ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ: ಪ್ರತಿಭೆ ನಿಮ್ಮದು ವೇದಿಕೆ ನಮ್ಮದು – ಯಕ್ಷಗಾನ ತಾಳಮದ್ದಲೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ 73ನೇ ಸರಣಿ ಕಾರ್ಯಕ್ರಮ ಇತ್ತೀಚೆಗೆ ಗೊಂಬೆ ಮನೆಯಲ್ಲಿ ಸಾಂಗವಾಗಿ ಜರುಗಿತು.

Call us

Click Here

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ, ಯಕ್ಷಗಾನ ಕಲಾವಿದರಾದ ಸುಜಯೇಂದ್ರ ಹಂದೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಮೇರಿಕಾದಲ್ಲಿ ಇಂಜಿನಿಯರ್ ಆಗಿರುವ ನಾಗರಾಜ ಪಾದೂರು, ಯಕ್ಷಗಾನ ತಾಳಮದ್ದಲೆ ಪ್ರಾಯೋಜಕರು ಹಾಗೂ ತೆಕ್ಕಟ್ಟೆಯ ಗಣೇಶ್ ಕ್ಲಾತ್ ಸ್ಟೋರ‍್ಸ್ ಮಾಲಕರಾದ ಅನಂತ ನಾಯಕ್, ಪಾವನಾ ಐತಾಳ್ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ಉಪಸ್ಥಿತರಿದ್ದರು.

ಅಕಾಡೆಮಿಯ ವತಿಯಿಂದ ಅನಂತ ನಾಯಕ್ ಹಾಗೂ ಪಾವನಾ ಐತಾಳ್ ರವರನ್ನು ಸನ್ಮಾನಿಸಲಾಯಿತು. ಪಾವನಾ ಐತಾಳ್ ರ ಭಾಗವತಿಕೆ ಹಾಗೂ ನಿರ್ದೇಶನದಲ್ಲಿ ಯಕ್ಷಗಾನ ಕಲಾ ರಂಗ, ನೀರಸಾಲೆ, ಕೋಟೇಶ್ವರ ಇದರ ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಲೆ ಜಾಂಬವತಿ ಕಲ್ಯಾಣ ನೆರೆದ ಪ್ರೇಕ್ಷಕರನ್ನು ರಂಜಿಸಿತು. ಶಿಕ್ಷಕ ನಾಗೇಶ್ ಶ್ಯಾನುಭಾಗ್ ರವರು ಕಾರ್ಯಕ್ರಮ ನಿರೂಪಿಸಿದರು. ಉದಯ ಭಂಡಾರ್‌ಕಾರ್ ಹಟ್ಟಿಯಂಗಡಿ ಇವರು ವಂದನಾರ್ಪಣೆಗೈದರು.

Leave a Reply