ಭೀಕರ ಅಪಘಾತ: ಶಿರೂರು ಟೋಲ್ ಪ್ಲಾಜಾದಲ್ಲಿ ಮಗುಚಿದ ಅಂಬ್ಯುಲೆನ್ಸ್. ಮೂವರ ಸಾವು, ಓರ್ವ ಗಂಭೀರ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು
: ಹೊನ್ನಾವರದ ಶ್ರೀದೇವಿ ಆಸ್ಪತ್ರೆಯಿಂದ ಉಡುಪಿ ಆಸ್ಪತ್ರೆಗೆ ಹೋಗುತ್ತಿದ್ದ ಅಂಬುಲೆನ್ಸ್, ಟೋಲ್ ದಾರಿಯಲ್ಲಿ ಮಲಗಿದ್ದ ದನವನ್ನು ತಪ್ಪಿದಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಸಂಗ್ರಹಣಾ ಕೌಂಟರ್’ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಭೀಕರ ಘಟನೆ ತಾಲೂಕಿನ ಶಿರೂರು ಟೋಲ್ ಪ್ಲಾಜಾದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

Call us

Click Here

ಘಟನೆಯಲ್ಲಿ ಹೊನ್ನಾವರದ ಹಾಡಗೇರಿಯ ನಿವಾಸಿಗಳಾದ ಹೃದಯ ರೋಗಿಯಾದ ಗಜಾನನ ಗಣಪತಿ ನಾಯ್ಕ್ ಹಾಗೂ ಅವರ ಸಂಬಂದಿಗಳಾದ ಮಂಜುನಾಥ ನಾಯ್ಕ್, ಲೋಕೇಶ್ ನಾಯ್ಕ್ ಜೋತಿ ನಾಯ್ಕ್, ಮೃತಪಟ್ಟಿದ್ದಾರೆ, ಅಂಬುಲೆನ್ಸ್ ಒಳಗಿದ್ದ ಗಣೇಶ್ ನಾಯ್ಕ್, ಗೀತಾ ಗಜಾನನ ನಾಯ್ಕ್, ಶಶಾಂಕ್ ನಾಯ್ಕ, ಅಂಬುಲೆನ್ಸ್ ಚಾಲಕ ರೋಷನ್ ಹಾಗೂ ಟೋಲ್ ಸಿಬ್ಬಂದಿ ಶಂಬಾಜಿ ಘೋರ್ಪಡೆರವರು ಗಾಯಗೊಂಡಿದ್ದು ಹೆಚ್ವಿನ ಚಿಕಿತ್ಸೆ ಬಗ್ಗೆ ಉಡುಪಿ ಮತ್ತು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

Update about this news► ಶಿರೂರು ಟೋಲ್ ಪ್ಲಾಜಾದಲ್ಲಿ ಭೀಕರ ಅಂಬುಲೆನ್ಸ್ ಅಪಘಾತ. ನಾಲ್ವರ ದುರ್ಮರಣ, ನಾಲ್ವರಿಗೆ ಗಾಯ – https://kundapraa.com/?p=60776 .

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಾಟ ಮಾಡುತ್ತಿದ್ದ  ಅಂಬ್ಯುಲೆನ್ಸ್‌ ವಾಹನ ಶಿರೂರು ಟೋಲ್‌ ಪ್ಲಾಝಾ ಬಳಿಗೆ ಬರುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆಯಲ್ಲಿ ಟೋಲ್‌ ಪ್ಲಾಝಾದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಬ್ಯಾರಿಕೇಟ್ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಮುಂದಾಗಿದ್ದಾರೆ. ಆದರೆ ವೇಗವಾಗಿ ಬಂದ ಅಂಬ್ಯುಲೆನ್ಸ್‌ ಟೋಲ್‌ ಫ್ಲಾಝಾದಲ್ಲಿನ ಟೋಲ್ ಸಂಗ್ರಹಣಾ ಕೌಂಟರ್’ಗೆ ಢಿಕ್ಕಿ ಹೊಡೆದಿದೆ. ಅಬ್ಸುಲೆನ್ಸ್ ತಿರುಗಿ ಮಗುಚಿ ಬಿದ್ದಿದ್ದು, ಅಫಘಾತದ ರಭಸಕ್ಕೆ ಹಿಂಬದಿಯ ಬಾಗಿ ತೆಗೆದು ರೋಗಿ ಸೇರಿದಂತೆ ಅದರೊಳಗಿದ್ದ ಎಲ್ಲರೂ ಹೊರಕ್ಕೆಸೆಯಲ್ಪಟ್ಟಿದ್ದಾರೆ.

ಗಾಯಗೊಂಡವರನ್ನು ಟೋಲ್ ಸಿಬ್ಬಂದಿಗಳು ತಕ್ಷಣ ಟೋಲ್ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಕೊಂಡೊಯ್ದಿದ್ದಾರೆ. ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

Click here

Click here

Click here

Click Here

Call us

Call us

Leave a Reply