ಲಿಕ್ವಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಮೊದಲಾದ ಉತ್ನನ್ನಗಳನ್ನು ಹೊಂದಿದೆ.
ಬಯೋ ಡೈಜಿಸ್ಟರ್ ಸೆಪ್ಟಿಕ್ ಟ್ಯಾಂಕ್ ಸದ್ಯದಲ್ಲೇ ಕರ್ನಾಟಕದಲ್ಲಿ ಪರಿಚಯಿಸಲಾಗುತ್ತಿದ್ದು, ಇದರ ಡಿಲರ್ಶಿಪ್ ಹಾಗೂ ರಿಟೇಲ್ ಮಾರಾಟಕ್ಕಾಗಿ ಮೇಡ್ ಇನ್ ಇಂಡಿಯಾ ಎಂಐಐ ಪ್ರೈ. ಲಿ. ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ.
ಬಯೋ ಡೈಜಿಸ್ಟರ್ ಸೆಪ್ಟಿಕ್ ಟ್ಯಾಂಕ್ ಸದ್ಯದಲ್ಲೇ ಕರ್ನಾಟಕದಲ್ಲಿ ಪರಿಚಯಿಸಲಾಗುತ್ತಿದ್ದು, ಇದರ ಡಿಲರ್ಶಿಪ್ ಹಾಗೂ ರಿಟೇಲ್ ಮಾರಾಟಕ್ಕಾಗಿ ಮೇಡ್ ಇನ್ ಇಂಡಿಯಾ ಎಂಐಐ ಪ್ರೈ. ಲಿ. ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ.
ಮಾರ್ಕೆಟಿಂಗ್ ಪಾರ್ಟ್ನರ್:
ಮೇಡ್ ಇನ್ ಇಂಡಿಯಾ ಎಂಐಐ ಪ್ರೈ. ಲಿ.
2ನೇ ಮಹಡಿ, ರುಪೀ ಮಾಲ್, ಬೈಂದೂರು
www.madeinindiamii.com
enquiry@madeinindiamii.com
+91 8951017080