ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹೊನ್ನಾವರದ ಆಸ್ಪತ್ರೆಯಿಂದ ಉಡುಪಿಯ ಆಸ್ಪತ್ರೆಗೆ ತೆರಳುತ್ತಿದ್ದ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಸಂಗ್ರಹಣಾ ಕೌಂಟರ್’ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಭೀಕರ ಘಟನೆ ತಾಲೂಕಿನ ಶಿರೂರು ಟೋಲ್ ಪ್ಲಾಜಾದಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯಗಳಾಗಿದೆ.
ಘಟನೆಯಲ್ಲಿ ಹೊನ್ನಾವರದ ಹಾಡಗೇರಿಯ ನಿವಾಸಿಗಳಾದ ಹೃದಯ ರೋಗಿಯಾದ ಗಜಾನನ ಗಣಪತಿ ನಾಯ್ಕ್ ಹಾಗೂ ಅವರ ಸಂಬಂದಿಗಳಾದ ಮಂಜುನಾಥ ನಾಯ್ಕ್, ಲೋಕೇಶ್ ನಾಯ್ಕ್ ಜೋತಿ ನಾಯ್ಕ್, ಮೃತಪಟ್ಟಿದ್ದಾರೆ, ಅಂಬುಲೆನ್ಸ್ ಒಳಗಿದ್ದ ಗಣೇಶ್ ನಾಯ್ಕ್, ಗೀತಾ ಗಜಾನನ ನಾಯ್ಕ್, ಶಶಾಂಕ್ ನಾಯ್ಕ, ಅಂಬುಲೆನ್ಸ್ ಚಾಲಕ ರೋಷನ್ ಹಾಗೂ ಟೋಲ್ ಸಿಬ್ಬಂದಿ ಶಂಬಾಜಿ ಘೋರ್ಪಡೆರವರು ಗಾಯಗೊಂಡಿದ್ದು ಹೆಚ್ವಿನ ಚಿಕಿತ್ಸೆ ಬಗ್ಗೆ ಉಡುಪಿ ಮತ್ತು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಫಾಸ್ಟ್ ಟ್ರ್ಯಾಕಿನಲ್ಲಿ ಟೋಲ್ ಗೇಟ್ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಎದ್ದುಕಾಣುತ್ತಿದ್ದು, ಎರಡು ಬದಿಗಳಲ್ಲಿ ಬ್ಯಾರಿಕೇಟ್ ಇಟ್ಟಿರುವುದಲ್ಲದೇ ಅಲ್ಲಿಯೇ ಅದೇ ಮಾರ್ಗದಲ್ಲಿ ದನವೊಂದು ಮಲಗಿಕೊಂಡಿತ್ತು. ಅಂಬುಲೆನ್ಸ್ ಹತ್ತಿರ ಬಂದ ಬಳಿಕ ಅಲ್ಲಿನ ಸಿಬ್ಬಂದಿ ಬ್ಯಾರಿಕೇಟ್ ತೆರವುಗೊಳಿಸಿ ಹೋಗಿದ್ದಾರೆ. ಇದೆಲ್ಲದರಿಂದ ವಿಚಲಿತರಾದ ಚಾಲಕ ಬ್ರೇಕ್ ಹಾಕಿದ್ದು, ಪರಿಣಾಮವಾಗಿ ಫ್ಲಾಝಾದಲ್ಲಿನ ಟೋಲ್ ಸಂಗ್ರಹಣಾ ಕೌಂಟರ್’ಗೆ ಢಿಕ್ಕಿ ಹೊಡೆದು ಅಬ್ಸುಲೆನ್ಸ್ ತಿರುಗಿ ಮಗುಚಿ ಬಿದ್ದಿದೆ. ಅಫಘಾತದ ರಭಸಕ್ಕೆ ಹಿಂಬದಿಯ ಬಾಗಿಲು ತೆಗೆದುಕೊಂಡಿದ್ದು ರೋಗಿ ಸೇರಿದಂತೆ ಅದರೊಳಗಿದ್ದ ಎಲ್ಲರೂ ಹೊರಕ್ಕೆಸೆಯಲ್ಪಟ್ಟಿದ್ದಾರೆ.
ಘಟನೆಯ ಭೀಕರ ದೃಷ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬೈಂದೂರು ಪೊಲೀಸ್ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:
► ಭೀಕರ ಅಪಘಾತ: ಶಿರೂರು ಟೋಲ್ ಪ್ಲಾಜಾದಲ್ಲಿ ಮಗುಚಿದ ಅಂಬ್ಯುಲೆನ್ಸ್. ಮೂವರ ಸಾವು, ಓರ್ವ ಗಂಭೀರ – https://kundapraa.com/?p=60757 .
► ಶಾಲೆಗೆ ಹೊರಟಿದ್ದ ಬಾಲಕಿ ಕುಸಿದುಬಿದ್ದು ಸಾವು – https://kundapraa.com/?p=60749 .